ಆಗ ಶಾಲಾ ಶಿಕ್ಷಕ, ಈಗ ಬಸವಕಲ್ಯಾಣದ ಬಿಜೆಪಿ ಶಾಸಕ!
ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಯ ಶರಣು ಸಲಗರ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಶರಣು ಸಲಗರ್ ಹಿನ್ನಡೆ ನೋಡಿದರೆ ಕನಸು, ಛಲ, ಹಠ, ಮಹತ್ವಾಕಾಂಕ್ಷೆಗಳು ಕಾಣುತ್ತವೆ. ಶಾಲಾ ಶಿಕ್ಷಕರಾಗಿದ್ದ ಅವರು ಈಗ ಶಾಸಕರಾಗಿದ್ದಾರೆ.
ಹೈಸ್ಕೂಲ್ ಶಿಕ್ಷಕರಾಗಿದ್ದ ಶರಣು ಸಲಗರ್ ವಿಧಾನಸಭೆ ಪ್ರವೇಶ ಮಾಡಿದ್ದೇ ಒಂದು ರೋಚಕ ಕಥೆ. ಬಿಎಸ್ಸಿ-ಬಿಎಡ್ ಪದವೀಧರರಾಗಿದ್ದ ಸಲಗರ್ ಹೆಚ್ಚು ಕಾಲ ಪಾಠ ಮಾಡಿಲ್ಲ. ರಾಜಕೀಯದ ತುಮುಲ ಅವರನ್ನು ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಡುವಂತೆ ಮಾಡಿತು.
ಶರಣು ಸಲಗರ ಅವರು ಬೀದರ್ ಜಿಲ್ಲೆಯವರಲ್ಲ. ಅವರ ಸ್ವಂತ ಊರು ಕಲಬುರಗಿ ಜಿಲ್ಲೆಯ ಈಗಿನ ಕಮಲಾಪುರ ತಾಲೂಕಿನ ವಿಕೆ ಸಲಗರ್ ಗ್ರಾಮ. ಆದರೆ ಬಸವಕಲ್ಯಾಣ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಗ್ರಾಮವಿದಾಗಿದೆ.

ಶಾಸಕರ ಪಿಎ ಆಗಿ ಕೆಲಸ ಮಾಡಿದ್ದಾರೆ
ಶರಣು ಸಲಗರ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಪ್ತ ಸಹಾಯಕರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಮಾಜಿ ಸಚಿವ ರೇವುನಾಯಕ ಬೆಳಮಗಿ, ಹಾಲಿ ಬಸವಕಲ್ಯಾಣ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರಣು ಸಲಗರಗೆ ಮತ್ತಿಮೂಡ್‌ಗೆ ಗೆಲುವು ಸಿಕ್ಕ ಬಳಿಕ ರಾಜಕೀಯದ ಕನಸು ಕಾಣುವಂತೆ ಮಾಡಿತು.

2023ರ ಚುನಾವಣೆಗೆ ಸ್ಪರ್ಧೆಯ ಕನಸು
2-3 ವರ್ಷಗಳ ಹಿಂದೆ ಬಸವಕಲ್ಯಾಣಕ್ಕೆ ಆಗಮಿಸಿದ ಶರಣು ಸಲಗರ 2023ರ ವಿಧಾನಸಭೆ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಹೊಂದಿದ್ದರು. ಆದರೆ ಕೋವಿಡ್‌ನಿಂದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅಕಾಲಿಕವಾಗಿ ನಿಧನ ಹೊಂದಿದ್ದರಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಯಿತು. ಡಜನ್‌ಗೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಗಳ ನಡುವೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಶರಣು ಸಲಗರ ಯಶಸ್ವಿಯಾದರು.

ಶಹಶೀಲ್ದಾರ್ ಆಗಿದ್ದ ಶಾಸಕರ ಪತ್ನಿ
ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದ ಶರಣು ಸಲಗರ ಕಳೆದ ವರ್ಷ ಕೋವಿಡ್ ಕಾಲದಲ್ಲಿ ಬಡವರಿಗೆ ನೆರವಿನ ಹಸ್ತ ಚಾಚಿದ್ದರು. ಶರಣು ಸಲಗರ ಅವರ ಪತ್ನಿ ಸಾವಿತ್ರಿ ಸಲಗರ ಬಸವಕಲ್ಯಾಣದ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಉಪಚುನಾವಣೆ ಘೋಷಣೆಯಾದ ಬಳಿಕ ವರ್ಗಾವಣೆಗೊಂಡಿದ್ದರು. ಕೆಎಎಸ್ ಅಧಿಕಾರಿಯಾಗಿರುವ ಸಾವಿತ್ರಿ ಸಲಗರ ತಹಶೀಲ್ದಾರ್ ಆಗಿದ್ದ ಕ್ಷೇತ್ರದಲ್ಲಿ ಈಗ ಪತಿ ಶರಣು ಸಲಗರ ಶಾಸಕರಾಗಿದ್ದಾರೆ.
Recommended Video

ಸಾಲು-ಸಾಲು ಸವಾಲುಗಳು
ಬಸವಕಲ್ಯಾಣ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ಆರಂಭಿಸುವ ಬಿ. ಎಸ್. ಯಡಿಯೂರಪ್ಪ ಭರವಸೆ ಹಾಗೇ ಇದೆ. ನೂತನ ತಾಲೂಕಾಗಿ ಘೋಷಣೆಯಾಗಿ ವರ್ಷಗಳೇ ಉರುಳುತ್ತಿವೆ. ಆದರೆ, ಹುಲಸೂರ್ ಕೇಂದ್ರವನ್ನು ಗ್ರಾಮ ಪಂಚಾಯತ್ ಕೇಂದ್ರದಿಂದ ಕನಿಷ್ಠ ಪಟ್ಟಣ ಪಂಚಾಯತ್ ದರ್ಜೆಗೂ ಮೇಲ್ದರ್ಗೇರಿಸಿಲ್ಲ. ಬಹುಪಾಲು ಕೃಷಿಕರೇ ಇರುವ ಬಸವಕಲ್ಯಾಣ ಹಾಗೂ ಹುಲಸೂರ್ ತಾಲೂಕುಗಳಲ್ಲಿ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ. ಚುಳಕಿನಾಲಾ ಯೋಜನೆ ಯಶಸ್ವಿಗೊಳಿಸಬೇಕಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳಬೇಕಿದ್ದ ಐತಿಹಾಸಿಕ ಬಸವಕಲ್ಯಾಣ ನಗರದಲ್ಲಿ ಮೊಟ್ಟ ಮೊದಲು ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡುವ ಜವಾಬ್ದಾರಿ ನೂತನ ಶಾಸಕರ ಮೇಲಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications