Airtel: 38 ಕೋಟಿ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಏರ್‌ಟೆಲ್ ಮಾಸ್ಟ್‌ಪ್ಲ್ಯಾನ್!
ಈ ತಿಂಗಳ ಆರಂಭದಲ್ಲಿ ರಿಚಾರ್ಜ್ ಪ್ಲ್ಯಾನ್‌ಗಳ ಬೆಲೆಯನ್ನು ಏರಿಸಿ ಗ್ರಾಹಕರಿಗೆ ಶಾಕ್ ನೀಡಿದ್ದ, ಏರ್‌ಟೆಲ್ ಈಗ ಮತ್ತೊಮ್ಮೆ ಗ್ರಾಹಕರ ಹಿತವನ್ನು ಮನದಲಿಟ್ಟುಕೊಂಡು ನೂತನ ರಿಚಾರ್ಜ್ ಪ್ಲ್ಯಾನ್ ಲಾಂಚ್ ಮಾಡಿವೆ. ಈ ನೂತನ ರಿಚಾರ್ಜ್ ಪ್ಲ್ಯಾನ್‌ಗಳು ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮಾಡಿರುವ ಮಾಸ್ಟರ್ ಪ್ಲ್ಯಾನ್ ಆಗಿವೆ.
ಏರ್‌ಟೆಲ್ ಗ್ರಾಹಕರು ಹೆಚ್ಚಿನ ರಿಚಾರ್ಜ್ ಮೊತ್ತವನ್ನು ಪಾವತಿಸಲು ಆಗದೆ ಬೇರೆ ನೆಟ್‌ವರ್ಕ್‌ಗಳಿಗೆ ಒಲಸೆ ಹೋಗುತ್ತಿದ್ದರು. ಇದನ್ನು ತಡೆಯಲು ಏರ್‌ಟೆಲ್ ಭರ್ಜರಿ ಪ್ಲ್ಯಾನ್ ಲಾಂಚ್ ಮಾಡಿದೆ. ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಏರ್‌ಟೆಲ್ ಅಗ್ಗದ ರಿಚಾರ್ಜ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಸದ್ಯ ಈ ರಿಚಾರ್ಜ್ ಪ್ಲ್ಯಾನ್‌ಗಳ ಲಾಭವನ್ನು 38 ಕೋಟಿ ಬಳಕೆ ದಾರರು ಪಡೆಯಬಹುದಾಗಿದೆ.

ಮೂರು ಅಗ್ಗದ ರಿಚಾರ್ಜ್ ಪ್ಲ್ಯಾನ್
ಜುಲೈ 3 ರಂದು ಏರ್‌ಟೆಲ್ ಸೇರಿದಂತೆ ಭಾರತದ ಖಾಸಗಿ ಟೆಲಿಕಾಂ ಕಂಪನಿಗಳು ಶೇಕಡಾ 25 ರಷ್ಟು ರಿಚಾರ್ಜ್ ಮೊತ್ತವನ್ನು ಹೆಚ್ಚಿಸಿದ್ದವು. ಈಗ ಇದರಿಂದ ಗ್ರಾಹಕರಿಗೆ ಹಾಗೂ ಕಂಪನಿಗೆ ಪೆಟ್ಟು ಬಿದ್ದಿರುವುದನ್ನು ಗಮನಿಸಿರುವ ಕಂಪನಿ ಕೆಲವೇ ದಿನಗಳಲ್ಲಿ ಮೂರು ಅಗ್ಗದ ರಿಚಾರ್ಜ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬಳಕೆದಾರ, ಬೇರೆ ಟೆಲಿಕಾಂ ನೆಟ್‌ವರ್ಕ್‌ಗೆ ಹೋಗದಂತೆ ತಡೆಯುವ ಪ್ಲ್ಯಾನ್ ಮಾಡಿಕೊಂಡಿದೆ.
ಈ ಪ್ಲ್ಯಾನ್‌ನಲ್ಲಿ ಏನೆಲ್ಲಾ ಲಾಭಗಳಿವೆ?
ಕಂಪನಿಯು ನೀಡುವ ಯೋಜನೆಗಳಲ್ಲಿ,ಅಗ್ಗದ ಯೋಜನೆ ಎಂದರೆ 51 ರೂ. ಯದ್ದಾಗಿದೆ. ಪಟ್ಟಿಯಲ್ಲಿ ಉಳಿದಿರುವ ಎರಡು ಯೋಜನೆಗಳು ಕ್ರಮವಾಗಿ ರೂ 101 ಮತ್ತು ರೂ 151 ಯೋಜನೆಗಳಾಗಿವೆ. ಈ ಎಲ್ಲಾ ಮೂರು ಯೋಜನೆಗಳಲ್ಲಿ, ಏರ್‌ಟೆಲ್ ಗ್ರಾಹಕರಿಗೆ ಅನಿಯಮಿತ 5G ಡೇಟಾದ ಪ್ರಯೋಜನವನ್ನು ನೀಡುತ್ತದೆ.
ನೀವು ಏರ್‌ಟೆಲ್‌ನ ಈ ಅಗ್ಗದ ಯೋಜನೆಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಈ ಎಲ್ಲಾ ಯೋಜನೆಗಳು ಡೇಟಾ ಬೂಸ್ಟರ್ ಯೋಜನೆಗಳಾಗಿವೆ. ನಿಮಗೆ ಹೆಚ್ಚಿನ ಡೇಟಾ ಅಗತ್ಯವಿದ್ದರೆ ನೀವು ಈ ಯೋಜನೆಗಳ ಕಡೆಗೆ ಹೋಗಬಹುದು.

51 ರೂ. ರಿಚಾರ್ಜ್ ಮಾಡಿಸಿಕೊಂಡರೆ ಏನು ಲಾಭ?
ಏರ್‌ಟೆಲ್‌ನ ರೂ 51 ಪ್ಲಾನ್‌ನಲ್ಲಿ ಗ್ರಾಹಕರಿಗೆ 3GB ಡೇಟಾವನ್ನು ನೀಡುತ್ತದೆ. ರೂ 101 ರ ಹೊಸ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 6GB ಡೇಟಾವನ್ನು ಲಭಿಸುತ್ತದೆ. ಒಂದು ವೇಳೆ ಏರ್‌ಟೆಲ್ ನೂತನ ಎರಡು ಪ್ಲ್ಯಾನ್‌ಗಳು ನಿಮ್ಮ ಆಯ್ಕೆಗೆ ಸರಿ ಹೊಂದದೆ ಇದ್ದಲ್ಲಿ 151 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡು, 9GB 4G ಡೇಟಾದ ಆನಂದವನ್ನು ಪಡೆಯಬಹುದು.
ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಡೇಟಾ ಪ್ಯಾಕ್‌ಗಳೊಂದಿಗೆ ಏರ್‌ಟೆಲ್‌ನ ಈ ಹೊಸ ಡೇಟಾ ಪ್ಯಾಕ್‌ಗಳನ್ನು ಸಕ್ರಿಯಗೊಳಿಸಬಹುದು. ವಿಶೇಷವೆಂದರೆ ಇದರಲ್ಲಿ ಬಳಕೆದಾರರು 4G ಡೇಟಾ ಪಡೆದರೂ ಅನಿಯಮಿತ 5G ಡೇಟಾವನ್ನು ಸೌಲಭ್ಯವನ್ನು ನೀಡಲಾಗುತ್ತದೆ. ಏರ್‌ಟೆಲ್‌ನ ಅಗ್ಗದ 5G ಯೋಜನೆಗಳು ರೂ 249 ರಿಂದ ಪ್ರಾರಂಭವಾಗುತ್ತವೆ.











Click it and Unblock the Notifications