ಕಠ್ಮಂಡು ಪಬ್‌ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ಯಾರು?
ಮೇ 3 ರಂದು ನೈಟ್‌ಕ್ಲಬ್‌ನಂತೆ ಕಾಣುವ ಸ್ಥಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ವಿವಾದವನ್ನೇ ಸೃಷ್ಟಿ ಮಾಡಿದೆ. ಕಾಂಗ್ರೆಸ್ ಪಕ್ಷದ ನಾಯಕನ ಜೊತೆಯಲ್ಲಿದ್ದ ಮಹಿಳೆ ನೇಪಾಳದ ಚೀನಾ ರಾಯಭಾರಿ ಹೌ ಯಾಂಕಿ ಎಂದು ಹೇಳಿಕೊಂಡು ಅನೇಕ ಜನರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಅವರು ನೈಟ್‌ಕ್ಲಬ್‌ನಲ್ಲಿ ಚೀನಾದ ರಾಯಭಾರಿಯನ್ನು ಏಕೆ ಭೇಟಿಯಾದರು ಮತ್ತು ಅವರು ಏನು ಮಾತನಾಡುತ್ತಿದ್ದಾರೆ ಎಂದು ಆಶ್ಚರ್ಯ ಪಡುವ ಮೂಲಕ ಹಲವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವಿಡಿಯೋದಲ್ಲಿರುವ ಮಹಿಳೆ ರಾಹುಲ್ ಗಾಂಧಿ ನೇಪಾಳದಲ್ಲಿ ಭಾಗವಹಿಸಿದ್ದ ಮದುವೆಯಲ್ಲಿ ವಧುವಿನ ಸ್ನೇಹಿತೆ ಎಂದು ಕಂಡುಹಿಡಿದಿದೆ. ಆಕೆ ಚೀನಾ ರಾಯಭಾರಿ ಹೌ ಯಾಂಕಿ ಅಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ರಾಹುಲ್ ಗಾಂಧಿ ಅವರು ನೇಪಾಳಕ್ಕೆ ಸ್ನೇಹಿತರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಭೇಟಿ ನೀಡಿದ್ದಾರೆ. ಅವರ ಸ್ನೇಹಿತೆ ಪತ್ರಕರ್ತರಾಗಿದ್ದಾರೆ" ಎಂದಿದ್ದಾರೆ.

ಸುದ್ದಿ ವರದಿಗಳ ಪ್ರಕಾರ, ಕಾಂಗ್ರೆಸ್ ನಾಯಕರು ತಮ್ಮ ಸ್ನೇಹಿತೆ CNN ಇಂಟರ್‌ನ್ಯಾಶನಲ್‌ನ ದೆಹಲಿ ಮೂಲದ ವರದಿಗಾರ್ತಿ ಸುಮ್ನಿಮಾ ಉದಾಸ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ತೆರಳಿದ್ದಾರೆ. ಅವರು ಮ್ಯಾನ್ಮಾರ್‌ನ ಮಾಜಿ ನೇಪಾಳಿ ರಾಯಭಾರಿ ಭೀಮ್ ಉದಾಸ್ ಅವರ ಪುತ್ರಿ ಎಂದು ಹೇಳಲಾಗುತ್ತಿದೆ. ಕಠ್ಮಂಡು ಪೋಸ್ಟ್ ಪ್ರಕಾರ, ನಿಮಾ ಮಾರ್ಟಿನ್ ಶೆರ್ಪಾ ಅವರೊಂದಿಗೆ ಸುಮ್ನಿಮಾ ಉದಾಸ್ ಅವರ ವಿವಾಹವು ಮೇ 3 ರಂದು ನಡೆಯಿತು. ಮೇ 5 ರಂದು ಆರತಕ್ಷತೆಯನ್ನು ನಿಗದಿಪಡಿಸಲಾಗಿದೆ.
Noiiice 😎 pic.twitter.com/jTvUyVuE7A
— Ajit Datta (@ajitdatta) May 3, 2022
ವೈರಲ್ ಆದ ವಿಡಿಯೋದಲ್ಲಿ ರಾಹುಲ್ ಗಾಂಧಿ ಜೊತೆ ಇರುವ ಮಹಿಳೆ ಯಾರು?
ವಿಡಿಯೊದಲ್ಲಿ ಕಂಡುಬರುವ ನೈಟ್‌ಕ್ಲಬ್, ಕಠ್ಮಂಡುವಿನ ಜನಪ್ರಿಯ ಲಾರ್ಡ್ ಆಫ್ ದಿ ಡ್ರಿಂಕ್ಸ್ ಎಂದು ಸುದ್ದಿ ವರದಿಗಳು ಸೂಚಿಸಿವೆ. ಈ ಕಠ್ಮಂಡುವಿನಲ್ಲಿ ಪಬ್‌ನ ಆಡಳಿತವನ್ನು ಸಂಪರ್ಕಿಸಿದಾಗ, ಮೇ 2 ರಂದು ಐದಾರು ಜನರೊಂದಿಗೆ ಗಾಂಧಿ ಪಬ್‌ಗೆ ಭೇಟಿ ನೀಡಿದ್ದರು ಎಂದು ಲಾರ್ಡ್ ಆಫ್ ದಿ ಡ್ರಿಂಕ್ಸ್‌ನ ಸಿಇಒ ರಾಬಿನ್ ಶ್ರೇಷ್ಠಾ ಫೋನ್ ಕರೆಯಲ್ಲಿ ಖಚಿತಪಡಿಸಿದ್ದಾರೆ. ಅವರ ಭೇಟಿಯ ವೇಳೆ ಗಾಂಧಿ ಅವರೊಂದಿಗೆ ಯಾವುದೇ ಚೀನಾ ರಾಯಭಾರಿ ಇರಲಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.
"ರಾಹುಲ್ ಗಾಂಧಿ ಅವರು ಒಂದೂವರೆ ಗಂಟೆಗಳ ಕಾಲ ಇಲ್ಲಿದ್ದರು. ಅದು ಅವರ ವೈಯಕ್ತಿಕ ಭೇಟಿಯಾಗಿತ್ತು. ಚೀನಾ ರಾಯಭಾರಿ ಕಚೇರಿಯಿಂದ ಯಾರೂ ಅವರೊಂದಿಗೆ ಇರಲಿಲ್ಲ"ಎಂದು ಶ್ರೇಷ್ಠಾ ತಿಳಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ ಗಾಂಧಿಯೊಂದಿಗೆ ಕಾಣಿಸಿಕೊಂಡ ಮಹಿಳೆಯ ಗುರುತನ್ನು ವಿಚಾರಿಸಿದಾಗ, ಅವಳು ವಧುವಿನ ಸ್ನೇಹಿತೆ ಮತ್ತು ಮದುವೆ ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟಿದ್ದಳು ಎಂದು ಹೇಳಿದರು. "ಅವರು ಚೀನಾದ ರಾಯಭಾರಿಯಾಗಿರಲಿಲ್ಲ" ಎಂದು ಶ್ರೇಷ್ಠಾ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಇದು ವೈಯಕ್ತಿಕ ಭೇಟಿಯಾಗಿರುವುದರಿಂದ, ಅತಿಥಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಶ್ರೇಷ್ಠಾ ಬಯಸಲಿಲ್ಲ.
ಇಂಡಿಯಾ ಟುಡೇ ಕೂಡ ಕಠ್ಮಂಡು ಪೋಸ್ಟ್‌ನ ಹಿರಿಯ ಪತ್ರಕರ್ತ ಅನಿಲ್ ಗಿರಿ ಅವರೊಂದಿಗೆ ವಿಡಿಯೋದಲ್ಲಿರುವ ಮಹಿಳೆಯ ಗುರುತಿನ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದೆ. "ರಾಹುಲ್ ಗಾಂಧಿ ವಧು-ವರರ ಸ್ನೇಹಿತರೊಂದಿಗೆ ಪಬ್‌ನಲ್ಲಿದ್ದರು. ಆದರೆ ರಾಹುಲ್ ಗಾಂಧಿಯೊಂದಿಗಿದ್ದ ಮಹಿಳೆ ಚೀನಾದ ರಾಯಭಾರಿ ಅಲ್ಲ. ಅವಳು ವಧುವಿನ ಸ್ನೇಹಿತೆ ನೇಪಾಳಿ ಮಹಿಳೆ " ಎಂದು ಗಿರಿ ಹೇಳಿದ್ದಾರೆ.
ಇಂಡಿಯಾ ಟುಡೇ ರಾಹುಲ್ ಗಾಂಧಿ ಅವರ ಖಾಸಗಿತನಕ್ಕೆ ಧಕ್ಕೆಯಾಗದಂತೆ ಅವರ ಜೊತೆ ಕಾಣಿಸಿಕೊಂಡ ಮಹಿಳೆಯ ಗುರುತನ್ನು ಮತ್ತಷ್ಟು ಕೆದಕಲಿಲ್ಲ. ದಾಖಲೆಯನ್ನು ನೇರವಾಗಿ ಹೊಂದಿಸಲು ನಾವು ಇಮೇಲ್ ಮೂಲಕ ಕಠ್ಮಂಡುವಿನ ಚೀನಾ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಯಿತು. ಅಲ್ಲೂ ಕೂಡ ಚೀನಾ ರಾಯಭಾರಿ ರಾಹುಲ್ ಗಾಂಧಿಯನ್ನು ಇತ್ತೀಚೆಗೆ ಭೇಟಿಯಾಗಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ವೈರಲ್ ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು ಚೀನಾದ ರಾಯಭಾರಿಯೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರು ಭಾಗವಹಿಸಿದ್ದ ಮದುವೆಯಲ್ಲಿ ವಧುವಿನ ಸ್ನೇಹಿತರೊಂದಿಗೆ ಅವರು ಮಾತನಾಡುತ್ತಿದ್ದರು ಎನ್ನುವುದು ತಿಳಿದು ಬಂದಿದೆ.

Fact Check
ಕ್ಲೇಮು
ಕಠ್ಮಂಡು ಪಬ್‌ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ನೇಪಾಳದ ಚೀನಾ ರಾಯಭಾರಿ ಹೌ ಯಾಂಕಿ ಎಂದು ವಿಡಿಯೋ ವೈರಲ್
ಪರಿಸಮಾಪ್ತಿ
ನೇಪಾಳಕ್ಕೆ ರಾಹುಲ್ ಗಾಂಧಿ ಸ್ನೇಹಿತರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದು ಕಠ್ಮಂಡು ಪಬ್‌ನಲ್ಲಿ ರಾಹುಲ್ ಗಾಂಧಿ ಜೊತೆಗಿದ್ದ ಮಹಿಳೆ ವಧುವಿನ ಸ್ನೇಹಿತೆ ಎಂದು ಸ್ಪಷ್ಟವಾಗಿದೆ.
Rating
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications