BSNL New Plan: ಕಡಿಮೆ ಬೆಲೆಗೆ ಕಾಲ್-ಮೆಸೇಜ್ ಸೀಮೀತ ರೀಚಾರ್ಜ್ ಯೋಜನೆ
ಬೆಂಗಳೂರು, ಜನವರಿ 28: ಭಾರತ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತರ ಖಾಸಗಿ ಟೆಲಿಕಾಂ ಕಂಪನಿಗಳಿಗಿಂತಲೂ ಕಡಿಮೆ ಬೆಲೆಗೆ ವಾಯ್ಸ್ ಕಾಲ್ (ಕರೆಗಳು) ಮತ್ತು ಎಸ್‌ಎಂಎಸ್ ಯೋಜನೆ ಘೋಷಿಸಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ನಿರ್ದೇಶನ ಬೆನ್ನಲ್ಲೆ ಗ್ರಾಹಕರಿಗೆ ಬಜೆಟ್ ಸ್ನೇಹಿ ರಿಚಾರ್ಜ್ ಪ್ಯಾಕ್ ಘೋಷಿಸಿದೆ. ಇದರ ಬೆಲೆ ಇತರ VI, Airtel, Jio ಪ್ಯಾಕ್‌ಗಿಂತಲೂ ಕಡಿಮೆ ಇದೆ.
ಕೇವಲ ಧ್ವನಿ ಕರೆಗಳು ಮತ್ತು ಸಂದೇಶಗಳನ್ನು ಒಳಗೊಂಡ ರೀಚಾರ್ಜ್ ಯೋಜನೆ ಬಯಸಿದ್ದರೆ ನಿಮಗಾಗಿಯೇ ಬಿಎಸ್‌ಎನ್‌ಎಲ್ ಅತ್ಯುತ್ತಮ ಯೋಜನೆ ಘೋಷಿಸಿದೆ. ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ ಖಾಸಗಿ ಟಿಲಿಕಾಂ ಸಂಸ್ಥೆಗಳಿಗೆ ಇತ್ತೀಚೆಗೆ TRAI ಗ್ರಾಹಕ ಸ್ನೇಹಿ ವಾಯ್ಸ್ ಕಾಲ್, ಸಂದೇಶಗಳಿಗೆ ಸಿಮೀತವಾಗಿ, ಡೇಟಾ ಪ್ಯಾಕ್ ಇಲ್ಲದ ಯೋಜನೆ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.

ರಿಚಾರ್ಜ್ ಯೋಜನೆಗಳು ಕೇವಲ ಕರೆಗಳು ಮತ್ತು ಎಸ್‌ಎಂಎಸ್ ಸಂದೇಶಗಳಿಗೆ ಆದ್ಯತೆ ನೀಡುವಂತಿರಲಿ ಎಂದು ಹೇಳಿತ್ತು. ಏಕೆಂದರೆ ಇಂಟರ್‌ನೆಟ್ ಅಗತ್ಯವಿದಲ್ಲ ಗ್ರಾಹಕರು ಸಹ ದುಬಾರಿ ಹಣ ನೀಡಿ ಡೇಟಾ ಪ್ಯಾಕ್ ಬೇಡವಾದರೂ ಪಡೆಯಬೇಕಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕೇವಲ ಕರೆಗಳೂ, ಎಸ್‌ಎಂಎಸ್ ಯೋಜನೆ ಪಡೆಯುವವರಿಗೆ ಆದ್ಯತೆ ನೀಡುವಂತೆ ತಿಳಿಸಿತ್ತು.
ಈಗಾಗಲೇ ಏರ್‌ಟೆಲ್, ಜಿಯೋ ಹಾಗೂ ವಡಾಫೋನ್ ಕಂಪನಿಗಳು ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್ ಗೆ ಸಿಮೀತವಾಗಿ ಯೋಜನೆ ಘೋಷಿಸಿವೆ. ಆದರೆ ಗ್ರಾಹಕರಿಗೆ ಈ ಪ್ಲಾನ್ ಪಡೆಯಲು ದುಬಾರಿ ಹಣ ನೀಡಬೇಕಾದ ಸ್ಥಿತಿ ಇತ್ತು. ಆದರೆ ಇದೀಗ ಆ ಆರ್ಥಿಕ ಸಮಸ್ಯೆಯನ್ನು BSNL ದೂರವಾಗಿಸಿದೆ.
ಖಾಸಗಿ ಸಂಸ್ಥೆಗಳ ಪ್ಲಾನ್ ದುಬಾರಿ ಎಂಬ ಕಾರಣಕ್ಕಾಗಿ ಬಳಕೆದಾರರು ಕೇವಲ ರೂ.439 ಸೇರಿದಂತೆ ಕಡಿಮೆ ಬೆಲೆ ವಿವಿಧ ರೀಚಾರ್ಜ್ ಯೋಜನೆ ನೀಡುತ್ತಿರುವ ಬಿಎಸ್ಎನ್‌ಎಲ್ ನತ್ತ ಬಳಕೆದಾರರು ವಾಲುತ್ತಿದ್ದಾರೆ. ಡೇಟಾ ಪ್ಯಾಕ್ ಇಲ್ಲದೇ BSNL ವಿವಿಧ ಯೋಜನೆಗಳ ಮಾಹಿತಿ ಇಲ್ಲಿದೆ.
BSNL ರೂ 439 ರಿಚಾರ್ಜ್ ಪ್ಲಾನ್ ವಿವರ
ದೇಶಾದ್ಯಂತ ಬಳಕೆದಾರರಿಗೆ ಕೈಗೆಟುಕುವಂತೆ ಕೇವಲ 439 ರೂಪಾಯಿ ಧ್ವನಿ ಕರೆಗಳು ಮತ್ತು ಸಂದೇಶಕ್ಕೆ ಮಾತ್ರ ಸಿಮೀತವಾಗಿ ಪ್ಲಾನ್ ಅನ್ನು BSNL ಬಿಡುಗಡೆ ಮಾಡಿದೆ. ಈ ಯೋಜನೆಯು 90 ದಿನಗಳ ಅವಧಿ ಹೊಂದಿದ್ದು, ನೀವು ಅನಿಯಮಿತ ಕರೆ, ಸಂದೇಶ ಕಳುಹಿಸಬಹುದಾಗಿದೆ.
ಖಾಸಗಿ ಟೆಲಿಕಾಂ ಕಂಪನಿಗಳ ದುಬಾರಿ ಪ್ಲಾನ್, ಮಾಹಿತಿ
ಇದೇ ಮೂರು ತಿಂಗಳ ವ್ಯಾಲಿಡಿಟಿಯ ಯೋಜನೆಗೆ ಜಿಯೋ ರೂ. 448ಗೆ 84 ದಿನಗಳು ಹಾಗೂ ರೂ. 1748ಗೆ 336 ದಿನಗಳ ಅವಧಿ ಹೊಂದಿದ ಎರಡು ರೀತಿಯ ಯೋಜನೆ ಬಿಡುಗಡೆ ಮಾಡಿತ್ತು. ಇನ್ನೂ ಏರ್‌ಟೆಲ್ 84 ದಿನ ಇದೇ ಪ್ಲಾನ್‌ಗೆ ರೂ. 469 ಚಾರ್ಜ್ ಮಾಡಿದರೆ, 365 ದಿನಗಳ ಅವಧಿಗೆ ರೂ. 1849 ಪ್ಲಾನ್ ನೀಡಿದೆ. ಇನ್ನು ವಡಾಫೋನ್ ರೂ. 1460 ಗೆ 270 ದಿನಗಳ ಅವಧಿಯ ಪ್ಲಾನ್ ನೀಡುತ್ತದೆ.
ಈ ಖಾಸಗಿ ಸಂಸ್ಥೆಗಳ ಪ್ಲಾನ್ ದುಬಾರಿ ಕಾರಣಕ್ಕಾಗಿ ಬಳಕೆದಾರರು ತತ್ತರಿಸಿದ್ದರು. ಅವರಿಗೆ ಅನುಕೂಲವಾಗುವಂತೆ ಬಿಎಸ್‌ಎನ್‌ಎಲ್ ಕಡಿಮೆ ಬೆಲೆಗೆ ಕರೆಗಳು, ಎಸ್‌ಎಂಎಸ್‌ಗೆ ಸಿಮೀತವಾಗಿ ಯೋಜನೆ ನೀಡಿದೆ. ಈ ಯೋಜನೆಗೆ ವ್ಯಾಪಕ ಸ್ಪಂದನೆ ವ್ಯಕ್ತಪವಾಗುತ್ತಿದೆ..












Click it and Unblock the Notifications