Bihar Exit Poll Republic TV: ಮಹಾಘಟಬಂಧನಕ್ಕೆ ದಿಗ್ವಿಜಯ
ಬಿಹಾರ ವಿಧಾನಸಭೆ ಕದನದ ಅಂತಿಮ ಘಟದತ್ತ ದೇಶ ಕಾತರದಿಂದ ನೋಡುತ್ತಿದೆ. ಮೂರನೇ ಹಾಗೂ ಅಂತಿಮ ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದೆ. ಫಲಿತಾಂಶ ಪ್ರಕಟವಾಗಲು ನವೆಂಬರ್ 10ರವರೆಗೆ ಕಾಯಬೇಕು. ಅದಕ್ಕೂ ಮುನ್ನ ವಿವಿಧ ಸಂಸ್ಥೆ ಮತ್ತು ವಾಹಿನಿಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಬಿಹಾರದಲ್ಲಿ ಯಾವ ರೀತಿಯ ಜನಾಭಿಪ್ರಾಯ ವ್ಯಕ್ತವಾಗಿದೆ ಎಂಬುದನ್ನು ಪ್ರಕಟಿಸಿವೆ.
ಆಡಳಿತಾರೂಢ ಬಿಜೆಪಿ-ಜೆಡಿಯು ಒಕ್ಕೂಟದ ಎನ್‌ಡಿಎ ಪುನಃ ಅಧಿಕಾರಕ್ಕೆ ಬಂದು ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆಯೇ ಅಥವಾ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ನೇತೃತ್ವದಲ್ಲಿ ಕಣಕ್ಕಿಳಿದಿರುವ ಮಹಾಘಟಬಂಧನ ಗದ್ದುಗೆಗೆ ಏರಿ ಸಂಪೂರ್ಣ ಚಿತ್ರಣ ಬದಲಿಸಲಿದೆಯೇ? ಎನ್‌ಡಿಎಗೆ ಸಡ್ಡು ಹೊಡೆದು ಹೊರಬಂದಿರುವ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಮ್ಯಾಜಿಕ್ ಮಾಡಲಿಯೇ ಎಂಬ ಕುತೂಹಲ ತೀವ್ರವಾಗಿದೆ. ಮತದಾನದ ಬಳಿಕ ರಿಪಬ್ಲಿಕ್ ವಾಹಿನಿ ಪ್ರಕಟಿಸಿದ ಎಕ್ಸಿಟ್ ಪೋಲ್ ಸಮೀಕ್ಷೆ ವಿವರ ಇಲ್ಲಿದೆ.

*ಮೈತ್ರಿಕೂಟದಲ್ಲಿ ಯಾರಿಗೆ ಎಷ್ಟು ಮತ?
ಎನ್‌ಡಿಎ ಮೈತ್ರಿಕೂಟ 91-117
ಮಹಾಘಟಬಂಧನ 138-118
ಎಲ್‌ಜೆಪಿ 5-8
ಇತರೆ 3-8
* ಪಕ್ಷವಾರು ಸೀಟುಗಳು
ಬಿಜೆಪಿ 60-75
ಜೆಡಿಯು 31-42
ಇತರೆ 10
ಆರ್‌ಜೆಡಿ 79-91
ಕಾಂಗ್ರೆಸ್ 24-30
ಎಲ್‌ಜೆಪಿ 5-8
ಎಡಪಕ್ಷ 15-17
ಎಚ್‌ಎಎಂ ಮತ್ತು ವಿಐಪಿ - 0
* ಶೇಕಡಾವಾರು ಮತಗಳು
ಎನ್‌ಡಿಎ ಮೈತ್ರಿಕೂಟ 37-39%
ಮಹಾಘಟಬಂಧನ 40-43%
ಎಲ್‌ಜೆಪಿ 7-9%
ಇತರೆ 11-14%
2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 53, ಜೆಡಿಯು 71, ಆರ್‌ಜೆಡಿ 80, ಕಾಂಗ್ರೆಸ್ 27, ಎಲ್‌ಜೆಪಿ 2, ಸಿಪಿಐಎಂ 4 ಸ್ಥಾನಗಳಲ್ಲಿ ಜಯಗಳಿಸಿದ್ದವು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications