Get Updates
Get notified of breaking news, exclusive insights, and must-see stories!

ಬಸವ ಜಯಂತಿ 2022: ಬಸವೇಶ್ವರರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುವ ಮಹತ್ವ ತಿಳಿಯಿರಿ

ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಮಹಾ ಸಂದೇಶವನ್ನು ನೀಡಿದ ಬಸವಣ್ಣನವರ ಜಯಂತಿಯನ್ನು ಇಂದು ಆಚರಿಸಲಾಗುತ್ತದೆ. ಬಸವ ಜಯಂತಿ ಹಿಂದೂ ಹಬ್ಬವಾಗಿದ್ದು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ಸಂದರ್ಭವು 12 ನೇ ಶತಮಾನದ ಕವಿ-ತತ್ವಜ್ಞಾನಿ ಮಹಾತ್ಮ ಬಸವೇಶ್ವರರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಬಸವಣ್ಣ ಅವರು ಶೈವ ಧರ್ಮದ ಭಕ್ತಿ ಚಳವಳಿಯಲ್ಲಿ ಪ್ರಸಿದ್ಧ ಸಂತರಾಗಿದ್ದರು. ಇವರು ರಾಜನೀತಿಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದರು.

ಬಸವ ಜಯಂತಿ ಮೇ 3ರಂದು ಆಚರಿಸಲಾಗುತ್ತದೆ. ಮಹಾತ್ಮಾ ಬಸವೇಶ್ವರರು ಲಿಂಗಾಯತ ಪಂಥದ ಸ್ಥಾಪಕ ಸಂತರಾಗಿದ್ದರಿಂದ ಬಸವ ಜಯಂತಿಯನ್ನು ದಕ್ಷಿಣ ಭಾರತದ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚಾಗಿ ಆಚರಿಸುತ್ತಾರೆ. ಜೊತೆಗೆ ಅವರ ಜನ್ಮದಿನವನ್ನು ಹೊಸ ಯುಗದ ಆರಂಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಬಸವಣ್ಣ ಯುಗ ಅಥವಾ ಬಸವೇಶ್ವರ ಯುಗ ಎಂದು ಕರೆಯಲಾಗುತ್ತದೆ. ಲಿಂಗಾಯತರು ಯಾರು, ಅವರ ತತ್ವಗಳೇನು ಮತ್ತು ಬಸವ ಜಯಂತಿಯನ್ನು ಹೇಗೆ ಆಚರಿಸಲಾಗುತ್ತದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.

Basava Jayanti 2022 Date, History and Significance of Basaveshwara Birth Anniversary

ಲಿಂಗಾಯತ ಇತಿಹಾಸ ಮತ್ತು ಬಸವ ಜಯಂತಿ ಆಚರಣೆ

ಬಸವ ಜಯಂತಿಯನ್ನು ಪ್ರಾಥಮಿಕವಾಗಿ ಲಿಂಗಾಯತ ಅಥವಾ ವೀರ ಶೈವ ಧರ್ಮವನ್ನು ಪುನರುಜ್ಜೀವನಗೊಳಿಸಿದ ಬಸವಣ್ಣನನ್ನು ಗೌರವಿಸಲು ಆಚರಿಸಲಾಗುತ್ತದೆ. ಲಿಂಗಾಯತ ಧರ್ಮವು ಹಿಂದೂ ಪಂಗಡವಾಗಿದ್ದು, ಭಗವಾನ್ ಶಿವನನ್ನು ತಮ್ಮ ಸರ್ವೋಚ್ಚ ದೇವರೆಂದು ನಂಬಲಾಗುತ್ತದೆ. ಬಸವಣ್ಣನವರು ಸಾಮಾಜಿಕ ತಾರತಮ್ಯವನ್ನು ತಿರಸ್ಕರಿಸಿದವರು. ವೀರಶೈವಧರ್ಮವು ವೇದಗಳು ಮತ್ತು ಪುರಾಣಗಳ ಅಧಿಕಾರವನ್ನು ನಂಬುವುದಿಲ್ಲ. ಲಿಂಗಾಯತರಲ್ಲಿ ಭಗವಾನ್ ಶಿವನನ್ನು ಸೂಚಿಸುವ ಇಷ್ಟಲಿಂಗ ಹಾರವನ್ನು ಧರಿಸುವ ಅಭ್ಯಾಸವನ್ನು ಪರಿಚಯಿಸಿದ ಬಸವ ಶೈವ ಧರ್ಮದ ಕಟ್ಟಾ ಅನುಯಾಯಿಯಾಗಿದ್ದು, ಲಿಂಗ ಮತ್ತು ವರ್ಗ ತಾರತಮ್ಯದಿಂದ ಎಲ್ಲಾ ಪುರುಷರು ಮತ್ತು ಮಹಿಳೆಯರನ್ನು ಮುಕ್ತಗೊಳಿಸುವ ಹೊಸ ಕಾನೂನುಗಳನ್ನು ಪ್ರಾರಂಭಿಸಿದರು.

Basava Jayanti 2022 Date, History and Significance of Basaveshwara Birth Anniversary

ಕರ್ನಾಟಕದಲ್ಲಿ 1105 CE ನಲ್ಲಿ ಜನಿಸಿದ ಬಸವನ ಪ್ರಮುಖ ಲಿಂಗಾಯತ ಕೃತಿಗಳಲ್ಲಿ ಷಟ್-ಸ್ಥಳ-ವಚನ, ಕಾಲ-ಜ್ಞಾನ-ವಚನ, ಮಂತ್ರ-ಗೋಪ್ಯ, ಘಟಚಕ್ರ-ವಚನ ಮತ್ತು ರಾಜ-ಯೋಗ-ವಚನಗಳಂತಹ ವಚನಗಳು ಸೇರಿವೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲೂ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ. ಬಸವ ಜಯಂತಿಯ ಆಚರಣೆಯು ವರ್ಣರಂಜಿತ ಮೆರವಣಿಗೆಗಳು, ವಿಚಾರ ಸಂಕಿರಣಗಳು ಮತ್ತು ಸಮಾಜದ ಬಗ್ಗೆ ಬಸವನ ತತ್ವದ ಬಗ್ಗೆ ಜನರಿಗೆ ತಿಳಿಸುವ ಕಾರ್ಯಾಗಾರಗಳೊಂದಿಗೆ ಅಪಾರ ಹರ್ಷೋದ್ಗಾರಗಳನ್ನು ಒಳಗೊಂಡಿರುತ್ತದೆ.

Recommended Video

      ಡೆಲ್ಲಿ ತಂಡವನ್ನು ಸೋಲಿಸಿ ಸಂಭ್ರಮಿಸುತ್ತಿರೋ ಲಕ್ನೋ ಟೀಂ ಪಾರ್ಟಿ ವಿಡಿಯೋ ವೈರಲ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+