ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಆತ್ಮಹತ್ಯೆ : 2021ರಲ್ಲಿ ದೇಶದಲ್ಲಿ ಮಹಾರಾಷ್ಟ್ರ ಮೊದಲು, ಕರ್ನಾಟಕಕ್ಕೆ ಎರಡನೇ ಸ್ಥಾನ

|
Google Oneindia Kannada News

ನವದೆಹಲಿ, ಆಗಸ್ಟ್ 30: ಸಾಮಾನ್ಯ ಜನರ ಬದುಕಿಗೆ ಕೋವಿಡ್-19 ಸಾಂಕ್ರಾಮಿಕ ಭಾರಿ ಹೊಡೆತ ನೀಡಿದೆ. ಇಂದಿಗೂ ಎಷ್ಟೋ ಕುಟುಂಬಗಳು ಕೋವಿಡ್ ಹೊಡೆತದಿಂದ ಸುಧಾರಿಸಿಕೊಂಡಿಲ್ಲ. ಸಣ್ಣ ಪುಟ್ಟ ವ್ಯಾಪಾರಸ್ಥರ ಮೇಲಂತೂ ಕೋವಿಡ್ ಸಾಂಕ್ರಾಮಿಕ ಬೀರಿದ ಪರಿಣಾಮ ಅಷ್ಟಿಷ್ಟಲ್ಲ.

ಕೃಷಿ ವಲಯದಲ್ಲೂ ರೈತರು ಭಾರಿ ನಷ್ಟ ಅನುಭವಿಸಿದರು. ಎಷ್ಟೋ ಕೂಲಿ ಕಾರ್ಮಿಕರು, ನೌಕರರು ಕೆಲಸ ಕಳೆದುಕೊಂಡರು. 2021ರ ಸಾಂಕ್ರಾಮಿಕ ವರ್ಷದಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಸ್ವಯಂ ಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಮತ್ತು ದಿನಗೂಲಿ ನೌಕರರೇ ಹೆಚ್ಚಾಗಿದ್ದಾರೆ.

ಸಾರಿಗೆ ನೌಕರರ ಆತ್ಮಹತ್ಯೆ: ನ್ಯಾಯಕ್ಕಾಗಿ ಎಎಪಿ ಪ್ರತಿಭಟನೆಸಾರಿಗೆ ನೌಕರರ ಆತ್ಮಹತ್ಯೆ: ನ್ಯಾಯಕ್ಕಾಗಿ ಎಎಪಿ ಪ್ರತಿಭಟನೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, 2021 ರಲ್ಲಿ ದೇಶಾದ್ಯಂತ ಒಟ್ಟು 1,64,033 ಜನರು ವಿವಿಧ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

"ಒಟ್ಟು 1,18,979 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ ಗರಿಷ್ಠ ಹೆಚ್ಚಿನ ಮಂದಿ ದೈನಂದಿನ ವೇತನದಾರರು (37,751) ನಂತರ ಸ್ವಯಂ ಉದ್ಯೋಗಿಗಳು (18,803) ಮತ್ತು ನಿರುದ್ಯೋಗಿಗಳು (11,724) ಎಂದು ಎನ್‌ಸಿಆರ್‌ಬಿ ತನ್ನ ವರದಿಯಲ್ಲಿ ಬಹಿರಂಗ ಮಾಡಿದೆ. ಈ ಅವಧಿಯಲ್ಲಿ ದೇಶದಲ್ಲಿ ಒಟ್ಟು 45,026 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಬದುಕು ಕೊನೆಗೊಳಿಸಿಕೊಂಡ ಕೃಷಿಕರು

ಬದುಕು ಕೊನೆಗೊಳಿಸಿಕೊಂಡ ಕೃಷಿಕರು

2021 ರಲ್ಲಿ 5,318 ರೈತರು ಮತ್ತು ಕೃಷಿಕರು ಮತ್ತು 5,563 ಕೃಷಿ ಕಾರ್ಮಿಕರನ್ನು ಒಳಗೊಂಡಿರುವ ಕೃಷಿ ವಲಯದಲ್ಲಿ ಒಟ್ಟು 10,881 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದು 2021ರ ದೇಶದ ಒಟ್ಟು ಆತ್ಮಹತ್ಯೆ ಪ್ರಮಾಣದಲ್ಲಿ 6.6 ಪ್ರತಿಶತದಷ್ಟಿದೆ. 5,318 ರೈತರು ಮತ್ತು ಕೃಷಿಕರ ಆತ್ಮಹತ್ಯೆಗಳಲ್ಲಿ, ಒಟ್ಟು 5,107 ಪುರುಷರು ಮತ್ತು 211 ಮಹಿಳೆಯರು.

ಕೃಷಿ ವಲಯದಲ್ಲಿ ತೊಡಗಿರುವ ಹೆಚ್ಚಿನ ಆತ್ಮಹತ್ಯೆಗಳು ಮಹಾರಾಷ್ಟ್ರ (37.3%), ಕರ್ನಾಟಕ (19.9%), ಆಂಧ್ರಪ್ರದೇಶ (9.8%), ಮಧ್ಯಪ್ರದೇಶ (6.2%) ಮತ್ತು ತಮಿಳುನಾಡು (5.5%) ನಲ್ಲಿ ವರದಿಯಾಗಿದೆ. 2021 ರಲ್ಲಿ 5,563 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 5,121 ಪುರುಷರು ಮತ್ತು 442 ಮಹಿಳೆಯರು ಇದ್ದಾರೆ.

 ಈ ರಾಜ್ಯಗಳಲ್ಲಿ ಕೃಷಿಕರ ಆತ್ಮಹತ್ಯೆ ಶೂನ್ಯ

ಈ ರಾಜ್ಯಗಳಲ್ಲಿ ಕೃಷಿಕರ ಆತ್ಮಹತ್ಯೆ ಶೂನ್ಯ

ದೇಶದ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೃಷಿಕರು ಮತ್ತು ಕೃಷಿ ವಲಯದ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ.

ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ, ಉತ್ತರಾಖಂಡ, ಚಂಡೀಗಢ, ಲಕ್ಷದ್ವೀಪ ಮತ್ತು ಪುದುಚೇರಿಗಳಲ್ಲಿ ರೈತರು ಮತ್ತು ಕೃಷಿಕರು ಮತ್ತು ಕೃಷಿ ಕಾರ್ಮಿಕರ ಶೂನ್ಯ ಆತ್ಮಹತ್ಯೆ ವರದಿಯಾಗಿದೆ.

 ಖಾಸಗಿ ವಲಯದ ಉದ್ಯೋಗಿಗಳ ಆತ್ಮಹತ್ಯೆ

ಖಾಸಗಿ ವಲಯದ ಉದ್ಯೋಗಿಗಳ ಆತ್ಮಹತ್ಯೆ

1,64,033 ಒಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳ ಪೈಕಿ ಖಾಸಗಿ ವಲಯದ ಉದ್ಯಮಗಳಿಗೆ ಸೇರಿದವರ ಪ್ರಮಾಣ ಶೇಕಡಾ 7.0 (11,431) ರಷ್ಟಿದ್ದರೆ. 1,898 (ಶೇಕಡಾ 1.2) ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಾರ್ವಜನಿಕ ವಲಯದ ಸಂಸ್ಥೆಗಳ (PSU) 2,541 (1.5 ಪ್ರತಿಶತ) ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. 13,714 (ಶೇಕಡಾ 8.4) ಜನ ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಸ್ವಯಂ ಉದ್ಯೋಗಿಗಳ ಆತ್ಮಹತ್ಯೆ ಹೆಚ್ಚು

ಸ್ವಯಂ ಉದ್ಯೋಗಿಗಳ ಆತ್ಮಹತ್ಯೆ ಹೆಚ್ಚು

ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಸ್ವಯಂ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು 1,64,033 ಆತ್ಮಹತ್ಯೆ ಪ್ರಕರಣಗಳ ಪೈಕಿ 20,231 ಮಂದಿ ಸ್ವಯಂ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರ ಪೈಕಿ 13,089 ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2021 ರಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇಕಡ 64.2 ರಷ್ಟು (1,05,242) ಮಂಡಿ 1 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿದ್ದಾರೆ. 31.6 ಶೇಕಡಾ (51,812) ಆತ್ಮಹತ್ಯೆ ಸಂತ್ರಸ್ತರು 1 ಲಕ್ಷ ರುಪಾಯಿಗಳಿಂದ 5 ಲಕ್ಷ ರುಪಾಯಿವರೆಗೆ ವಾರ್ಷಿಕ ಆದಾಯ ಗಳಿಸುವ ಗುಂಪಿಗೆ ಸೇರಿದವರು ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ.

ಎನ್‌ಸಿಆರ್‌ಬಿ ವರದಿಯ ಪ್ರಕಾರ ಭಾರತದಲ್ಲಿ ಆತ್ಮಹತ್ಯೆಗೆ ಮೂಲ ಕಾರಣ ಬಡತನ ಮತ್ತು ನಿರುದ್ಯೋಗ ಎಂದು ತಿಳಿಯಬಹುದಾಗಿದೆ. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕ ಬಡವರ ಬದುಕನ್ನು ಮತ್ತಷ್ಟು ವಿಷಮವಾಗಿಸಿತು.

English summary
According to a latest report of the National Crime Records Bureau (NCRB), a total of 1,64,033 people have committed suicides in 2021 across the country. Daily wage earners, self-employed persons, unemployed persons and people involved in farming sector were the top categories of people who have committed suicide in 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X