Get Updates
Get notified of breaking news, exclusive insights, and must-see stories!

"Brahmin Genes': ಆನ್‌ಲೈನ್‌ನಲ್ಲಿ ಜಾತೀಯತೆಯ ಬಿಸಿ ಬಿಸಿ ಚರ್ಚೆ ಸೃಷ್ಟಿಸಿದ 'ಬ್ರಾಹ್ಮಿನ್ ಜಿನ್ಸ್' ಟ್ರೈಸೆಪ್ಸ್ ಪೋಟೋ

ಬೆಂಗಳೂರು, ಆಗಸ್ಟ್ 25: ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಒಂದಲ್ಲಾ ಒಂದು ವಿಷಯದ ಬಗ್ಗೆ ಚರ್ಚೆ, ಟೀಕೆಗಳು, ವಿರೋಧ, ಬೆಂಬಲ ಕೇಳಿ ಬರುತ್ತದೆ. ಇದೀಗ ಬೆಂಗಳೂರು ಮೂಲಕ ಮಹಿಳಾ ಉದ್ಯಮಿಯೊಬ್ಬರು ಹಾಕಿರುವ 'ಬೈಸೆಪ್ಸ್' ಪೋಟೋ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಜಾತೀಯತೆಯ ಕುರಿತು ತೀವ್ರ ಚರ್ಚೆ ಹುಟ್ಟು ಹಾಕಿದೆ. ಅವರು ನೆಟ್ಟಿಗರಿಂದ ಟೀಕೆಗಳನ್ನು ಎದುರಿಸುವಂತಾಗಿದೆ.

ಬೆಂಗಳೂರು ಮೂಲದ ಜಸ್ಟ್‌ಬರ್ಸ್ಟ್‌ಔಟ್ ಹೆಸರಿನ ಕಂಟೆಂಟ್ ರೈಟಿಂಗ್ ಏಜೆನ್ಸಿಯ ಸಿಇಒ ಆಗಿ ಮಹಿಳಾ ಉದ್ಯಮಿ ಅನುರಾಧಾ ತಿವಾರಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಸ್ಟ್ 22ರಂದು ಬೈಸೆಪ್ಸ್ ಫೋಟೋವನ್ನು ಪೋಸ್ಟ್ ಮಾಡಿ ಅದರೊಂದಿಗೆ "ಬ್ರಾಹ್ಮಿನ್ ಜೀನ್ಸ್" ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ.

Bengaluru Base CEO Anuradha Tiwari Brahmin genes Controversial Post Viral Who Faced Criticism

ಇದೀಗ ಈ ಶಿರ್ಷಿಕೆ ಹಾಗೂ ಪೋಟೋ ವೈರಲ್ ಆಗುತ್ತಿವೆ. ಅನೇಕರು ಜಾತೀಯತೆ ಇನ್ನೂ ಅಸ್ತಿತ್ವದಲ್ಲಿದೆ ಎಂದು ಹೇಳಿದ್ದಾರೆ. ಕೆಲವರಿಗೆ ತಿವಾರಿ ಅವರು ಪ್ರತ್ಯುತ್ತರ ನೀಡಿದ್ದಾರೆ.

ಫೋಟೋದಲ್ಲಿ ಏನಿದೆ? ನೆಟ್ಟಿಗರು ಹೇಳಿದ್ದೇನು?

ಫೋಟೋದಲ್ಲಿ ಸ್ಟೂಟರ್ ಪಕ್ಕ ನಿಂತ ಅನುರಾಧ ತಿವಾರಿಯವರು ಎಡಗೈನಲ್ಲಿ ಎಳನೀರಿನ ತೆಂಗಿನಕಾಯಿ ಬಲಗೈಎನಲ್ಲಿ ಬೈಸೆಪ್ಸ್ ಪ್ರದರ್ಶಿಸಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದರು. ಅವರು ತಮ್ಮ ಫಿಟ್‌ನೆಸ್ ಅನ್ನು ಬ್ರಾಹ್ಮಣ ಆಧಾರಿತವಾಗಿ ಪ್ರದರ್ಶಿಸಿದ್ದಾರೆ. ಇಂತಹ ಫೀಟ್‌ನೆಸ್ ಬ್ರಾಹ್ಮಣದವರಲ್ಲಿ ಸಾಧ್ಯ ಎಂಬಂತಿದೆ ಎಂದು ಕೆಲವರು ಹೇಳಿದ್ದಾರೆ.

ಒಬ್ಬ ಬಳಕೆದಾರರು, ಮನುಸ್ಮೃತಿಯ ಪ್ರಕಾರ ಹೆಣ್ಣು ಮಕ್ಕಳು ಎಲ್ಲಾ ಸಮಯದಲ್ಲೂ ಮನೆಯಲ್ಲಿಯೇ ಇದ್ದು, ಪತಿ ನೋಡಿಕೊಳ್ಳಬೇಕು ಎಂಬುದಿದೆ. ಆದರೆ ಸಂವಿಧಾನ ನಮಗೆ ನೀಡಿರುವ ಹಕ್ಕು ಸ್ವಾತಂತ್ರ್ಯದಿಂದಲೇ ನೀವು ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಟ್ರಿಸೆಪ್ ಪ್ರದರ್ಶಿಇಸಿದ್ದಾರೆ. ನೀವು ನಿಮ್ಮ ಜೀವನವನ್ನು ನಿಮ್ಮದೇ ರೀತಿಯಲ್ಲಿ ನಡೆಸುತ್ತಿದ್ದೀರಿ ಅದಕ್ಕಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಧನ್ಯವಾದ ತಿಳಿಸಬೇಕು ಎಂದು ಕೌಂಟರ್ ಕೊಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅನುರಾಧಾ ತಿವಾರಿ ಅವರು, 'ರಾಣಿ ಲಕ್ಷ್ಮೀಬಾಯಿ ಅವರ ಬಗ್ಗೆ ಕೇಳಿದ್ದೀರಾ, ದಡ್ಡರೇ? ಎಂದು ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ವಕೀಲರಾದ ಶಶಾಂಕ್ ರತ್ನೂ ಎಂಬುವವರು, ಇವರ ಪೋಸ್ಟ್‌ ನೋಡಿದ ಮೇಲೆ ಜಾತೀಯತೆ ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂಬುದನ್ನು ಗಮನಿಸಬಹುದು. ಆನುವಂಶಿಕವಾಗಿ ಉನ್ನತ/ಜಾತಿವಾದದ ಬಗ್ಗೆ ಕೆಲವು ಆಲೋಚನೆಗಳು ಇವೆ. ಇದಕ್ಕೆ ಪೂರಕೆವೆಂಬಂತೆ ಅನುರಾಧ ತಿವಾರಿ ಅವರ ಪ್ರೊಫೈಲ್ ಫೋಟೋ ಕೆಳಗೆ ಅವರು #onefamilyonereservation ಹ್ಯಾಶ್‌ಟ್ಯಾಗ್ ಹಾಕಿಕೊಂಡಿದ್ದಾರೆ.

ಫಿಟ್ ಆಗಿರಲು ವಂಶಾವಾಹಿ ಕಾರಣವಲ್ಲ..!

ಯಾಕೆ ಜಾತಿ ಪದ್ಧತಿ ಇನ್ನೂ ಬೇರೂರಿದೆ. ಆರೋಗ್ಯ ವಿಚಾರದಲ್ಲಿ ವ್ಯಕ್ತಿ ಫಿಟ್ ಆಗಿರುವುದೆ. ಆದರೆ ಇವರು ಹೇಳುತ್ತಿರುವುದು ನೋಡಿದರೆ ಉನ್ನತ ಅಥವಾ ನಿರ್ದಿಷ್ಟ ವಂಶವಾಹಿಗಳು ಫಿಟ್ ಆಗಿದ್ದಾರೆ. ಫಿಟ್ ಆಗಿರಲು ವಂಶಾವಾಹಿ ಕಾರಣ ಎಂಬಂತಿದೆ. ಒಂದು ಕುಟುಂಬ ಒಂದೇ ಮೀಸಲಾತಿ ಇದು ಮಾರ್ಗವಲ್ಲ ಎಂದು ಅವರು ಹೇಳಿದ್ದಾರೆ.

ತಮ್ಮ ಪೋಸ್ಟ್ ವೈರಲ್ ಆಗಿ, ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ತಿವಾರಿ ಅವರು, ಬ್ರಾಹ್ಮಣ ಎಂಬ ಪದ ಉಲ್ಲೇಖಿಸಿದ್ದಕ್ಕೆ ಹಲವು ಕೀಳು ಜೀವಿಗಳನ್ನು ಪ್ರಚೋದಿಸಿದಂತಾಗಿದೆ ಎಂದು ತಿರುಗೇಟು ಕೊಟ್ಟಿದ್ದಾರೆ. ಅವರ ಈ ಮಾತು ಕೆಲವು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯಿತು.

ವಂಶವಾಹಿ ಕುರಿತು ಹೆಮ್ಮೆ ಪಡುತ್ತೇನೆ

ನಮ್ಮ ವಂಶಾವಾಹಿಗಳ ಬಗ್ಗೆ ಹೆಮ್ಮೆ ಪಡುವ ಹಕ್ಕು ನನಗಿದೆ. ನಿಜವಾದ ಜಾತಿವಾದಿಗಳು ಯಾರೆಂಬುದರ ಗೊತ್ತಾಗುತ್ತದೆ. ಮೀಸಲಾತಿ ಇಲ್ಲ, ಉಚಿತ ಯಾವುದು ಇಲ್ಲದೇ ನಾವು ಎಲ್ಲವನ್ನೂ ಸ್ವಂತವಾಗಿ ಸಂಪಾದಿಸುತ್ತೇವೆ ಎಂದು ತಿವಾರಿ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಅಸ್ತಿತ್ವದ ವಿಚಾರದಲ್ಲಿ ಬ್ರಾಹ್ಮಣರನ್ನು ತಪ್ಪಿತಸ್ಥರೆಂದು ಭಾವಿಸುವ ರೀತಿಯಲ್ಲಿ ವ್ಯವಸ್ಥೆಯು ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅನುರಾಧ ತಿವಾರಿ ಅವರು ಈ ಹಿಂದೆಯೂ ಇಂತಹ ಹಲವು ವಿಚಾರಗಳು ಕುರಿತು ಮಾತನಾಡಿದ್ದಾರೆ. ಮೀಸಲಾತಿ ವಿರುದ್ಧ ಇದೇ ಎಕ್ಸ್‌ ಖಾತೆಯಲ್ಲಿ ಅವರು ಪೋಸ್ಟ್ ಮಾಡಿದ್ದರು. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಶೇಕಡಾ 95ರಷ್ಟು ಅಂಕ ಗಳಿಸಿದರೂ ನನಗೆ ಪ್ರವೇಶ ಸಿಗಲಿಲ್ಲ. ಆದರೆ ನನ್ನ ಸಹಪಾಠಿ ಶೇಕಡಾ 60ರಷ್ಟು ಅಂಕ ಪಡೆದರೂ ಅವರಿಗೆ ಪ್ರವೇಶ ಸಿಗುತ್ತದೆ. ಹೀಗಿದ್ದರೂ ನನಗೆ ಮೀಸಲಾತಿ ಕುರಿತು ಮಾತನಾಡಿದಾಗ ನನ್ನನ್ನು ಪ್ರಶ್ನೆ ಮಾಡುತ್ತಾರೆ. ಬ್ರಾಹ್ಮರು ಯಾರನ್ನು ತುಳಿಯುವುದಿಲ್ಲ ಎಂದು ಅವರು ಬರೆದುಕೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+