Baba Vanga Predictions: ಈ ಮಳೆ 2025ರಲ್ಲಿ ಪ್ರಪಂಚದ ಅಂತ್ಯದ ಮುನ್ಸೂಚನೆ!
ಎಲ್ಲೆಡೆ ಅನಿರೀಕ್ಷಿತ ಮಳೆ ಹೆಚ್ಚಾಗಿದೆ. ಚಂಡಮಾರುತ ಅಪ್ಪಳಿಸುತ್ತಿದೆ. ಈ ನಡುವೆ ಬಾಬಾ ವಂಗಾ ಹೇಳಿದ ಭವಿಷ್ಯ ನೆನಪಾಗುತ್ತಿದೆ. ಹಾಗಾದರೆ ಬಾಬಾ ವಂಗಾ ಹೇಳಿದ ಭವಿಷ್ಯವಾಣಿ ಏನು? 2025ರಲ್ಲಿ ಏನಾಗುತ್ತೆ? ಪ್ರಪಂಚದಲ್ಲಿ ನಡೆಯುವ ಆ ಕಹಿ ಘಟನೆಗಳು ಯಾವುವು? ಬಾಬಾ ವಂಗಾ ನುಡಿದ ಆಘಾತಕಾರಿ ಭವಿಷ್ಯವೇನು ಎಂದು ತಿಳಿಯೋಣ.
ಜಗತ್ತಿನಲ್ಲಿ ಅನೇಕ ಪ್ರವಾದಿಗಳಿದ್ದಾರೆ. ಅವರಲ್ಲಿ ಬಾಬಾ ವಂಗಾ ಕೂಡ ಒಬ್ಬರು. ಆದರೆ ಇವರು ನುಡಿದ ಭವಿಷ್ಯವಾಣಿಗಳು ಅತ್ಯಂತ ಪ್ರಸಿದ್ಧವಾಗಿವೆ. ಯಾಕೆಂದರೆ ಅವರು ಪ್ರತಿ ವರ್ಷ ಸಂಭವಿಸುವ ಘಟನೆಗಳನ್ನು ಊಹಿಸಿದ್ದಾರೆ. ಇಲ್ಲಿಯವರೆಗೆ ಅವರು ನುಡಿದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ.

ಹೌದು.. ಬಾಬಾ ವಂಗಾ ಬಲ್ಗೇರಿಯಾದವರು. ಅವರು 12ನೇ ವಯಸ್ಸಿನಲ್ಲಿ ತಮ್ಮ ದೃಷ್ಟಿ ಕಳೆದುಕೊಂಡರು. ಆದರೆ ಅವರ ದೃಷ್ಟಿ ಹೋದ ನಂತರ ಭವಿಷ್ಯವನ್ನು ಊಹಿಸುವ ಶಕ್ತಿಯನ್ನು ಪಡೆದರು. ಅವರು ಸಾಯುವ ಮೊದಲು ಪ್ರತಿ ವರ್ಷ ಸಂಭವಿಸುವ ಘಟನೆಗಳನ್ನು ಊಹಿಸಿ ಅವುಗಳನ್ನು ಟಿಪ್ಪಣಿಗಳಾಗಿ ಬರೆದಿದ್ದಾರೆ. ಹೀಗೆ ಇಲ್ಲಿಯವರೆಗೆ ಅವರ ನುಡಿದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ
ಹೀಗಾಗಿ ಪ್ರತಿ ವರ್ಷ ಹುಟ್ಟುವ ಮೊದಲು ಆ ವರ್ಷದಲ್ಲಿ ಯಾವ ರೀತಿಯ ಒಳ್ಳೆಯ ಮತ್ತು ಕೆಟ್ಟ ವಿಷಯಗಳು ಸಂಭವಿಸುತ್ತವೆ ಎಂಬುದರ ಕುರಿತು ಬಾಬಾ ವಂಗಾ ಅವರ ಭವಿಷ್ಯವಾಣಿಗಳನ್ನು ತಿಳಿಯಲು ಅನೇಕ ಜನರು ಉತ್ಸುಕರಾಗಿರುತ್ತಾರೆ. ಇನ್ನೇನು ನಾವು ಒಂದೆರಡು ತಿಂಗಳುಗಳಲ್ಲಿ 2025 ಅನ್ನು ಪ್ರವೇಶಿಸುತ್ತೇವೆ. ಮುಂಬರುವ 2025ರಲ್ಲಿ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಏನೆಂದು ನೋಡೋಣ.
2025ರಲ್ಲಿ ಏನಾಗಬಹುದು?
2025ರ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಸ್ವಲ್ಪ ಅಶುಭವಾಗಿವೆ. ಏಕೆಂದರೆ ಬಾಬಾ ವಂಗಾ 2025 ರಲ್ಲಿ ಪ್ರಪಂಚದ ಅಂತ್ಯ ಪ್ರಾರಂಭವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಟಿಪ್ಪಣಿಯಲ್ಲಿ 5079ರಲ್ಲಿ ಪ್ರಪಂಚ ಅಂತ್ಯಗೊಳ್ಳುತ್ತದೆ, ಭೂಮಿಯ ಮೇಲೆ ಇನ್ನು ಮುಂದೆ ಮನುಷ್ಯರು ಇರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

2025ರಲ್ಲಿ ಬಿಗ್ ಕ್ಲಾಷ್
ಹೌದು... ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2025 ರಲ್ಲಿ ದುರಂತ ಘಟನೆಗಳು ಸಂಭವಿಸುತ್ತವೆ. ಅದು ಮನುಕುಲದ ಅವನತಿಗೆ ಕಾರಣವಾಗುತ್ತದೆ. ಯುರೋಪ್ನಲ್ಲಿ ದುರಂತ ಸಂಘರ್ಷ ಸಂಭವಿಸಲಿದೆ. ಈ ಸಂಘರ್ಷ ಯುರೋಪ್ ಖಂಡಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
2025ರ ನಂತರ ಏನಾಗುತ್ತದೆ?
2025 ರ ಹೊತ್ತಿಗೆ, ಸಂಘರ್ಷದಿಂದಾಗಿ ಜನಸಂಖ್ಯೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅದರ ನಂತರ 2028ರಲ್ಲಿ ಹೊಸ ಸಂಪನ್ಮೂಲಗಳ ಹುಡುಕಾಟದಲ್ಲಿ ಮಾನವರು ಶುಕ್ರ ಗ್ರಹವನ್ನು ತಲುಪುತ್ತಾರೆ ಎಂದು ಬಾಬಾ ವಂಗಾ ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ. ನಂತರ 2033ರಲ್ಲಿ ಬೃಹತ್ ಮಂಜುಗಡ್ಡೆಗಳು ಕರಗುತ್ತವೆ. ಇದರಿಂದ ಸಮುದ್ರ ಮಟ್ಟ ಹೆಚ್ಚಾಗಲಿದೆ. ದೊಡ್ಡ ಗಾತ್ರದ ಅಲೆಗಳು ಅಪ್ಪಳಿಸಿ ಅಪಾರ ಪ್ರಾಣ ಹಾನಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ನಂತರ ಅವರು 2076 ರಲ್ಲಿ ಕಮ್ಯುನಿಸಂನ ವಾಪಸಾತಿ ಮತ್ತು 2130 ರಲ್ಲಿ ವಿದೇಶಿಯರೊಂದಿಗೆ ಮಾನವ ಸಂಪರ್ಕವನ್ನು ಬಾಬಾ ವಂಗಾ ಅವರು ಊಹಿಸುತ್ತಾರೆ. 2170 ರ ಹೊತ್ತಿಗೆ ಹವಾಮಾನ ಬದಲಾವಣೆಯು ಭೂಮಿಯ ಮೇಲೆ ಸಾಕಷ್ಟು ವಿನಾಶವನ್ನು ಉಂಟುಮಾಡುತ್ತದೆ. ಭೂಮಿಯ ಮೇಲೆ ಬರ ಹೆಚ್ಚಾಗಲಿದ್ದು ಇದು ಮಾನವ ಜೀವನವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಅಲ್ಲದೆ ಬಾಬಾ ವಂಗಾ 3005 ರಲ್ಲಿ ಭೂಮಿ ಮಂಗಳನೊಂದಿಗೆ ಯುದ್ಧ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 3797ರಲ್ಲಿ ಜೀವಸಂಕುಲ ಭೂಮಿಯಿಂದ ಅಗಲಿ, ಅಂತಿಮವಾಗಿ 5079 ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಮತ್ತು ಮಾನವ ಜನಾಂಗ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.












Click it and Unblock the Notifications