7ನೇ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರಿಗೆ ಡಿಎ ಪ್ಲಸ್ ಟಿಎ
ನವದೆಹಲಿ, ಅಕ್ಟೋಬರ್ 14: ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 5% ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ 7ನೇ ವೇತನಾ ಆಯೋಗದ ಅನ್ವಯ ಕೆಲ ವರ್ಗದ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನ ಬೋನಸ್ ಘೋಷಣೆಯಾಗಿದೆ. ಇದಲ್ಲದೆ ಈಗ ಸಾರಿಗೆ ಭತ್ಯೆ(TA) ಕೂಡಾ ಸೇರಿಸಲಾಗಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಅನುತ್ಪಾದನಾ ಮಿಲಿತ ಬೋನಸ್(Non Product linked) ನೀಡಲಾಗುತ್ತಿದೆ.
ಇದಲ್ಲದೆ, ಕೇಂದ್ರ ಸರ್ಕಾರಿ ನೌಕರರಿಗೆ ಸಾರಿಗೆ ಭತ್ಯೆ (Travel Allowance) ಕೂಡಾ ನೀಡಲಾಗುತ್ತಿದೆ. ಟಿಎ ಮೌಲ್ಯ ಸೇರಿಸಿದ ಬಳಿಕ ಸಂಬಳ 810 ರು ನಿಂದ 4,320ರುಗೇರಲಿದೆ. ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಶೇ3ರಷ್ಟು ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ ಹೊಂದಿದ್ದ ನೌಕರರಿಗೆ ಈಗ ಶೇ 5ರಷ್ಟು ತುಟ್ಟಿಭತ್ಯೆ ಸಿಗಲಿದೆ.
ಶೇ3 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದಾಗ ಡಿಎ ಹಾಗೂ ತುಟ್ಟಿ ದರ (ಡಿಆರ್) ನಿವೃತ್ತಿಯಾದವರಿಗೆ ಶೇ 12ರಷ್ಟು ತಲುಪಿದೆ. ಈಗ ಡಿಆರ್ ಶೇ17ರಷ್ಟಾಗಲಿದೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ.

ಸರ್ಕಾರಿ ನೌಕರರ ಡಿಎ ಪರ್ಸಂಟೇಜ್
ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76X100. ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33X100.

ನೌಕರರ ಬೇಡಿಕೆಗಳು ಇನ್ನು ಕಡಿಮೆಯಾಗಿಲ್ಲ
ಸರ್ಕಾರಿ ನೌಕರರ ಬೇಡಿಕೆಗಳು ಇನ್ನು ಕಡಿಮೆಯಾಗಿಲ್ಲ. ಪ್ರಮುಖ ಬೇಡಿಕೆಗಳು ಈಡೇರಿಲ್ಲ. ಬೇಡಿಕೆಗೆ ಅನುಸಾರವಾಗಿ ಮೂಲ ವೇತನವನ್ನು ಏರಿಕೆ ಮಾಡುವುದು ಹಾಗೂ ಫಿಟ್ಮೆಂಟ್ ಫಾರ್ಮುಲಾ ಅವರನ್ನು ಮೂಲವೇತನದ ಮೂರು ಪಟ್ಟು ಏರಿಕೆ ಮಾಡುವಂತೆ ಬೇಡಿಕೆ ಇದ್ದೇ ಇದೆ. ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.
3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ.

ತುಟ್ಟಿಭತ್ಯೆ ಹೆಚ್ಚಳ ಇತಿಹಾಸ
2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ. ಈಗ ತುಟ್ಟಿ ದರ (ಡಿಆರ್) ಈಗ ಶೇ 16ರಷ್ಟಾಗಿದೆ.

ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನೌಕರರಿಗೆ ಲಾಭ
ಆದೇಶದ ಪ್ರಕಾರ, NLPB ಗೆ ಅರ್ಹರಲ್ಲದ ಕೇಂದ್ರ ನೌಕರರಿಗೆ ಈ ಬೋನಸ್ ಲಭ್ಯವಾಗಲಿದ್ದು ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ. ಒಟ್ಟಾರೆ 30.04ದಿನಗಳಿಗೆ ಬೋನಸ್ ಲೆಕ್ಕ ಹಾಕಿದರೆ 6,900ರು ನಷ್ಟು ಮೊತ್ತ ಸಿಗಲಿದೆ. ಮಾರ್ಚ್ 31,2019ರ ತನಕ ಸೇವೆಯಲ್ಲಿದ್ದವರು 2018-19ರ ಅವಧಿಯಲ್ಲಿ ಆರು ತಿಂಗಳ ಸೇವಾವಧಿ ಹೊಂದಿದ್ದವರು ಕೂಡಾ ಈ ಬೋನಸ್ ಗೆ ಅರ್ಹರಾಗಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications