Get Updates
Get notified of breaking news, exclusive insights, and must-see stories!

20ರ ವಿದ್ಯಾರ್ಥಿಯೊಂದಿಗೆ 42ರ ಶಿಕ್ಷಕ ಮದುವೆ; ವಿಡಿಯೋ ವೈರಲ್

ಇತ್ತೀಚೆಗೆ ವಧು-ವರನ ನಡುವಿನ ವಯಸ್ಸಿನ ಅಂತರ ತುಂಬಾ ವ್ಯತ್ಯಾಸವಿರುವುದು ಕಂಡುಬರುತ್ತಿದೆ. ನಾವು ಅಂತಹ ಮದುವೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಮದುವೆಯ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಕಂಡುಬಂದ ವರನಿಗೆ 42 ವರ್ಷ ವಯಸ್ಸು. ಈತ ವೃತ್ತಿಯಲ್ಲಿ ಶಿಕ್ಷಕನಾಗಿದ್ದು ಈಗಾಗಲೇ ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡಿದ್ದಾನೆ. ಈತ ಮದುವೆಗೆ ಆಯ್ಕೆ ಮಾಡಿಕೊಂಡಿದ್ದು ತನ್ನ ವಿದ್ಯಾರ್ಥಿಯನ್ನೇ. ಆಕೆಗಿನ್ನೂ 20 ವರ್ಷ ವಯಸ್ಸು ಮಾತ್ರ. ಈ ಅಸಾಮಾನ್ಯ ಪ್ರೇಮಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಯುವತಿ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ವ್ಯಕ್ತಿಯ ಕೋಚಿಂಗ್ ವಿದ್ಯಾರ್ಥಿನಿ. 22 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿರುವ ಇವರಿಬ್ಬರು ಮದುವೆಯಾಗಿರುವ ವಿಡಿಯೊವನ್ನು ಅತಿಥಿಯೊಬ್ಬರು ಚಿತ್ರೀಕರಿಸಿದ್ದಾರೆ. ಸದ್ಯ ಈ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಶಿಕ್ಷಕ ಮತುಕ್ನಾಥ್ ತನಗಿಂತ 22 ವರ್ಷ ಚಿಕ್ಕವಳಾದ ತನ್ನ ವಿದ್ಯಾರ್ಥಿ ಜೂಲಿ ನಡುವೆ ಅದೇಗೋ ಪ್ರೀತಿ ಹುಟ್ಟಿಕೊಂಡಿದೆ. ಈ ಪ್ರೀತಿ ಅರಳಿ ಹೂವಾಗಿ ಮದುವೆಯ ಹಂತಕ್ಕೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ವರದಿಗಳ ಪ್ರಕಾರ, ವಿದ್ಯಾರ್ಥಿಯು ಶಿಕ್ಷಕರ ಕೋಚಿಂಗ್ ತರಗತಿಗಳಲ್ಲಿ ಇಂಗ್ಲಿಷ್ ಕಲಿಯುತ್ತಿದ್ದರು. ಇವರಿಬ್ಬರ ಸಂಬಂಧದ ತಿಳಿದ ಬಳಿಕ ಶಿಕ್ಷಕ ಗುರುವಾರ ದೇವಸ್ಥಾನವೊಂದರಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಮದುವೆಯಾದರು. ಇಬ್ಬರೂ ಹತ್ತಿರದಲ್ಲಿಯೇ ವಾಸಿಸುತ್ತಿದ್ದರು ಮತ್ತು ಅವರ ಮನೆಗಳ ನಡುವೆ ಕೇವಲ 800 ಮೀಟರ್ ಅಂತರವಿತ್ತು. ಹಲವು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರಿಂದ ಶಿಕ್ಷಕ ಒಂಟಿಯಾಗಿದ್ದನು.

ಬಿಹಾರದಲ್ಲಿ 42 ವರ್ಷದ ಶಿಕ್ಷಕ 20 ವರ್ಷದ ವಿದ್ಯಾರ್ಥಿಯನ್ನು ಮದುವೆಯಾಗುತ್ತಿರುವ ವೈರಲ್ ವಿಡಿಯೊವನ್ನು ವೀಕ್ಷಿಸಿ:

ಸಾಮಾನ್ಯವಾಗಿ ಮದುವೆಯಾಗುವ ಗಂಡು ಹೆಣ್ಣಿಗೆ ಐದರಿಂದ ಆರು ವರ್ಷ ವಯಸ್ಸಿನ ಅಂತರವಿರುತ್ತದೆ. ಆದರೆ ಇಲ್ಲಿ ಬರೋಬ್ಬರಿ 22 ವರ್ಷ ವಯಸ್ಸಿನ ಅಂತರದಲ್ಲಿ ಶಿಕ್ಷಕ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾನೆ. ಮಕ್ಕಳು ದಾರಿ ತಪ್ಪಿದರೆ ಅದನ್ನು ತಿದ್ದಿ ತೀಡಿ ದಾರಿಗೆ ತರುವುದು ಒಬ್ಬ ಶಿಕ್ಷಕನಾದವನ ಕರ್ತವ್ಯ. ಆದರಿಲ್ಲಿ ಮದುವೆಯೇ ನಡೆದು ಹೋಗಿದೆ. ಇಂತಹ ಘಟನೆಗಳು ಪೋಷಕರು ಹಾಗೂ ಸಮಾಜದಲ್ಲಿ ಶಿಕ್ಷಕರ ಮೇಲಿನ ನಂಬಿಕೆಯನ್ನು ಕಡಿಮೆ ಮಾಡದೆ ಇರವು ಎಂಬುದು ಹಲವರ ಅಭಿಪ್ರಾಯ.

Bihar: 42-year-old teacher marries 20-year-old student- video goes viral

ಈ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ನೆಟಿಜನ್‌ಗಳು ಈ ಜೋಡಿಯನ್ನು ಸಮಾಜ ಏನು ಯೋಚಿಸುತ್ತದೆ ಎಂಬುದನ್ನು ಲೆಕ್ಕಿಸದೆ ಮತ್ತು ತಮ್ಮ ಪ್ರೀತಿಗೆ ಮೊದಲ ಸ್ಥಾನ ನೀಡಿದ್ದಕ್ಕಾಗಿ ಶ್ಲಾಘಿಸಿದರು. ಆದರೆ ಅನೇಕರು ಮದುವೆಯನ್ನು ವಿರೋಧಿಸಿದರು. ಬಳಕೆದಾರರೊಬ್ಬರು, "ಪ್ರೀತಿ ಕುರುಡು ಎಂಬುದು ಇಲ್ಲಿ ಸಾಬೀತಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, "ವಾವ್ ನೈಸ್" ಎಂದು ಕಾಮೆಂಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+