Get Updates
Get notified of breaking news, exclusive insights, and must-see stories!

R. Venkataramani Biography : ನೂತನ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಯಾರು?

ನವದೆಹಲಿ, ಸೆಪ್ಟೆಂಬರ್ 29: ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾದ ಆರ್ ವೆಂಕಟರಮಣಿ ಅವರನ್ನು ಮೂರು ವರ್ಷಗಳ ಅವಧಿಗೆ ಭಾರತದ ಅಟಾರ್ನಿ ಜನರಲ್ ಆಗಿ ಬುಧವಾರ ನೇಮಿಸಲಾಗಿದೆ.

ಆರ್‌. ವೆಂಕಟರಮಣಿ ಅವರನ್ನು ಅಟಾರ್ನಿ ಜನರಲ್ ಆಗಿ ನೇಮಕ ಮಾಡುವ ಕುರಿತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ವೆಂಕಟರಮಣಿ ಪ್ರಸ್ತುತ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಕೆಕೆ ವೇಣುಗೋಪಾಲ್ ಅವರ ಅವಧಿಯು ಸೆಪ್ಟೆಂಬರ್ 30, 2022 ರಂದು ಕೊನೆಗೊಳ್ಳುತ್ತದೆ.

ಪ್ರಸ್ತುತ ಅಟಾರ್ನಿ ಜನರಲ್ ಆಗಿರುವ ಕೆ ಕೆ ವೇಣುಗೋಪಾಲ್ ಉತ್ತರಾಧಿಕಾರಿ ಆಗಿ ಅಕ್ಟೋಬರ್ 1, 2022 ರಿಂದ ಜಾರಿಗೆ ಬರುವಂತೆ ಆರ್ ವೆಂಕಟರಮಣಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರ ಅಧಿಕಾರಾವಧಿಯು ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ನೂತನ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿರುವ ಆರ್ ವೆಂಕಟರಮಣಿ ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

Biography: Who is new Attorney General for India R Venkataramani, know here.

42 ವರ್ಷದ ಅನುಭವ ಹೊಂದಿರುವ ವೆಂಕಟರಮಣಿ:

ನೂತನ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿರುವ ಆರ್ ವೆಂಕಟರಮಣಿ ವಕೀಲರಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ 42 ವರ್ಷಗಳ ಅಭ್ಯಾಸದ ಅನುಭವವನ್ನು ಹೊಂದಿದ್ದಾರೆ. ಜುಲೈ 1977ರಲ್ಲಿ ತಮಿಳುನಾಡಿನ ಬಾರ್ ಕೌನ್ಸಿಲ್‌ಗೆ ಸೇರಿದ್ದು, 1979 ರಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಪಿಪಿ ರಾವ್ ಶಿಷ್ಯರಾಗಿ ಸೇರಿದರು. ತದನಂತರ 1982 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸ್ವತಂತ್ರ ಅಭ್ಯಾಸವನ್ನು ಶುರು ಮಾಡಿದರು. ಅವರನ್ನು 1997 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲರಾಗಿ ನೇಮಿಸಲಾಯಿತು. ನಂತರ 2010 ರಲ್ಲಿ ಕಾನೂನು ಆಯೋಗದ ಸದಸ್ಯರಾಗಿ ಮತ್ತು 2013 ರಲ್ಲಿ ಮುಂದಿನ ಅವಧಿಗೆ ನೇಮಿಸಲಾಯಿತು.

ಹಲವು ವ್ಯಾಜ್ಯಗಳ ಪರ ವಾದ ಮಂಡನೆ:

ಸಾಂವಿಧಾನಿಕ ಕಾನೂನು, ಪರೋಕ್ಷ ತೆರಿಗೆಗಳ ಕಾನೂನು, ಮಾನವ ಹಕ್ಕುಗಳ ಕಾನೂನು, ನಾಗರಿಕ ಮತ್ತು ಕ್ರಿಮಿನಲ್ ಕಾನೂನು, ಗ್ರಾಹಕ ಕಾನೂನು ಮತ್ತು ಸೇವೆಗಳಿಗೆ ಸಂಬಂಧಿಸಿದ ಕಾನೂನಿನ ವಿವಿಧ ಶಾಖೆಗಳಲ್ಲಿ ಆರ್ ವೆಂಕಟರಮಣಿ ಅಭ್ಯಾಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಸೇರಿದಂತೆ ಹಲವಾರು ರಾಜ್ಯ ಸರ್ಕಾರ, ವಿಶ್ವವಿದ್ಯಾನಿಲಯಗಳು, ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಂಬಂಧಿಸಿದಂತೆ ಹಲವು ವ್ಯಾಜ್ಯಗಳನ್ನು ಉನ್ನತ ನ್ಯಾಯಾಲಯ ಮತ್ತು ಹೈಕೋರ್ಟ್‌ಗಳಲ್ಲಿ ಪ್ರತಿನಿಧಿಸಿದ್ದಾರೆ.

ಅಂತಾರಾಷ್ಟ್ರೀಯ ಪ್ರಾತಿನಿಧ್ಯಗಳು:

2001ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮತ್ತು ಇಂಟರ್ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್‌ಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಲು ಇದೇ ವೆಂಕಟರಮಣಿ ಅವರನ್ನು ಆಹ್ವಾನಿಸಲಾಗಿತ್ತು. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ (ICESCR), 1966ರ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಐಚ್ಛಿಕ ಪ್ರೋಟೋಕಾಲ್ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ವರದಿ ಸಲ್ಲಿಸಲು ಕಾರ್ಯಾಗಾರವನ್ನು ವಿನ್ಯಾಸಗೊಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+