Bengaluru Viral News: ಆಟೋ ಚಾಲಕನ ಸೃಜನಶೀಲತೆಗೆ ನೆಟ್ಟಿಗರ ಮೆಚ್ಚುಗೆ!
ಬೆಂಗಳೂರು, ಮಾರ್ಚ್ 10: ಬೆಂಗಳೂರು ವೈವಿಧ್ಯಮಯ ಪ್ರಸಂಗಗಳಿಗೆ, ಸೃಜನಶೀಲತೆಗೆ ಸಾಕ್ಷಿಯಾಗಿದೆ. ಅನೇಕ ಬಗೆಯ ಜನರು ಇಲ್ಲಿದ್ದಾರೆ. ಈ ಕಾರಣದಿಂದ ನವೀನ ಕಾರ್ಯಗಳು, ಬೆರಗುಗೊಳಿಸುವ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುತ್ತವೆ. ಅದಕ್ಕೀಗ ವರ್ಕ್ ಫ್ರಂ ಆಟೋದಂತೆ ಕಾಣುವ ಆಟೋ ರಿಕ್ಞಾದ ಫೋಟೋಗಳು ಎಲ್ಲೆಡೆ ಹರಿದಾಡುತ್ತಿರುವೆ. ಇದನ್ನು ನೋಡಿದ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿಲಕ್ಷಣ, ವಿಚಿತ್ರ ಕ್ಷಣಗಳಿಗೂ ಬೆಂಗಳೂರಿಗರು ಆಗಾಗ ಸಾಕ್ಷಿಯಾಗುತ್ತಾರೆ. ಇದೀಗ ಆಟೋದಲ್ಲಿ ಕಚೇರಿಯ ಚೇರ್ ಅನ್ನು ಅಳವಡಿಸಿರುವ, ನೋಡಲು ಹೊಸ ರೀತಿಯಲ್ಲಿ ಕಾಣುವ ಆಟೋ ನೆಟ್ಟಿಗರ ಕಣ್ಣುಕುಕ್ಕಿದೆ. ಈ ಪೋಸ್ಟ್ ಅನ್ನು @shivaniiiiiii_ ಖಾತೆಯಿಂದ ಹಂಚಿಕೊಂಡಿದ್ದು, ಅದನ್ನು 'ಪೀಕ್ ಬೆಂಗಳೂರು''ಹ್ಯಾಂಡಲ್ ಹಂಚಿಕೊಂಡಿದೆ. ಇತ್ತ ರೆಡ್ಡಿಟ್‌ನಲ್ಲೂ 'ಕಿತ್ ಕಿತ್ ಗುಡ್ಡೆ ಹಾಕೋನು' ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಇದಕ್ಕೆ "ಪಕ್ಕಾ ಲೋಕಲ್ ಆಟೋ ಗೇಮರ್," ಶೀರ್ಷಿಕೆ ನೀಡಲಾಗಿದೆ.

ವೈರಲ್ ಆಗುತ್ತಿರುವ ಆಟೋ ರೀಕ್ಷಾದಲ್ಲಿ ಒಂದಷ್ಟು ವಿಶಿಷ್ಟ ಮಾರ್ಪಾಡು ಮಾಡಲಾಗಿದೆ. ಆಟೋ ದಲ್ಲಿ ಚಾಲಕ ಕೂರುವ ಸೀಟನ್ನು ಐಟಿ ಕಂಪನಿಗಳಲ್ಲಿ ಇರುವಂತಹ ಚೇರ್ ಅನ್ನು ಅಳವಡಿಸಲಾಗಿದೆ. ದೈನಂದಿನ ಚಾಲನೆ ಆರಾಮದಾಯಕವಾಗಿರಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದಿದ್ದಾರೆ. ಇದು ಆಟೋ ಏರಿದವರಿಗೆ ವಿಶಿಷ್ಟವೆಂಬಂತೆ ಕಾಣಿಸಿದೆ. ಆಟೋ ಅನೇಕರ ಗಮನ ಸೆಳೆದಿದೆ. ನಿತ್ಯ ಟ್ರಾಫಿಕ್ ಕಿರಿಕಿರಿಯ ಮಧ್ಯೆ ಆಸನ ಕಿರಿ ಕಿರಿ ನೀಡದಿರಲಿ ಎಂದು ಹೀಗೆ ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ ಆಟೋ ಫೋಟೋಗಳು ವೈರಲ್ ಆಗುತ್ತಿದ್ದಂತೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾದವು. ಅನೇಕ ಕಾಮೆಂಟ್ ಗಳು, ರಿ ಶೇರ್‌ಗಳು ಆಗಿದೆ. ನೀವು ಇಂತಹ ಐಡಿಯಾ ಎಲ್ಲಿ ಕಂಡು ಕೊಳ್ಳುತ್ತೀರಿ ಎಂದು ನೆಟ್ಟಿಗರು ಕೇಳಿದ್ದಾರೆ. ಅಣ್ಣಾ ಬಹುಶಃ ಆಟೋ ಅನ್ನು ಫೆರಾರಿ ಎಂದುಕೊಂಡಿರಬಹುದು. ನನಗೆ ನಗು ತಡಿಯಲಾಗುತ್ತಿಲ್ಲ ಎಂದಿದ್ದಾರೆ. ಚೇರ್ ಕಳ್ಳತನವಾದೀತು ಜೋಕೆ ಎಂದಿದ್ದಾರೆ.
auto driver’s seat had an office chair fixed for extra comfort, man i love bangalore @peakbengaluru 🤌🏼 pic.twitter.com/D1LjGZOuZl
— Shivani Matlapudi (@shivaniiiiiii_) September 23, 2024
ಆಟೋ ಚಾಲಕನ ಸೃಜನಶೀಲತೆಗೆ ಮೆಚ್ಚುಗೆ
ಬೆಂಗಳೂರು ಆಟೋ ಚಾಲಕರ ಸೃಜನಶೀಲತೆ, ಆಟೋದಲ್ಲಿ ವಿಶಿಷ್ಟ ಬದಲಾವಣೆ ಇದೇ ಮೊದಲೇನಲ್ಲ. ಆ ಆಟೋದಲ್ಲಿನ ಬದಲಾವಣೆ ನನಗೆ ಇಷ್ಟವಾಗಿದೆ. ಪೋಸ್ಟ್‌ನ ಶೀರ್ಷಿಕೆ ಇಷ್ಟವಾಯಿತು ಎಂದು ಮತ್ತೊಬ್ಬರು ಹೇಳಿದ್ದಾರೆ. ಆಟೋ ಚಾಲಕನ ಸೃಜನಶೀಲತೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದಿದೆ. "ನಾನು ಶೀಘ್ರದಲ್ಲೇ ಬೆಂಗಳೂರಿಗೆ ಹೋಗುತ್ತಿದ್ದೇನೆ. ಈ ಆಟೋದಲ್ಲಿ ಕೂತು ಹೊಸ ಅನುಭವ ಪಡೆಯುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಹಾಕಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಸ್ಮಾರ್ಟ್ ವಾಚ್ ಕ್ಯೂಆರ್ ಕೋಡ್ ಪ್ರದರ್ಶಿಸಿ ಪ್ರಯಾಣದ ಶುಲ್ಕ ಪಡೆದಿದ್ದರು. ತಂತ್ರಜ್ಞಾನ ಬಳಕೆಯಲ್ಲೂ ಆಟೋ ಚಾಲಕರು ಮುಂದಿದ್ದಾರೆ ಎಂಬುದು ಸಾಬೀತಾಗಿತ್ತು. ಆಟೋದಲ್ಲಿ ಪ್ರಯಾಣಿಕರಿಗೆ ಸಲಹೆ, ಚಿಕ್ಕ ಗ್ರಂಥಾಲಯ ರೀತಿ ವಿವಿಧ ಪುಸ್ತಕ ಸ್ಟ್ಯಾಂಡ್ ಅಳವಡಿಕೆಗಳನ್ನು ನೋಡಿದ್ದೇವೆ. ಅಲ್ಲದೇ ಬೇಸಿಗೆ ಕಾರಣಕ್ಕೆ ಆಟೋ ಮೇಲೆ ಹಿಸಿರುವ ಹುಲ್ಲಿನ ಹೊದಿಕೆ ಹಾಕಿದ್ದ ಫೋಟೋಗಳು ವೈರಲ್ ಆಗಿದ್ದವು.












Click it and Unblock the Notifications