Viral Video: ಅಬ್ಬಾ ಏನ್ ಟ್ರಕ್‌ ಡ್ರೈವರ್‌ ಟೈಮಿಂಗ್‌: ಕೊಂಚ ಮಿಸ್‌ ಆಗಿದ್ರು, ಬಡ ಜೀವ ಖಲ್ಲಾಸ್‌

ವೈರಲ್‌ ವಿಡಿಯೋಗಳನ್ನು ಸುಮ್ನೆ ನೋಡ್ತಾ ಇದ್ದರೆ, ಮೈ ಜುಂ ಅನಿಸುತ್ತದೆ. ಈ ವಿಡಿಯೋಗಳು ರಸ್ತೆಯಲ್ಲಿ ತಿರುಗಾಡುವಾಗ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ದೃಶ್ಯ ಕೈಗನ್ನಡಿಯಾಗಿದೆ. ನಾವು ರಸ್ತೆಯಲ್ಲಿ ಹೊರಟಾಗ ಯಾವುದೇ ವಸ್ತುವನ್ನು ಹಗರುವಾಗಿ ಪರಿಗಣಿಸಬಾರದು ಎಂಬುದಕ್ಕೆ ಈ ದೃಶ್ಯ ಬೆಸ್ಟ್ ಎಕ್ಸಾಮಪಲ್‌..

ಈ ದೃಶ್ಯವನ್ನು ಒಮ್ಮೆ ನೋಡಿದರೆ, ಪದೇ ಪದೇ ನೋಡ ಬೇಕೆಂದು ಅನಿಸುವುದಿಲ್ಲ. ಆದರೆ ಈ ಘಟನೆಯ ತೀವ್ರತೆ ನಿಮ್ಮ ಮನಸ್ಸಿಗೆ ನಾಟದೇ ಇರಲು ಸಾಧ್ಯವೇ ಇಲ್ಲ. ಅಬ್ಬಾ.. ಈ ದೃಶ್ಯ ಕಂಡ ಮೇಲೆ ರಸ್ತೆಯಲ್ಲಿ ಗಾಡಿ ಓಡಿಸುವುದು ಸಹ ದುಸ್ತರ ಎಂದು ಅನಿಸದೇ ಇರದು. ಏನಪ್ಪಾ ಈ ದ್ವಿಚಕ್ರವಾಹನ ಸವಾರರ ಲಕ್ ಚೆನ್ನಾಗಿದೆ ಎಂದು ತಿಳಿಯುತ್ತದೆ.

Bike Rider Narrowly Escapes Death in Heart-Stopping Accident with Bull in Bangalore

ರಸ್ತೆಯಲ್ಲಿ ಸಂಚರಿಸುವ ಬಿಡಾಡಿ ಪ್ರಾಣಿಗಳು ಸಹ ಕೆಲವೊಮ್ಮೆ ನೋವಿನ ಅಪಘಾತಗಳಿಗೆ ಕಾರಣವಾಗುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗೂಳಿಯೊಂದರಿಂದ ಬೈಕ್ ನಲ್ಲಿ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬರ ಅಪಘಾತವನ್ನು ಮಾಡಿದೆ. ಈ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಿಂದ ವರದಿಯಾಗಿದೆ.

ಆಗಿದ್ದೇನು?

ರಸ್ತೆಯಲ್ಲಿ ಗೂಳಿಯನ್ನು ಕರೆದುಕೊಂಡು ಒಬ್ಬ ಮಹಿಳೆ ಹೋಗುತ್ತಿದ್ದಳು. ಆಗ ಇನ್ನೊಂದು ಬದಿಯಿಂದ ಟೂವಿಲರ್‌ ಒಂದು ಬರುತ್ತಿತ್ತು. ಪಾಪಾ ಆ ಟೂವಿಲರ್‌ ಚಾಲಕನಿಗೆ ಏನು ಗೊತ್ತು ಹೇಳಿ, ತನ್ನ ಪಾಡಿಗೆ ತಾನು ಸ್ಕೂಟರ್‌ ಓಡಿಸುತ್ತಾ ಹೊರಟಿದ್ದಾನೆ. ಆಗಲೇ ಈ ಗೂಳಿ ತನ್ನ ಕಾಲಿಗೆ ಬುದ್ಧಿ ಹೇಳಿದೆ. ಅಬ್ಬಾ ಏನ್‌ ಜಿಗಿತಾ ರಿ ಈ ಗೂಳಿದ್ದು. ಇದನ್ನು ನೋಡಿದರೆ ಮೈ ಜೂಂ ಅನಿಸುತ್ತದೆ.

ಟೂ ವಿಲರ್‌ ತನ್ನ ಮುಂದೆ ಬರುತ್ತಿದ್ದಂತೆ ಗೂಳಿ ಕಾರ್ಯ ಪ್ರವೃತ್ತವಾಗಿ, ಟೂ ವಿಲರ್‌ ಚಾಲಕನ ಮೇಲೆ ಜಿಗಿದಿದೆ. ಭಯಕ್ಕೆ ಬಿದ್ದ ಚಾಲಕ ರಸ್ತೆಗೆ ಬಿದ್ದಿದ್ದಾನೆ. ಅದು ಆ ಚಾಲಕ ಸಮಯ ಎಷ್ಟು ಚೆನ್ನಾಗಿತ್ತು ಎಂದರೆ, ಈ ವಿಡಿಯೋ ನೋಡಿದರೆ ತಿಳಿಯುತ್ತದೆ.

ಇವನು ಬಿಳುವುದನ್ನು ತನ್ನ ಮೀರರ್‌ನಲ್ಲಿ ನೋಡಿದ್ದ ಟ್ರಕ್‌ ಚಾಲಕ, ಬ್ರೇಕ್ ಹಾಕಿ, ಟೂವಿಲರ್ ಚಾಲಕನ ಜೀವ ಉಳಿಸಿದ್ದಾನೆ. ಇಲ್ಲಾ ಅಂದ್ರೆ ಚಾಲಕನ ಕಥೆ ಬೇರೆಯದ್ದೆ ಆಗಿತ್ತು. ಟ್ರಕ್‌ ಚಾಲಕನ ಟೈಮಿಂಗ್ ಕಂಡು ನೆಟ್ಟಿಗರು ಫುಲ್ ಮಾರ್ಕ್ಸ್‌ ನೀಡಿದ್ದಾರೆ.

ಈ ವೈರಲ್ ವೀಡಿಯೊವನ್ನು @Madrassan_Pinky ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. "ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಗೂಳಿಯಿಂದ ಬೈಕ್ ಸವಾರ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ತಕ್ಷಣ ಟ್ರಕ್ ಚಾಲಕ ತಕ್ಷಣ ಟ್ರಕ್ ನಿಲ್ಲಿಸಿದ್ದಾನೆ. ವ್ಯಕ್ತಿ ಸ್ವಲ್ಪದರಲ್ಲೇ ಪಾರಾಗಿರುವುದು ಅದೃಷ್ಟ" ಎಂದು ಬಳಕೆದಾರರು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+