‘ಕೊರೊನಾ’ ಕೂಪಕ್ಕೆ ಮತ್ತೆ ಜಾರಿತಾ ಅಮೆರಿಕ..? ಹಾಗಾದ್ರೆ ದೊಡ್ಡಣ್ಣನ ಕಥೆ ಏನು..?
ನಾವು ಅಂದ್ರೆ ನಂಬರ್ 1, ನಾವು ಅಂದ್ರೆ ಶಕ್ತಿ, ನಾವು ಅಂದ್ರೆ ಹೀರೋಗಳು, ಜಗತ್ತನ್ನು ಕಾಪಾಡುವ ವೀರರು ಅಂತೆಲ್ಲ ಪೋಸ್ ಕೊಡುತ್ತಿದ್ದ ಅಮೆರಿಕದ ಬಣ್ಣ ಅಫ್ಘಾನಿಸ್ತಾನದಲ್ಲಿ ಬಟಾಬಯಲಾಗಿದೆ. ತಾಲಿಬಾನ್ ಪಡೆಯ ಎದುರು ಮುಗ್ಗರಿಸಿ ಬಿದ್ದಿರುವ ಅಮೆರಿಕ ಚಡಪಡಿಸುತ್ತಿದೆ. ಆದರೆ ಇಷ್ಟೇ ಸಾಕೆ? ಇನ್ನೂ ಬೇಕೆ? ಅಂತಾ ಡೆಡ್ಲಿ ಕೊರೊನಾ ಅಮೆರಿಕನ್ನರಿಗೆ ಶಾಕ್ ನೀಡಲು ಮುಂದಾಗಿದೆ.
ಹೌದು, ಅಮೆರಿಕದಲ್ಲಿ ಮತ್ತೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಸುಮಾರು 35 ಸಾವಿರ ಅಮೆರಿಕನ್ನರಿಗೆ ಕೊರೊನಾ ಕನ್ಫರ್ಮ್ ಆಗಿದೆ. ಲಸಿಕೆ ನೀಡಿದ್ದಾಯ್ತು, ಹೀಗಾಗಿ ಅಮೆರಿಕನ್ನರಿಗೆ ಕೊರೊನಾ ಬರಲ್ಲ ಅಂತಾ ಬಿಲ್ಡಪ್ ಕೊಡುತ್ತಿದ್ದ ಬೈಡನ್ ಆಡಳಿತಕ್ಕೆ ವೈರಸ್ ಆಘಾತ ನೀಡಿದೆ.
ಅದ್ರಲ್ಲೂ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಐಸಿಯು ಬೆಡ್‌ಗಳು ಮತ್ತೆ ತುಂಬುತ್ತಿವೆ. 20 ಲಕ್ಷಕ್ಕೂ ಹೆಚ್ಚು ಆ್ಯಕ್ಟಿವ್ ಕೇಸ್ ಇರುವ ಕ್ಯಾಲಿಫೋರ್ನಿಯಾ ರಾಜ್ಯ, ನಿನ್ನೆ ಬರೋಬ್ಬರಿ 6 ಸಾವಿರ ಹೊಸ ಕೇಸ್ ಕಂಡಿದೆ. ಕೊರೊನಾ ಇಳಿಕೆ ಕಾಣುತ್ತಿರುವ ಹೊತ್ತಲ್ಲೇ ಅಮೆರಿದಕ್ಲಿ ಇದು 4ನೇ ಅಲೆ ಭೀತಿ ಸೃಷ್ಟಿಸಿದೆ.

ವ್ಯಾಕ್ಸಿನ್ ಪಡೆದರೆ $7 ಸಾವಿರ..!
ಅಮೆರಿಕದಲ್ಲಿ ವ್ಯಾಕ್ಸಿನ್ ಪಡೆಯದವರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದು ಕಡೆ ಅಮೆರಿಕದಲ್ಲಿ ಕೊರೊನಾ 4ನೇ ಅಲೆಯ ಭೀತಿ ಸೃಷ್ಟಿಯಾಗಿದೆ. ಈಗಾಗಲೇ ಕೊರೊನಾದ 3 ಅಲೆಗಳನ್ನ ನೋಡಿ ಬೆಚ್ಚಿಬಿದ್ದಿರುವ ಅಮೆರಿಕದಲ್ಲಿ 4ನೇ ಅಲೆ ಎದ್ದಿದೆ. ಮೆಲ್ಲಗೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯವೂ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿಗೆ ಬಂದು ತಲುಪುತ್ತಿದೆ. ಹೀಗಾಗಿ ಅಲರ್ಟ್ ಆಗಿರುವ ಬೈಡನ್ ಆಡಳಿತ, ಆದಷ್ಟು ಬೇಗ ಬಾಕಿ ಇರುವ ತನ್ನೆಲ್ಲಾ ಪ್ರಜೆಗಳಿಗೆ ಕೊರೊನಾ ವ್ಯಾಕ್ಸಿನ್ ಹಾಕಿಸಲು ಪ್ಲ್ಯಾನ್ ಮಾಡಿದೆ. ಹೀಗಾಗಿ ಲಸಿಕೆ ಹಾಕಿಸಿಕೊಂಡರೆ 7 ಸಾವಿರ ರೂಪಾಯಿ ಹಣ ಕೊಡಲು ಮುಂದಾಗಿದೆ. ಈ ಬಗ್ಗೆ ಬೈಡನ್ ಕಚೇರಿಯಿಂದ ಖಡಕ್ ಆದೇಶ ಹೊರಬಿದ್ದಿದೆ.

ರಾಜ್ಯಗಳ ಹೆಗಲ ಮೇಲೆ ಹೊಣೆ
ಈಗಾಗಲೇ 2 ಟ್ರಿಲಿಯನ್ ಡಾಲರ್ ಮೊತ್ತದ ‘ಕೊರೊನಾ' ಪ್ಯಾಕೇಜ್‌ನ ಅಮೆರಿಕ ಸರ್ಕಾರ ಘೋಷಿಸಿದೆ. ಇದೇ ದುಡ್ಡಲ್ಲಿ ಸುಮಾರು 350 ಮಿಲಿಯನ್ ಡಾಲರ್ ಹಣವನ್ನು ಅಮೆರಿಕದ ಅರ್ಥ ವ್ಯವಸ್ಥೆ ಸರಿದೂಗಿಸಲು ಎತ್ತಿಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನ ಅಮೆರಿಕದ ರಾಜ್ಯಗಳಿಗೆ ತಲುಪಿಸಲಾಗಿದೆ. ಇದೇ ಹಣದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಸುಮಾರು 100 ಡಾಲರ್ ಅಂದ್ರೆ 7400 ರೂಪಾಯಿ ಸಹಾಯಧನ ನೀಡಲು ಸೂಚನೆ ನೀಡಲಾಗಿದೆ. ಬೈಡನ್ ಆಡಳಿತದಿಂದ ಸ್ಥಳೀಯ ಆಡಳಿತಗಳಿಗೆ ಈ ಬಗ್ಗೆ ಸಂದೇಶ ನೀಡಲಾಗಿದೆ.

ವಿಶ್ವಯದ್ಧದ ನಂತರ ಅತಿಹೆಚ್ಚು ಸಾವು
ಮಿತ್ರಪಡೆಗಳ ಪರ 2ನೇ ಮಹಾಯುದ್ಧದಲ್ಲಿ ಅಖಾಡ ಪ್ರವೇಶಿಸಿದ್ದ ದೊಡ್ಡಣ್ಣ ಅಮೆರಿಕ ಭಾರಿ ಸಾವು, ನೋವು ಅನುಭವಿಸಿತ್ತು. ಅಂದಾಜು 4 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು 2ನೇ ವಿಶ್ವಯುದ್ಧದಲ್ಲಿ ಮೃತಪಟ್ಟಿದ್ದರು. ಆದರೆ ಕೊರೊನಾ ಇದಕ್ಕಿಂತಲೂ ಹೆಚ್ಚಿನ ಸಾವು ನೋವು ಉಂಟುಮಾಡಿದೆ. 6 ಲಕ್ಷ 28 ಸಾವಿರಕ್ಕೂ ಹೆಚ್ಚು ಜನ ಅಮೆರಿಕದಲ್ಲಿ ಬಲಿಯಾಗಿದ್ದಾರೆ. ಅಮೆರಿಕದ ಕೆಲ ಪ್ರದೇಶಗಳಲ್ಲಿ ಕೊರೊನಾ ಕಾರಣದಿಂದ ಮೃತಪಟ್ಟವರನ್ನು ಮಣ್ಣು ಮಾಡುವುದಕ್ಕೂ ಜಾಗದ ಕೊರತೆ ಎದುರಾಗಿತ್ತು. ಇಂತಹ ಸಂದಿಗ್ಧ ಸ್ಥಿತಿಯಲ್ಲೇ ಅಮೆರಿಕದ ಅಧ್ಯಕ್ಷ ಬೈಡನ್ ಮತ್ತೊಮ್ಮೆ ಪುಟಿದೇಳುವ ಧೈರ್ಯ ತೋರಿದ್ದಾರೆ.

ಕೊರೊನಾ ಕೂಪದಲ್ಲಿ ಅಮೆರಿಕ
ಬೈಡನ್ ಅಧಿಕಾರ ಸ್ವೀಕರಿಸಿ ಸುಮಾರು 6 ತಿಂಗಳಾಗಿದೆ ಅಷ್ಟೇ. ಜೋ ಬೈಡನ್ ಅಧಿಕಾರ ಸ್ವೀಕರಿಸಿದ ತಕ್ಷಣ ಅಮೆರಿಕನ್ನರ ಸಮಸ್ಯೆಗಳು ಸರಿಯಾಗುವುದಿಲ್ಲ. ಏಕೆಂದರೆ ಅಮೆರಿಕ ಶತಮಾನದಲ್ಲೇ ಎದುರಿಸದಷ್ಟು ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೆಲ್ಲಾ ಬಗೆಹರಿಸಲು ಹಲವು ವರ್ಷಗಳೇ ಬೇಕು. ಅದರಲ್ಲೂ ಟ್ರಂಪ್ ಅಮೆರಿಕದ ಘನತೆಗೆ ಹಾಗೂ ಅಮೆರಿಕ ಅರ್ಥ ವ್ಯವಸ್ಥೆಗೆ ಮಾಡಿದ ಘಾಸಿಗೆ ಮುಲಾಮು ಹಚ್ಚಬೇಕು. ಹೀಗಾಗಿ ಬೈಡನ್‌ಗೆ ಅಮೆರಿಕ ಅಧ್ಯಕ್ಷರ ಖುರ್ಚಿ ಹೂವಿನ ಹಾಸಿಗೆ ಆಗಿಲ್ಲ, ಮುಳ್ಳಿನ ಹಾದಿಯಾಗಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. ಇದನ್ನೆಲ್ಲಾ ಎದುರಿಸಿ, ಅಮೆರಿಕ ಹಾಗೂ ಅಮೆರಿಕನ್ನರನ್ನು ರಕ್ಷಿಸುವ ಹೊಣೆ ಜೋ ಬೈಡನ್ ಹೆಗಲ ಮೇಲಿದೆ.

ಮೂರುವರೆ ಕೋಟಿ ಸೋಂಕಿತರು..!
ಅಮೆರಿಕದ ಸ್ಥಿತಿ ಭೀಕರವಾಗಿದ್ದು, ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಜಗತ್ತಿನಾದ್ಯಂತ 19 ಕೋಟಿ 77 ಲಕ್ಷ ಸೋಂಕಿತರು ಪತ್ತೆಯಾಗಿದ್ರೆ, ಕೇವಲ ಅಮೆರಿಕದಲ್ಲೇ ಈ ಸಂಖ್ಯೆ 3 ಕೋಟಿಗೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರ ಸಂಖ್ಯೆ ಜೊತೆ ಸಕ್ರಿಯ ಕೇಸ್‌ಗಳ ಸಂಖ್ಯೆ ಕೂಡ ಭಯ ಹುಟ್ಟಿಸುತ್ತಿದೆ. 53 ಲಕ್ಷ ಆಕ್ಟಿವ್ ಕೇಸ್‌ಗಳು ಅಮೆರಿಕದ ಆಸ್ಪತ್ರೆಗಳನ್ನೆಲ್ಲಾ ತುಂಬುವಂತೆ ಮಾಡಿದೆ. ಇಷ್ಟೇ ಆಗಿದ್ದರೆ ಪರಿಸ್ಥಿತಿ ನಿಭಾಯಿಸಬಹುದಿತ್ತೋ ಏನೋ, ಆದರೆ ಈವರೆಗೂ 6 ಲಕ್ಷ 28 ಸಾವಿರ ಅಮೆರಿಕನ್ನರು ಡೆಡ್ಲಿ ಕೊರೊನಾಗೆ ಉಸಿರು ಚೆಲ್ಲಿದ್ದಾರೆ. ಇದು ಪರಿಸ್ಥಿತಿಯ ಭಯಾನಕತೆಯನ್ನು ಬಿಡಿಸಿಡುತ್ತಿದೆ.

ನಂ. 2 ಆಗತ್ತಾ ಅಮೆರಿಕ..?
ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ, ಅಮೆರಿಕದ ಆರ್ಥಿಕತೆಗೆ ಬಲವಾದ ಪೆಟ್ಟು ಬಿದ್ದಿರುವುದು ಖಚಿತವಾಗುತ್ತಿದೆ. ಹೀಗಾಗಿ ಅಮೆರಿಕದ ಪರಮ ಶತ್ರು ಚೀನಾ ಅಮೆರಿಕದ ನಂಬರ್ 1 ಸ್ಥಾನವನ್ನ ಆಕ್ರಮಿಸಲು ತುದಿಗಾಗಲಲ್ಲಿ ನಿಂತಿದೆ. ಇದು ಕೂಡ ಅಮೆರಿಕದ ನಾಯಕರನ್ನ ಹಾಗೂ ಉದ್ಯಮಿಗಳನ್ನ ಕಂಗೆಡಿಸಿದೆ. ಹಾಗೇ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜಗತ್ತು ಆರ್ಥಿಕ ಹಿಂಜರಿತ ಕಾಣುತ್ತಿದ್ದರೆ ಚೀನಾದ ಜಿಡಿಪಿ ಮಾತ್ರ ಗಮನಾರ್ಹ ಬೆಳವಣಿಗೆ ಕಾಣುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದು ಅಮೆರಿಕದ ನಂಬರ್ 1 ಸ್ಥಾನ ಅಲುಗಾಡಿಸುವ ಜೊತೆಗೆ, ಜಗತ್ತಿನಲ್ಲಿ ಹೊಸ ಆರ್ಥಿಕ ಶಕ್ತಿಯ ಉಗಮಕ್ಕೂ ಕಾರಣವಾಗುತ್ತಿದೆ.
Recommended Video
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications