ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಯರೋಗದ ಲಸಿಕೆ ಕೊರೊನಾ ಮಾಹಾಮಾರಿಗೂ ರಾಮಬಾಣ..?

|
Google Oneindia Kannada News

100 ವರ್ಷಗಳ ಹಿಂದೆ ಕಂಡುಹಿಡಿದ ಕ್ಷಯರೋಗದ ಲಸಿಕೆ ಕೊರೊನಾ ಸೋಂಕಿಗೂ ರಾಮಬಾಣವಾಗುವ ಸಾಧ್ಯತೆ ಇದೆ ಅಂತಾ ಬ್ರಿಟನ್‌ ಮೂಲದ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ 3 ಕೋಟಿ 79 ಲಕ್ಷ ಜನರಿಗೆ ಸೋಂಕು ವಕ್ಕರಿಸಿದೆ. ಚಳಿಗಾಲದಲ್ಲಿ ಮತ್ತೆ ಕೋಟ್ಯಂತರ ಜನರಿಗೆ ಹರಡುವ ಭೀತಿ ಇದೆ. ಇಷ್ಟೆಲ್ಲದರ ನಡುವೆ ವ್ಯಾಕ್ಸಿನ್‌ಗೆ ವೇಯ್ಟ್ ಮಾಡುತ್ತಿದ್ದ ಜನರಿಗೆ ಗುಡ್‌ ನ್ಯೂಸ್ ಸಿಕ್ಕಿದೆ.

1921ರಲ್ಲಿ ಕ್ಷಯರೋಗಕ್ಕೆ ಅಂತಾ ಸಂಶೋಧಿಸಿದ್ದ ಲಸಿಕೆಯೇ ಕೊರೊನಾ ಸೋಂಕಿಗೂ ಉಪಯೋಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕ್ಷಯರೋಗವೂ ಶ್ವಾಸಕೋಶ ಸಂಬಂಧಿ ರೋಗವಾಗಿದೆ. ಕೋಟ್ಯಂತರ ಜನರನ್ನು ಬಲಿಪಡೆದಿದ್ದ ಕ್ಷಯರೋಗಕ್ಕೆ 1921ರಲ್ಲೇ ವ್ಯಾಕ್ಸಿನ್ ಸಂಶೋಧಿಸಲಾಗಿತ್ತು. ಪೋಲಿಯೋ ಲಸಿಕೆಯ ರೀತಿ ಬಿಸಿಜಿ (BCG) ಲಸಿಕೆಯನ್ನೂ ನವಜಾತ ಶಿಶುಗಳಿಗೆ ನೀಡಲಾಗುತ್ತದೆ.

ಟ್ರಂಪ್‌ಗೆ ವ್ಯಾಕ್ಸಿನ್ ಶಾಕ್, 'ದೊಡ್ಡಣ್ಣ'ನಿಗೆ ಭಾರಿ ಮುಖಭಂಗ..?ಟ್ರಂಪ್‌ಗೆ ವ್ಯಾಕ್ಸಿನ್ ಶಾಕ್, 'ದೊಡ್ಡಣ್ಣ'ನಿಗೆ ಭಾರಿ ಮುಖಭಂಗ..?

ಆದರೆ ಡ್ರಾಪ್ಸ್‌ನಂತೆ ಅಲ್ಲ, ಬದಲಾಗಿ ಚುಚ್ಚುಮದ್ದಾಗಿ ಮಗುವಿನ ಎಡಗೈ ತೋಳಿನ ಮೇಲ್ಭಾಗದಲ್ಲಿ ನೀಡಲಾಗುತ್ತದೆ. ಹೀಗೆ ಚಿಕ್ಕ ವಯಸ್ಸಿನಲ್ಲೇ ಬಿಸಿಜಿ ಪಡೆದಿದ್ದರೂ, ಬ್ರಿಟನ್ ಮೂಲದ ಮಂದಿ ಮತ್ತೊಮ್ಮೆ ಬಿಸಿಜಿ ಲಸಿಕೆ ಪಡೆಯಲು ಸಿದ್ಧರಾಗಿದ್ದಾರೆ.

ಭಾರತೀಯ ತಜ್ಞರಿಂದಲೇ ಮೊದಲು ಪ್ರಸ್ತಾವನೆ..!

ಭಾರತೀಯ ತಜ್ಞರಿಂದಲೇ ಮೊದಲು ಪ್ರಸ್ತಾವನೆ..!

ಜಗತ್ತಿನ ವೈಜ್ಞಾನಿಕ ಲೋಕದಲ್ಲಿ ಭಾರತದ ಹೆಸರು ಸಾವಿರಾರು ವರ್ಷಗಳಿಂದಲೂ ರಾರಾಜಿಸುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಈ ಬಿಸಿಜಿ ಲಸಿಕೆ. ಅಂದಹಾಗೆ ಡೆಡ್ಲಿ ಕೊರೊನಾ ವಿರುದ್ಧ ಬಿಸಿಜಿ (BCG) ಲಸಿಕೆಯನ್ನ ಬಳಸಬಹುದು ಎಂದು ಮೊದಲಿಗೆ ಪ್ರಸ್ತಾಪಿಸಿದ್ದೇ ಭಾರತ ಮೂಲದ ತಜ್ಞರು.

ತಮಿಳುನಾಡಿನಲ್ಲಿ ಕಳೆದ ಜುಲೈ ತಿಂಗಳಿನಲ್ಲೇ ಈ ಪ್ರಸ್ತಾವನೆ ಕೇಳಿಬಂದಿತ್ತು. ಆದರೆ ಈಗ ಯುರೋಪ್‌ನಲ್ಲಿ 2ನೇ ಅಲೆ ಹೊಡೆತ ಜೋರಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬ್ರಿಟನ್, ಒಮ್ಮೆ ಬಿಸಿಜಿ (BCG) ಲಸಿಕೆಯನ್ನೂ ಟ್ರೈ ಮಾಡೋಣ ಅಂತಾ ಮುಂದಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯನ್ನು ಇಳಿಸುವುದೇ ಈ ಪ್ರಯತ್ನದ ಗುರಿಯಾಗಿದೆ. ಹಾಗೇ ತೀವ್ರ ಉಸಿರಾಟದ ತೊಂದರೆ ಅನುಭವಿಸುವ ಕೊರೊನಾ ಸೋಂಕಿತರಿಗೆ ತಕ್ಷಣದ ಪರಿಹಾರವಾಗಿ ಬಿಸಿಜಿ ಲಸಿಕೆ ನೀಡಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.

ಯಾವುದೂ ಇನ್ನೂ ಫೈನಲ್ ಆಗಿಲ್ಲ

ಯಾವುದೂ ಇನ್ನೂ ಫೈನಲ್ ಆಗಿಲ್ಲ

ಲಸಿಕೆ (ವ್ಯಾಕ್ಸಿನ್)ಗಳ ಬಳಕೆ ಔಷಧಗಳಷ್ಟು ಸುಲಭವಲ್ಲ. ಏಕೆಂದರೆ ಔಷಧಕ್ಕೂ ಹಾಗೂ ಲಸಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಲಸಿಕೆಗಳಿಂದ ಸೈಡ್ ಎಫೆಕ್ಟ್ ಹೆಚ್ಚು. ಹೀಗಾಗಿ ಯಾವುದೇ ಲಸಿಕೆಯನ್ನು ಸೋಂಕಿತರ ಮೇಲೆ ಪ್ರಯೋಗ ಮಾಡುವ ಮೊದಲು ಪರೀಕ್ಷೆಗಳು ಅಗತ್ಯ. ಈಗಾಗಲೇ 100 ವರ್ಷಗಳಿಂದ ಬಿಸಿಜಿ(BCG) ಲಸಿಕೆ ಬಳಕೆಯಲ್ಲಿದ್ದರೂ, ಕೊರೊನಾ ಸೋಂಕಿತರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗದು. ಇದೇ ಕಾರಣಕ್ಕೆ ಬ್ರಿಟನ್ ಮೂಲದ ತಜ್ಞರು ಮೊದಲು 1000 ಜನರ ಮೇಲೆ ಪ್ರಯೋಗ ಮಾಡಲು ನಿರ್ಧರಿಸಿದ್ದಾರೆ. ಪ್ರಯೋಗ ಸಕ್ಸಸ್ ಆದ ನಂತರ ಕೊರೊನಾ ಸೋಂಕಿತರಿಗೆ ಬಿಸಿಜಿ ಲಸಿಕೆ ನೀಡುವ ಬಗ್ಗೆ ತೀರ್ಮಾನವಾಗುತ್ತೆ.

ಕೊರೊನಾವೈರಸ್ ಲಸಿಕೆ ಸಂಶೋಧನೆಯಲ್ಲಿ ಭಾರತವೇ ಬೆಸ್ಟ್!ಕೊರೊನಾವೈರಸ್ ಲಸಿಕೆ ಸಂಶೋಧನೆಯಲ್ಲಿ ಭಾರತವೇ ಬೆಸ್ಟ್!

ಕೊರೊನಾ ಹಾಗೂ ಕ್ಷಯರೋಗದ ಲಕ್ಷಣ

ಕೊರೊನಾ ಹಾಗೂ ಕ್ಷಯರೋಗದ ಲಕ್ಷಣ

ಟಿಬಿ ಸೋಂಕು ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ ಅಥವಾ ಮಾತನಾಡುವಾಗ ಗಾಳಿಯ ಮೂಲಕವಾಗಿ ಹರಡುತ್ತದೆ. ಇದು ಸಾಮಾನ್ಯವಾಗಿ ಜನಸಮೋಹ ಇರುವ ಸಂದರ್ಭದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಸ್ಪ್ರೆಡ್ ಆಗುತ್ತದೆ. ಉಸಿರೆಳೆದಾಗ ಮೊದಲಿಗೆ ಬ್ಯಾಕ್ಟೀರಿಯಾ ಶ್ವಾಸಕೋಶವನ್ನೇ ಆಕ್ರಮಿಸುತ್ತದೆ ಹಾಗೇ ನಂತರ ಇತರ ಅಂಗಗಳಿಗೂ ಹರಡಬಹುದು. ಕ್ಷಯರೋಗದ ಲಕ್ಷಣವೆಂದರೆ ನಿರಂತರವಾದ ಕೆಮ್ಮು, ಸಾಧಾರಣ ಜ್ವರ, ತೂಕ ಕಮ್ಮಿ ಆಗುವುದು, ಎದೆ ನೋವು ಹಾಗೂ ನಿರಂತರ ಬೆವರುವಿಕೆ ಮುಂತಾದ ಲಕ್ಷಣ ಕಂಡುಬರುತ್ತವೆ. ಮೇಲೆ ತಿಳಿಸಿರುವ ಹಲವು ರೋಗಲಕ್ಷಣಗಳನ್ನು ನಾವು ಕೊರೊನಾ ಸೋಂಕಿತರಲ್ಲೂ ಕಾಣಬಹುದು.

ಗೇಮ್ ಚೇಂಜರ್ BCG Vaccine

ಗೇಮ್ ಚೇಂಜರ್ BCG Vaccine

19ನೇ ಶತಮಾನದಲ್ಲಿ ಕ್ಷಯರೋಗ ಅಟ್ಟಹಾಸ ಮೆರೆಯುತ್ತಿತ್ತು. ಆಗಲೇ ಮಾರಕ ಕ್ಷಯರೋಗಕ್ಕೆ ವ್ಯಾಕ್ಸಿನ್ ಸಕ್ಸಸ್ ಆಗಿತ್ತು. 1921ರಲ್ಲಿ ಲಸಿಕೆ ಸಕ್ಸಸ್ ಆಗಿತ್ತು. ‘ಮೈಕೋಬ್ಯಾಕ್ಟೀರಿಯಂ ಟ್ಯುಬೆರ್ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾ ಕ್ಷಯರೋಗಕ್ಕೆ ಕಾರಣವಾಗುತ್ತದೆ. 19 ನೇ ಶತಮಾನದ ಆರಂಭದಲ್ಲಿ ‘ಟಿಬಿ' ಸಾಂಕ್ರಾಮಿಕ ರೋಗ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಜರ್ಮನ್ ವಿಜ್ಞಾನಿ ರಾಬರ್ಟ್ ಕೊಚ್ ‘ಟಿಬಿ' ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾ ಯಾವುದೆಂದು ಕಂಡುಹಿಡಿದರು. ತದನಂತರ ಟಿಬಿ ನಿರ್ಮೂಲನೆಗೆ ಅನೇಕ ಲಸಿಕೆಗಳು ಮಾರುಕಟ್ಟೆಗೆ ಬಂದವು.

ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್ಕೊವಿಡ್ 19 ಲಸಿಕೆ ಉಚಿತವಾಗಿ ಹಂಚಲು ಮುಂದಾದ ಟ್ರಂಪ್

ಕ್ಷಯರೋಗದಲ್ಲಿ 2 ವಿಧಗಳಿವೆ

ಕ್ಷಯರೋಗದಲ್ಲಿ 2 ವಿಧಗಳಿವೆ

ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗವಾಗಿರುವ ಕ್ಷಯ, 2 ರೀತಿಯಲ್ಲಿ ಬಾಧಿಸುತ್ತದೆ. ಮೊದಲನೇಯದಾಗಿ ಸುಪ್ತ ಟಿಬಿ (Latent TB). ಈ ರೀತಿಯಲ್ಲಿ ಕ್ಷಯರೋಗ ಬಾಧಿಸುವಾಗ ಬ್ಯಾಕ್ಟೀರಿಯಾ ದೇಹದಲ್ಲಿ ನಿಷ್ಕ್ರಿಯ ಸ್ಥಿತಿಯಲ್ಲಿ ಇರುತ್ತದೆ. ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣವನ್ನೇ ತೋರುವುದಿಲ್ಲ. ಆದರೆ ಯಾವ ಸಂದರ್ಭದಲ್ಲಾದರೂ ಅವು ಆಕ್ಟಿವ್ ಆಗಿ ದೇಹದ ಮೇಲೆ ದಾಳಿ ಮಾಡಬಹುದು. ಟಿಬಿ ರೋಗದಲ್ಲಿ ಮತ್ತೊಂದು ವಿಧ ‘ಸಕ್ರಿಯ ಟಿಬಿ' (Active TB). ಈ ಸಂದರ್ಭದಲ್ಲಿ ಬ್ಯಾಕ್ಟೀರಿಯಾ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ ಹಾಗೂ ಇತರರಿಗೂ ಸಾಂಕ್ರಾಮಿಕ ರೋಗಗಳಂತೆ ಹರಡುತ್ತದೆ.

Recommended Video

AB DE Villiers ಆಟಕ್ಕೆ ಭಾರತದ ಕೋಚ್ ಫುಲ್ ಫಿದಾ | Oneindia Kannada
BCG Vaccine ನೀಡುವುದು ಹೇಗೆ..?

BCG Vaccine ನೀಡುವುದು ಹೇಗೆ..?

ಕೊರೊನಾ ಸೋಂಕಿಗೆ ರಾಮಬಾಣ ಎನ್ನಲಾಗುತ್ತಿರುವ ಬಿಸಿಜಿ (BCG) ಲಸಿಕೆ ನೀಡುವ ವಿಧಾನವೇ ವಿಶೇಷ. ಸಾಮಾನ್ಯವಾಗಿ ಶಿಶುಗಳಿಗೆ ಬಿಸಿಜಿ ನೀಡಲಾಗುತ್ತದೆ. ಎಡಗೈ ತೋಳಿನ ಮೇಲ್ಭಾಗದಲ್ಲಿ ಲಸಿಕೆ ನೀಡಲಾಗುತ್ತದೆ. ಚುಚ್ಚುಮದ್ದಿನ ರೂಪದಲ್ಲಿ ‘ಬಿಸಿಜಿ' ಲಸಿಕೆ ನೀಡಿದ 1 ವಾರದ ನಂತರ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಚಿಕ್ಕ ಊತ ಕಾಣಿಸಕೊಳ್ಳಬಹುದು, ಕೆಲದಿನಗಳ ನಂತರ ಪೊರೆಯಾಗಿ ಕಾಣಿಸುತ್ತದೆ. ಲಸಿಕೆ ನೀಡಿರುವ ಜಾಗದಲ್ಲಿ ಚುಚ್ಚುಮದ್ದಿನ ಗುರುತು ದೊಡ್ಡವರಾದ ನಂತರ ಕೂಡ ಉಳಿಯುವ ಸಾಧ್ಯತೆ ಇರುತ್ತದೆ. ಇದೀಗ ಕೊರೊನಾ ಸೋಂಕಿಗೆ BCG ಪಕ್ಕಾ ವರ್ಕ್ ಆಗುತ್ತದೆ ಎಂದರೆ ಮತ್ತೊಮ್ಮೆ ಇದೇ ಲಸಿಕೆ ಗೇಮ್ ಚೇಂಜರ್ ಆಗುತ್ತದೆ.

ಕೊರೊನಾ ಮಹಾಮಾರಿಯಿಂದ ಭಾರತವನ್ನು ಕಾಪಾಡುತ್ತಿದೆಯಾ BCG ಲಸಿಕೆ?ಕೊರೊನಾ ಮಹಾಮಾರಿಯಿಂದ ಭಾರತವನ್ನು ಕಾಪಾಡುತ್ತಿದೆಯಾ BCG ಲಸಿಕೆ?

English summary
Scientists in the UK have begun testing the BCG vaccine against corona. BCG vaccine was invented for TB at 1921.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X