ಪರ್ವತಾರೋಹಿ ದಾಖಲೆ ಮುರಿದ ಬೆಂಗಳೂರಿನ ನವೀನ್ ಮಲ್ಲೇಶ್
ಬೆಂಗಳೂರು, ಜುಲೈ 24: ಲಡಾಖ್‌ನಲ್ಲಿ ಎರಡು 6000+ಮೀ. ಶಿಖರಗಳ ಎತ್ತರದ ಮೌಂಟ್ ಕಾಂಗ್ ಯಾಟ್ಸೆ II 6250 ಮೀ. ಮತ್ತು ಮೌಂಟ್ ಡಿಜೊ ಜೊಂಗೊ 6240 ಮೀ. ಶಿಖರಗಳ ಆರೋಹಣವನ್ನು ಕೇವಲ 70 ಗಂಟೆಗಳಲ್ಲಿ ಪೂರ್ಣಗೊಳಿಸುವ ಮೂಲಕ ಪರ್ವತಾರೋಹಿ ದಾಖಲೆಯನ್ನು ಬೆಂಗಳೂರಿನ ಯುವಕರೊಬ್ಬರು ಮುರಿದಿದ್ದಾರೆ.
ಬೆಂಗಳೂರು ಮೂಲದ ಪರ್ವತಾರೋಹಿ ಮತ್ತು ಟ್ರೆಕ್ಕಿಂಗ್ ಉದ್ಯಮಿ ನವೀನ್ ಮಲ್ಲೇಶ್ ಅವರು ಜುಲೈ 20 ರಂದು ಮಧ್ಯಾಹ್ನ 121:82 Uಖಿ ಕ್ಕೆ ಲಡಾಖ್‌ನಲ್ಲಿ ಮೌಂಟ್ ಕಾಂಗ್ ಯಾಟ್ಸೆ II 6250ಮೀ. ಮತ್ತು ಮೌಂಟ್ ಡಿಜೊ ಜೊಂಗೊ 6240ಮೀ., ಎರಡು 6000+ಮೀ.ಎತ್ತರದ ಶಿಖರಗಳನ್ನು ಏರುವ ತಮ್ಮ ದಂಡಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮತ್ತು 21 ಜುಲೈ 2022 ರಂದು 10:28 ಎಎಂಗೆ 35 ವರ್ಷ ವಯಸ್ಸಿನ ಅವರು 70 ಗಂಟೆಗಳ ಒಳಗೆ ಎರಡು 6000+ ಮೀ. ಶಿಖರಗಳನ್ನು ಏರಿದ ಮೊದಲ ಕನ್ನಡಿಗ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಎರಡೂ ಶಿಖರಗಳಲ್ಲಿ ಕರ್ನಾಟಕ ಧ್ವಜಾರೋಹಣ ಮಾಡಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅನುಭವದ ಕುರಿತು ಮಾತನಾಡಿದ ನವೀನ್ ಮಲ್ಲೇಶ್, ''ನಾನು ಈ ಹಿಂದೆ ಆಫ್ರಿಕಾದ ಕಿಲಿಮಂಜಾರೊ ಮತ್ತು ರಷ್ಯಾದ ಮೌಂಟ್ ಎಲ್ಬçಸ್ ಸೇರಿದಂತೆ ವಿವಿಧ ಶಿಖರಗಳನ್ನು ಆರೋಹಿಸಿದ್ದೆ, ಆದರೆ, ಈ ದಂಡಯಾತ್ರೆಯು ನನ್ನ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪ್ರತಿ ಔನ್ಸ್ ಪರೀಕ್ಷಿಸಿದೆ. ಪ್ರತಿ ಶಿಖರವನ್ನು ಏರುವುದನ್ನು ಪೂರ್ಣಗೊಳಿಸಲು ಸುಮಾರು 20+ ಗಂಟೆಗಳು ಹಿಡಿಯಿತು. ಮತ್ತು ಅದು ನನ್ನ ಶಕ್ತಿಯನ್ನು ಬರಿದಾಗಿಸುತ್ತಿತ್ತು'' ಎಂದಿದ್ದಾರೆ.

''ನಮ್ಮೊಂದಿಗೆ ಚಾರಣ ಮಾಡಿದ ತಂಡಕ್ಕೆ, ನನ್ನ ಶೆರ್ಪಾಗಳಿಗೆ ನನ್ನ ಯಶಸ್ವಿ ಶಿಖರಗಳಿಗೆ ನಾನು ಋಣಿಯಾಗಿದ್ದೇನೆ ಮತ್ತು ಈ ಶಿಖರಗಳನ್ನು ಏರಿದ ಯಶಸ್ವಿಯಾತ್ರೆಯನ್ನು ಕರ್ನಾಟಕ ಮತ್ತು ಭಾರತದ ಎಲ್ಲಾ ಯುವ ಮತ್ತು ಮಹತ್ವಾಕಾಂಕ್ಷಿ ಪರ್ವತಾರೋಹಿಗಳಿಗೆ ಅರ್ಪಿಸುತ್ತೇನೆ. ಹೆಚ್ಚು ಹೆಚ್ಚು ಮಹತ್ವಾಕಾಂಕ್ಷಿ ಯುವಕರು ಪರ್ವತಾರೋಹಣವನ್ನು ತಮ್ಮ ಹವ್ಯಾಸ, ಕ್ರೀಡೆ ಮತ್ತು ವೃತ್ತಿಯಾಗಿ ತೆಗೆದುಕೊಳ್ಳುತ್ತಾರೆ ಮತ್ತು ಭಾರತವನ್ನು ವಿಶ್ವದಲ್ಲಿ ಟ್ರೆಕ್ಕಿಂಗ್ ಮತ್ತು ಪರ್ವತಾರೋಹಣ ಕೇಂದ್ರವಾಗಿಸುತ್ತಾರೆ ಎಂದು ನಾನು ಭಾವಿಸುತ್ತೇನೆ'' ಎಂದು ಹೇಳಿದರು.

ಪ್ರೀಮಿಯಂ ಟ್ರೆಕ್ಕಿಂಗ್ ಅನುಭವಗಳನ್ನು ಕ್ಯುರೇಟ್ ಮಾಡುವ ಬೆಂಗಳೂರು ಮೂಲದ ಸ್ಟಾರ್ಟ್ಅಪ್‌ನ ಟ್ರೆಕ್‌ನೋಮಾಡ್ಸ್‌ನ ಸಂಸ್ಥಾಪಕ ನವೀನ್ ಈಗ ಮೌಂಟ್ ಎವರೆಸ್ಟ್ ಸೇರಿದಂತೆ ವಿಶ್ವದ ಅತ್ಯುನ್ನತ ಶಿಖರಗಳನ್ನು ಏರುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುವುದಕ್ಕಾಗಿ ಶ್ರಮಿಸುತ್ತಿದ್ದಾರೆ. ಅಲೆಮಾರಿ (ನೋಮಾಡ್) ಅವರಿಂದ ಪ್ರಾಜೆಕ್ಟ್ 7 ಶಿಖರಗಳು ಎಂಬ ಯೋಜನೆಯ ಭಾಗವಾಗಿ, ಅವರು ಈಗಾಗಲೇ ಆಫ್ರಿಕಾ ಮತ್ತು ರಷ್ಯಾದಲ್ಲಿ ಎರಡು ಶಿಖರಗಳನ್ನು ಏರುವುದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.












Click it and Unblock the Notifications