ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಓ' ರಕ್ತದ ಗುಂಪಿನವರಿಗೆ ಕೊರೊನಾ ವೈರಸ್ ಕಡಿಮೆ ಅಪಾಯಕಾರಿ, ಎ, ಎಬಿಗೆ ಹೆಚ್ಚು ಅಪಾಯ?

|
Google Oneindia Kannada News

ನವದೆಹಲಿ, ಅಕ್ಟೋಬರ್ 16: ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ದೇಶದೆಲ್ಲೆಡೆ ವ್ಯಾಪಿಸುತ್ತಲೇ ಇದೆ. ಇದು ಜೀವನ ಶೈಲಿ ಮತ್ತು ಜನರ ಹವ್ಯಾಸಗಳನ್ನೇ ಬದಲಿಸಿದೆ. ಹಾಗೆಯೇ ಕೊರೊನಾ ವೈರಸ್ ಸೋಂಕು ಉಂಟುಮಾಡುವ ಲಕ್ಷಣಗಳಿವು ಎಂದು ನೀಡುತ್ತಿರುವ ಪಟ್ಟಿಯಲ್ಲಿ ವಿಜ್ಞಾನಿಗಳು ಬದಲಾವಣೆ ಮಾಡುತ್ತಲೇ ಇದ್ದಾರೆ. ಕೊರೊನಾ ವೈರಸ್ ಸುತ್ತಲೂ ಅನೇಕ ಬಗೆಯ ಸಂಶೋಧನೆಗಳು ನಡೆಯುತ್ತಿವೆ.

ಹೀಗೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ಇಬ್ಬರು ಸಂಶೋಧಕರು ನಾವಲ್ ಕೊರೊನಾ ವೈರಸ್‌ನ ಅಪಾಯದ ಸ್ವರೂಪವು ವ್ಯಕ್ತಿಗಳ ರಕ್ತದ ಮಾದರಿಗೆ ಅನುಗುಣವಾಗಿ ಇರುತ್ತದೆ. ಕೋವಿಡ್‌ನ ತೀವ್ರತೆಯಲ್ಲಿ ಅವರ ರಕ್ತದ ಮಾದರಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಪತ್ತೆಹಚ್ಚಿದ್ದಾರೆ.

ಕೊವಿಡ್ 19 ರೋಗಿಗಳಿಗೆ ಮಧುಮೇಹವಿಲ್ಲದಿದ್ದರೂ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಕೊವಿಡ್ 19 ರೋಗಿಗಳಿಗೆ ಮಧುಮೇಹವಿಲ್ಲದಿದ್ದರೂ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆ

ಇಬ್ಬರು ಸ್ವತಂತ್ರ ಸಂಶೋಧಕರು ನಡೆಸಿದ ಸಂಶೋಧನೆಯು, 'ಓ' ಗುಂಪಿನ ರಕ್ತವುಳ್ಳ ವ್ಯಕ್ತಿಗಳಿಗೆ ಈ ಮಾರಕ ವೈರಸ್ ಅಷ್ಟಾಗಿ ಬಾಧಿಸುವುದಿಲ್ಲ ಎಂಬುದನ್ನು ಬಹಿರಂಗಪಡಿಸಿದೆ. ಹಾಗೆಯೇ 'ಎ' ಮತ್ತು 'ಎಬಿ' ಗುಂಪಿನ ರಕ್ತವುಳ್ಳವರಿಗೆ ಕೊರೊನಾ ವೈರಸ್ ಹೆಚ್ಚು ಅಪಾಯ ಉಂಟುಮಾಡುತ್ತದೆ ಎಂದು ತಿಳಿಸಿದೆ.

ರಕ್ತದ ಮಾದರಿಗೆ ಅನುಗುಣವಾಗಿ ಹಾನಿ

ರಕ್ತದ ಮಾದರಿಗೆ ಅನುಗುಣವಾಗಿ ಹಾನಿ

ಕೊರೊನಾ ವೈರಸ್ ಸೋಂಕು ನಮ್ಮ ದೇಹದಲ್ಲಿ ಉಂಟುಮಾಡುವ ಹಾನಿಯು ನಮ್ಮ ದೇಹದ ರಕ್ತದ ಮಾದರಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ ಎಂದು ಬ್ಲಡ್ ಅಡ್ವಾನ್ಸಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನ ತಿಳಿಸಿದೆ. ಇದು ಕೋವಿಡ್ ಸಂಬಂಧಿಸಿದ ಕಾಯಿಲೆಯ ತೀವ್ರತೆ ಮತ್ತು ಆರೋಗ್ಯ ಸಮಸ್ಯೆಗಳ ನಡುವೆ ಸಂಬಂಧ ಕಲ್ಪಿಸಿದೆ.

ನಾಲ್ಕು ಲಕ್ಷಕ್ಕೂ ಅಧಿಕ ವಿವರ

ನಾಲ್ಕು ಲಕ್ಷಕ್ಕೂ ಅಧಿಕ ವಿವರ

ಕೋವಿಡ್ 19ಕ್ಕೆ ತುತ್ತಾದ 4,73,000 ವ್ಯಕ್ತಿಗಳ ಡೇಟಾಗಳನ್ನು ಸಂಗ್ರಹಿಸಿ ಅವುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯ ಮತ್ತು ಒಡೆನ್ಸ್ ವಿಶ್ವವಿದ್ಯಾಲಯ ಆಸ್ಪತ್ರೆಯ ತಂಡ ಈ ಸಂಶೋಧನೆ ನಡೆಸಿದೆ.

ಕೊವಿಡ್ 19 ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆಯೇ ಪ್ರಮುಖ ಕಾರಣವೇ?ಕೊವಿಡ್ 19 ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆಯೇ ಪ್ರಮುಖ ಕಾರಣವೇ?

'ಓ' ಮಾದರಿಗೆ ಕಡಿಮೆ ಅಪಾಯ

'ಓ' ಮಾದರಿಗೆ ಕಡಿಮೆ ಅಪಾಯ

ಈ ಮಾಹಿತಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಬಳಿಕ, 'ಓ' ಮಾದರಿ ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳಿಗೆ ಕೋವಿಡ್ ಅಪಾಯ ಕಡಿಮೆ ಹಾಗೂ 'ಎ' ಮತ್ತು 'ಎಬಿ' ಗುಂಪಿನ ರಕ್ತವುಳ್ಳವರಿಗೆ ಹೆಚ್ಚು ತೊಂದರೆ ಎದುರಾಗುತ್ತದೆ ಎಂಬ ಅಂತಿಮ ಅಭಿಪ್ರಾಯಕ್ಕೆ ಬರಲಾಗಿದೆ.

ಎ, ಎಬಿಗೆ ಕೃತಕ ಉಸಿರಾಟ ಸಮಸ್ಯೆ ಹೆಚ್ಚು

ಎ, ಎಬಿಗೆ ಕೃತಕ ಉಸಿರಾಟ ಸಮಸ್ಯೆ ಹೆಚ್ಚು

ಇದೇ ರೀತಿಯ ಎರಡನೆಯ ಅಧ್ಯಯನವು ಕೆನಡಾದ ವ್ಯಾಂಕೋವರ್‌ನಲ್ಲಿ 95 ಕೋವಿಡ್ ರೋಗಿಗಳ ವಿವರಗಳ ಮೇಲೆ ನಡೆದಿದೆ. 'ಓ' ರಕ್ತದ ಮಾದರಿಯ ರೋಗಿಗಳಿಗೆ ಹೋಲಿಸಿದರೆ 'ಎ' ಮತ್ತು 'ಎಬಿ' ರಕ್ತದ ಮಾದರಿಗಳ ರೋಗಿಗಳಿಗೆ ಹೆಚ್ಚು ಯಾಂತ್ರಿಕ ವೆಂಟಿಲೇಷನ್ ಅಗತ್ಯ ಬಿದ್ದಿರುವ ಆಸಕ್ತಿಕರ ಸಂಗತಿಯನ್ನು ಅದು ಕಂಡುಕೊಂಡಿದೆ. ಐಸಿಯುಗೆ ದಾಖಲಾದ ರೋಗಿಗಳ ವಿಚಾರದಲ್ಲಿ ಕೂಡ ಇದೇ ರೀತಿಯ ಫಲಿತಾಂಶ ಬಂದಿದೆ.

Recommended Video

ಮತ್ತೊಂದು ಬ್ರಹ್ಮಾಸ್ತ್ರ ರೆಡಿ ಮಾಡ್ತಿದೆ India..! | India Hypersonic Cruise Missile | Oneindia Kannada

English summary
Blood group O positive least vulnarable to COVID-19, A and AB most risk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X