Bihar Exit Poll: ಸಮೀಕ್ಷೆಗಳ ಸಮೀಕ್ಷೆಯಲ್ಲಿ ಯಾರಿಗೆ ಜಯ?

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಹಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ನೇತೃತ್ವದ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿವೆ ಎಂದು ಅಭಿಪ್ರಾಯ ಮಂಡಿಸಿವೆ. ಒಟ್ಟಾರೆ ಎಲ್ಲ ಸಮೀಕ್ಷೆಗಳನ್ನು ಒಂದೆಡೆ ಕಲೆಹಾಕಿ ಅವುಗಳನ್ನು ಅಧ್ಯಯನಕ್ಕೆ ಒಳಪಡಿಸಿದರೂ ಬಿಹಾರದಲ್ಲಿ ಮಹಾಮೈತ್ರಿಕೂಟ ಸರಳ ಬಹುಮತ ಪಡೆದುಕೊಳ್ಳಲು ಸಾಧ್ಯವಾಗಲಿದೆ.

243 ಸೀಟುಗಳಿರುವ ಬಿಹಾರದಲ್ಲಿ ಸರಳ ಬಹುಮತಕ್ಕೆ ಬೇಕಿರುವುದು 122 ಮತಗಳು. ಆದರೆ ಸಮೀಕ್ಷೆಗಳ ಸಮೀಕ್ಷೆಗಳ ಪ್ರಕಾರ ತೇಜಸ್ವಿ ಯಾದವ್ ಅವರ ಮೈತ್ರಿಕೂಟಕ್ಕೆ 124 ಸೀಟುಗಳು ಸುಲಭವಾಗಿ ದಕ್ಕಲಿದೆ. ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ 100-110 ಸೀಟುಗಳಷ್ಟೇ ಸಿಗಲಿವೆ. ಹೀಗಾಗಿ ಸಮೀಕ್ಷೆಗಳ ಪ್ರಕಾರ ಬಿಹಾರದಲ್ಲಿನ ಎನ್‌ಡಿಎ ಸರ್ಕಾರದ ಪ್ರತಿನಿಧಿಗಳು ಇನ್ನು ವಿರೋಧಪಕ್ಷದ ಸ್ಥಾನದಲ್ಲಿ ಕೂರಬೇಕಾಗಲಿದೆ. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

ಟೈಮ್ಸ್ ನೌ- ಸಿ ವೋಟರ್ ಎನ್‌ಡಿಎಗೆ 116 ಸೀಟುಗಳನ್ನು ನೀಡಿದ್ದರೆ, ಮಹಾಘಟಬಂಧನ ಅದಕ್ಕಿಂತ ನಾಲ್ಕು ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎಂದಿದೆ. ಇನ್ನು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಲಿದೆ. ಹೀಗಾಗಿ ಅತಂತ್ರ ವಿಧಾನಸಭೆ ಉಂಟಾಗಲಿದೆ ಎಂದು ಅದು ತಿಳಿಸಿದೆ.

Bihar Exit Poll Results 2020: NDTV Reveals Poll Of Exit Polls

ರಿಪಬ್ಲಿಕ್ ಟಿವಿ-ಜನ್ ಕಿ ಬಾತ್ ಸಮೀಕ್ಷೆಯು ವಿರೋಧಪಕ್ಷದಲ್ಲಿರುವ ಮೈತ್ರಿಕೂಟಕ್ಕೆ 118-138 ಸೀಟುಗಳ ಗೆಲುವಿನ ಭವಿಷ್ಯ ನುಡಿದಿದೆ. ಆಡಳಿತಾರೂಢ ಪಕ್ಷಗಳು ಸೇರಿ 91-117ಸೀಟುಗಳನ್ನು ಗೆಲ್ಲಲಿವೆ. ಎಲ್‌ಜೆಪಿಗೆ 5-8 ಸೀಟುಗಳು ಸಿಗಲಿವೆ.

ಟಿವಿ 9- ಭಾರತ್ ವರ್ಷ್ ತೇಜಸ್ವಿ ಯಾದವ್ ನೇತೃತ್ವದ ತಂಡಕ್ಕೆ 120 ಸೀಟುಗಳು ಮತ್ತು ಎನ್‌ಡಿಎಗೆ 115 ಸೀಟುಗಳು ಸಿಗಲಿದೆ ಎಂದು ಹೇಳಿದೆ. ಎಲ್‌ಜೆಪಿ ನಾಲ್ಕು ಸೀಟುಗಳನ್ನು ಗೆಲ್ಲಬಹುದು ಎಂದು ತಿಳಿಸಿದೆ.

ದೈನಿಕ್ ಭಾಸ್ಕರ್ ಸಮೀಕ್ಷೆ ಮಾತ್ರ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ನಿತೀಶ್ ಕುಮಾರ್ ಸಾರಥ್ಯದ ಎನ್‌ಡಿಎ 120-127 ಸೀಟುಗಳನ್ನು ಪಡೆದುಕೊಳ್ಳಲಿದೆ. ಮಹಾ ಮೈತ್ರಿಕೂಟವು 71-81 ಸೀಟುಗಳನ್ನು ಗೆಲ್ಲಲಿದೆ. ಎಲ್‌ಜೆಪಿ 12-23 ಸೀಟುಗಳಲ್ಲಿ ಗೆಲ್ಲಲಿದೆ. ಇತರೆ 19-27 ಕ್ಷೇತ್ರಗಳಲ್ಲಿ ಜಯಗಳಿಸಲಿದೆ.

ಎನ್‌ಡಿಟಿವಿ ನೀಡಿರುವ ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಬಿಹಾರದಲ್ಲಿ ಯುಪಿಎ ನಿಚ್ಚಳ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+