2024 Celebration Ideas: ಭಾರತದಲ್ಲಿ ಹೊಸ ವರ್ಷ ಅದ್ಧೂರಿಯಾಗಿ ಆಚರಿಸುವ ಸ್ಥಳಗಳಿವು: ಇಲ್ಲಿಗೆ ಹೋಗಲು ಪ್ಲ್ಯಾನ್ ಮಾಡಿ....
ಡಿಸೆಂಬರ್ 31 ರ ರಾತ್ರಿ ಪ್ರಪಂಚದಾದ್ಯಂತ ಹೊಸ ವರ್ಷವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜನ ಈ ದಿನ ಪಾರ್ಟಿ ಮಾಡುತ್ತಾರೆ. ಹೊಸ ವರ್ಷವನ್ನು ಹಾಡು, ನೃತ್ಯ, ದೀಪಾಲಂಕಾರ ಮತ್ತು ಸಂತೋಷದಿಂದ ಸ್ವಾಗತಿಸುತ್ತಾರೆ. ಮಾತ್ರವಲ್ಲದೆ ಹೊಸ ವರ್ಷದಂದು ಜನರು ರಜಾದಿನಗಳಲ್ಲಿ ಕೆಲ ಸ್ಥಗಳಿಗೆ ಹೋಗಲು ಮತ್ತು ಪ್ರಯಾಣಿಸಲು ಸಹ ಯೋಚಿಸುತ್ತಾರೆ. ಅವರು ನಿರಂತರ ಕೆಲಸದಿಂದ ಕೊಂಚ ವಿರಾಮ ತೆಗೆದುಕೊಂಡು ಹೊಸ ಸಂತೋಷದ ಜೀವನವನ್ನು ಪ್ರಾರಂಭಿಸಲು ಯೋಚಿಸುತ್ತಾರೆ.
ನೀವು ಸಹ ಹೊಸ ವರ್ಷದಂದು ಎಲ್ಲಾದರು ಹೋಗಬೇಕೆಂದು ಯೋಚಿಸುತ್ತಿದ್ದರೆ, ವಿದೇಶಿ ದೇಶಗಳಂತೆ ಭಾರತದಲ್ಲಿ ಹೊಸ ವರ್ಷವನ್ನು ಪೂರ್ಣ ಉತ್ಸಾಹದಿಂದ ಸ್ವಾಗತಿಸುವಂತಹ ಸ್ಥಳಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಇಲ್ಲಿನ ಜನರು ಡಿಸೆಂಬರ್ 25 ರಂದು ಕ್ರಿಸ್‌ಮಸ್‌ನಿಂದ ಹೊಸ ವರ್ಷದ ಆಚರಣೆಯವರೆಗೆ ಸಂಭ್ರಮಿಸುತ್ತಾರೆ. ಇಲ್ಲಿಗೆ ಹೋಗುವುದರ ಮೂಲಕ ನೀವು ಹೊಸ ವರ್ಷದ ಆಚರಣೆಗಳನ್ನು ಆನಂದಿಸಬಹುದು.

ಮುಂಬೈನ ಮಿನುಗುವ ಪಾರ್ಟಿಗಳು
ಮುಂಬೈ ಎಂದಿಗೂ ನಿದ್ರಿಸದ ನಗರ ಎಂದು ಕರೆಯಲ್ಪಡುತ್ತದೆ. ಮುಂಬೈ ನಗರವು ಪಾರ್ಟಿಗಳು, ಪಬ್ ಸಂಸ್ಕೃತಿ ಮತ್ತು ರಾತ್ರಿ ಜೀವನಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿನ ಜೀವನಶೈಲಿಯು ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಹೊಸ ವರ್ಷದ ಮುನ್ನಾದಿನದ ಸಂದರ್ಭದಲ್ಲಿ ಈ ನಗರದಲ್ಲಿ ಅನೇಕ ಅದ್ಭುತ ಮತ್ತು ಅದ್ದೂರಿ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ಹೊಸ ವರ್ಷದ ಪಟಾಕಿಗಳು ಆಚರಣೆಯನ್ನು ದ್ವಿಗುಣಗೊಳಿಸುತ್ತವೆ.
ಉದಯಪುರ
ರಾಜಸ್ಥಾನದ ಉದಯಪುರ ನಗರವನ್ನು ಲೇಕ್ ಸಿಟಿ ಎಂದೂ ಕರೆಯುತ್ತಾರೆ. ಡಿಸೆಂಬರ್ 31 ರಂದು ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಹೊಸ ವರ್ಷದಲ್ಲಿ ಇಲ್ಲಿನ ಕೋಟೆ ಮತ್ತು ಅರಮನೆಯ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ. ರಾತ್ರಿಯಲ್ಲಿ ನೀವು ಕೋಟೆಯ ಗೋಡೆಗಳ ಮೇಲೆ ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು ವೀಕ್ಷಿಸಬಹುದು. ಪ್ರವಾಸಿಗರು ಇಲ್ಲಿ ಡಿಸೆಂಬರ್ 31 ರಂದು ಬೀದಿಗಳಲ್ಲಿ ನೃತ್ಯ ಮತ್ತು ಹಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
ಗೋವಾ
ಹೊಸ ವರ್ಷದ ಪಾರ್ಟಿಗೆ ಗೋವಾ ಅತ್ಯುತ್ತಮ ಸ್ಥಳವಾಗಿದೆ. ಕಡಲತೀರದಲ್ಲಿ ನೆಲೆಗೊಂಡಿರುವ ಈ ಸುಂದರ ನಗರವು ನಿಮಗೆ ವಿದೇಶದ ಭಾವನೆಯನ್ನು ನೀಡುತ್ತದೆ. ನೀವು ಹೊಸ ವರ್ಷವನ್ನು ಕೆಲವು ಸುಂದರವಾದ ನೆನಪುಗಳೊಂದಿಗೆ ಪ್ರಾರಂಭಿಸಲು ಬಯಸಿದರೆ, ಗೋವಾ ಪ್ರವಾಸವನ್ನು ಯೋಜಿಸಬಹುದು.
ಗೋವಾದಲ್ಲಿ ರಾತ್ರಿ ಜೀವನ ಮತ್ತು ಪಾರ್ಟಿಗಳು ಪ್ರಸಿದ್ಧವಾಗಿವೆ. ಕ್ರಿಸ್‌ಮಸ್‌ನಿಂದ ಹೊಸ ವರ್ಷದವರೆಗೆ ಇಲ್ಲಿ ಪ್ರತಿದಿನ ಹಬ್ಬದ ವಾತಾವರಣ ಇರುತ್ತದೆ. ಹೊಸ ವರ್ಷದಂದು ಗೋವಾದಲ್ಲಿ ವಿಶೇಷ ಬೀಚ್ ಪಾರ್ಟಿಗಳು ಮತ್ತು ಕ್ರೂಸ್ ಪಾರ್ಟಿಗಳನ್ನು ಆಯೋಜಿಸಲಾಗಿರುತ್ತದೆ. ಜೋರಾಗಿ ಸಂಗೀತ, ರುಚಿಕರವಾದ ಆಹಾರ ಮತ್ತು ಪಾನೀಯಗಳು ಮತ್ತು ಬೀಚ್‌ನಲ್ಲಿ ವಿನೋದವು ನಿಮ್ಮ ಹೊಸ ವರ್ಷವನ್ನು ಸ್ಮರಣೀಯವಾಗಿಸುತ್ತದೆ.
ದೆಹಲಿ
ದೆಹಲಿಯನ್ನು ಹೃದಯಗಳ ನಗರ ಎಂದು ಕರೆಯಲಾಗುತ್ತದೆ. ಇಲ್ಲಿ ನೀವು ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳನ್ನು ನೋಡಬಹುದು. ಇದಲ್ಲದೆ ದೆಹಲಿ ರಾತ್ರಿ ಜೀವನ ಮತ್ತು ಪಬ್‌ಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಹೊಸ ವರ್ಷದ ಪಾರ್ಟಿಗೆ ಸಂಪೂರ್ಣವಾಗಿ ಸೂಕ್ತವಾಗಿದೆ.
ಬೆಂಗಳೂರು
ಭಾರತದ ಅತ್ಯಂತ ಪ್ರಸಿದ್ಧ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸೇರಿದೆ. ಇದನ್ನು ಭಾರತದ ಐಟಿ ನಗರ ಎಂದೂ ಕರೆಯುತ್ತಾರೆ. ಇದೂ ಕೂಡ ರಾತ್ರಿ ಜೀವನ, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹೊಸ ವರ್ಷದ ಪಾರ್ಟಿಯನ್ನು ಆಚರಿಸಬಹುದು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications