Ashwagandha Benefits: ಅಶ್ವಗಂಧದ ಉಪಯೋಗಗಳನ್ನು ಪ್ರತಿಯೊಬ್ಬ ಮಹಿಳೆಯೂ ತಿಳಿಯಲೇಬೇಕು! ಯಾಕೆ ಗೊತ್ತಾ?

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಲು ಅದ್ಭುತ ಗಿಡಮೂಲಿಕೆ ಎಂದರೇ ಅದು ಅಶ್ವಗಂಧ. ಇದು ಆರೋಗ್ಯವನ್ನು ವೃದ್ಧಿಸುವ ಗುಣವನ್ನು ಹೊಂದಿದೆ. ಅಶ್ವಗಂಧವನ್ನು ಅಲ್ಪಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸುವುದರಿಂದ ದೇಹದ ವಿವಿಧ ಕ್ರಿಯೆಗಳು ಯಾವುದೇ ತೊಂದರೆ ಇಲ್ಲದೆ ನಡೆಯುತ್ತದೆ. ಅಲ್ಲದೇ ಮನುಷ್ಯನಿಗೆ ಉತ್ತಮ ಆರೋಗ್ಯಕ್ಕೂ ಹೆಚ್ಚು ಸಹಾಯಕವಾಗಿದೆ.

ಪ್ರಕೃತಿಯಲ್ಲಿ ನಮಗೆ ಸಿಗುವ ಗಿಡಮೂಲಿಕೆಗಳು ಹಲವಾರು ಪ್ರಯೋಜನಕಾರಿ ಗುಣಗಳನ್ನ ಹೊಂದಿರುತ್ತದೆ. ಮೂಲಿಕೆಯನ್ನು ಪರಿಗಣಿಸುವುದಾದರೆ ಅಶ್ವಗಂಧ ಹಲವು ತೊಂದರೆಗಳಿಗೆ ಉತ್ತರವಾಗಿದೆ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ತೊಂದರೆಗಳಿಗೂ ಇದು ಸಹಾಯಕವಾಗಿದೆ. ಅಶ್ವಗಂಧವೂ ಕೇವಲ ಆಯುರ್ವೇದ ಮಾತ್ರವಲ್ಲ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಔಷಧೀಯ ಪದ್ದತಿಗಳೂ ಬಳಸಿಕೊಂಡಿವೆ. ಅಲ್ಲದೇ ತೂಕ ಇಳಿಸುವ ಪ್ರಯತ್ನಕ್ಕೆ ನೆರವಾಗುವುದು, ಖಿನ್ನತೆಯನ್ನು ಕಡಿಮೆ ಮಾಡುವುದು ಸೇರಿದಂತೆ ಹತ್ತು ಹಲವಾರು ತೊಂದರೆಗಳಿಗೆ ಅಶ್ವಗಂಧ ಅದ್ಭುತ ಪ್ರಯೋಜನಗಳನ್ನ ಹೊಂದಿದೆ. ಈ ಪ್ರಯೋಜನಗಳು ಏನು ಎಂಬುದನ್ನ ನೀವೇ ನೋಡಿ.

8 Proven Health Benefits of Ashwagandha Along With Nutritional Value and Side Effects in Kannada

ಅಶ್ವಗಂಧದ ಉಪಯೋಗಗಳು ಇಲ್ಲಿವೆ

ರೋಗನಿರೋಧ ಶಕ್ತಿ ಹೆಚ್ಚಿಸಲು ಸಹಾಯಕ!

ಹೌದು, ಅಶ್ವಗಂಧವೂ ಅದ್ಬುತವಾದ ರೋಗ ನಿರೋಧಕ ಶಕ್ತಿಯನ್ನ ಹೊಂದಿದೆ. ಇದರಲ್ಲಿರುವ ಔಷಧ ಗುಣದಿಂದ ಈ ಅಶ್ವಗಂಧವನ್ನು ಹಲವು ರೋಗಗಳ ಪರಿಹಾರಕ್ಕೆ ಬಳಸಲಾಗುತ್ತದೆ. ಅಶ್ವಗಂಧ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಬಲಿಷ್ಟವಾದಷ್ಟೂ ಹಲವಾರು ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುತ್ತದೆ. ಈ ಗುಣದಿಂದಾಗಿಯೇ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಗಳಲ್ಲಿ ಅಶ್ವಗಂಧವನ್ನು ಪ್ರಮುಖವಾಗಿ ಬಳಸಕಾಗುತ್ತದೆ. ಇನ್ನೂ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆ ಪ್ರಾರಂಭವಾಗಿದ್ದರೆ ಸಕಾಲದಲ್ಲಿ ಅಶ್ವಗಂಧ ಸೇವಿಸಿದರೆ ಈ ಜೀವಕೋಶಗಳು ಕೊಲ್ಲಲ್ಪಡಲು ಸಹಾಯಕವಾಗುತ್ತದೆ.

8 Proven Health Benefits of Ashwagandha Along With Nutritional Value and Side Effects in Kannada

ಒತ್ತಡ ಕಡಿತ ಮತ್ತು ಆತಂಕ ನಿರ್ವಹಣೆ

ದಿನನಿತ್ಯದ ಒತ್ತಡ ಕೆಲಸಗಳನ್ನ ಬಗ್ಗೆ ನಮ್ಮ ಆರೋಗ್ಯವನ್ನ ನಾವೇ ಕಾಪಾಡಿಕೊಳ್ಳಲು ನಾವು ಕಷ್ಟ ಪಡುತ್ತಿರುತ್ತೇವೆ. ಅಶ್ವಗಂಧವು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಯು ಸೂಚಿಸುತ್ತದೆ, ಇದು ಒತ್ತಡ ಮತ್ತು ಅದರ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಅಶ್ವಗಂಧವು ಶಾಂತ ಮತ್ತು ವಿಶ್ರಾಂತಿಯ ಭಾವನೆಗಳನ್ನು ಉತ್ತೇಜಿಸುತ್ತದೆ. ಒತ್ತಡದ ಮಟ್ಟಗಳು ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಅಶ್ವಗಂಧ ಹೆಚ್ಚು ಪರಿಣಾಮಕಾರಿಯಾಗಿದೆ. ನಿಮ್ಮ ದೇಹವು ಒತ್ತಡಕ್ಕೊಳಗಾದಾಗ ಪ್ರತಿಕ್ರಿಯೆಯಾಗಿ ಬಿಡುಗಡೆ ಆಗುವ ಹಾರ್ಮೋನ್.ಕಾಲಾಂತರದಲ್ಲಿ, ಹೆಚ್ಚಿನ ಮತ್ತು ದೀರ್ಘಕಾಲದ ಒತ್ತಡವು ದುರ್ಬಲ ರೋಗನಿರೋಧಕ ಶಕ್ತಿ, ಹೃದಯ ಸಮಸ್ಯೆಗಳು ಮತ್ತು ನರವೈಜ್ಞಾನಿಕ ಸಮಸ್ಯೆಗಳು ಸೇರಿದಂತೆ ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಸಾಮಾನ್ಯ ಆತಂಕದ ಅಸ್ವಸ್ಥತೆ, ನಿದ್ರಾಹೀನತೆ ಮತ್ತು ಕ್ಲಿನಿಕಲ್ ಖಿನ್ನತೆಯಂತಹ ಪರಿಸ್ಥಿತಿಗಳಿಗೆ ಸಂಬಂಧಿಸಿದ ನರಮಂಡಲದ ಚಟುವಟಿಕೆಯನ್ನು ನಿರ್ಬಂಧಿಸಲು ಇದು ಸಹಾಯ ಮಾಡುತ್ತದೆ.​

ಕೂದಲು ಮತ್ತು ಚರ್ಮಕ್ಕೆ ಉತ್ತಮವಾದ ಆಹಾರಕ್ಕೆ!

ಹೌದು, ಇಂದಿನ ದಿನದಲ್ಲಿ ಮಹಿಳೆಯರಿರೂ ಸೌದರ್ಯವನ್ನ ಹೆಚ್ಚಿಸಿಕೊಳ್ಳಲು ಅಶ್ವಗಂಧ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಅಶ್ವಗಂಧದಲ್ಲಿರುವ ಅಪಾರ ಪ್ರಮಾಣದ ಆಂಟಿಆಕ್ಸಿಡೆಂಟ್ ವಯಸ್ಸಾಗುವಿಕೆ, ಮುಖದ ಮೇಲೆ ಕಪ್ಪು ಕಲೆಗಳು,ಸುಕ್ಕುಗಳು ಮುಂತಾದವುಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ. ಇನ್ನೂ ಅಶ್ವಗಂಧದಲ್ಲಿರುವ ಆಲ್ಕಲಾಯ್ಡ್‌ಗಳು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಿ ನರಮಂಡಲದ ಮೇಲೆ ಕಾರ್ಯನಿರ್ವಹಿಸುತ್ತವೆ.

ಇನ್ನೂ ಮಹಿಳೆಯರು ಕೂದಲು ಮತ್ತು ಚರ್ಮದ ಸಮಸ್ಯೆಯನ್ನು ಎದುರಿಸುತ್ತಿರುವವರು ಅಶ್ವಗಂಧವನ್ನು ಸೇವಿಸಿದರೆ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಪಡೆದುಕೊಳ್ಳಬಹುದು. ಆರೋಗ್ಯಯುತವಾದ ಕೂದಲನ್ನು ಮತ್ತು ಚರ್ಮವನ್ನು ಹೊಂದಬೇಕೆಂಬುದು ಪ್ರತಿಯೊಬ್ಬ ಹೆಣ್ಣಿನ ಬಯಕೆಯಾಗಿರುತ್ತದೆ. ಮಹಿಳೆಯರಿಗೆ ಹಾರ್ಮೋನುಗಳ ಅಸಮತೋಲನದ ಕಾರಣದಿಂದಾಗಿ ಹಲವಾರು ರೀತಿಯ ಚರ್ಮ ಮತ್ತು ಕೂದಲಿನ ಸಮಸ್ಯೆ ಎದುರಾಗುತ್ತದೆ ಅಂಥ ಸಮಯದಲ್ಲಿ ಅಶ್ವಗಂಧ ಸೇವಿಸುವುದರಿಂದ ಉಪಯುಕ್ತ ಫಲಿತಾಂಶ ನಿಮಗೆ ತಿಳಿಯುತ್ತದೆ.

ಲೈಂಗಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ

ಅಶ್ವಗಂಧವು ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ. ಕಡಿಮೆ ಲೈಂಗಿಕ ಬಯಕೆ, ಯೋನಿ ಶುಷ್ಕತೆ, ಕಡಿಮೆ ಪ್ರಚೋದನೆ ಇಂತಹ ಮುಂತಾದ ಸಮಸ್ಯೆಗಳಿಗೆ ಅಶ್ವಗಂಧ ಪರಿಹಾರವನ್ನು ನೀಡುತ್ತದೆ.

​ಸೌಂದರ್ಯವರ್ಧಕವಾಗಿ ಉಪಯುಕ್ತ

ಹೌದು, ಆರೋಗ್ಯವನ್ನ ಕಾಪಾಡುವುದರ ಜೊತೆಗೆ ಅಶ್ವಗಂಧವೂ ಸೌಂದರ್ಯವರ್ಧಕವಾಗಿಯೂ ಉತ್ತಮ ಕೆಲಸ ಮಾಡುತ್ತದೆ. ಅಲ್ಲದೇ ಪುರುಷರು ನಿಯಮಿತವಾಗಿ ಅಶ್ವಗಂಧವನ್ನು ಸೇವಿಸುವುದರಿಂದ ಸದೃಢವಾದ ದೇಹವನ್ನು ಹೊಂದಿ ಖಿನ್ನತೆಯನ್ನು ದೂರ ಮಾಡಿ ಲೈಂಗಿಕ ಆಸಕ್ತಿಯನ್ನು ಹೆಚ್ಚು ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+