• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

FACT CHECK: ಮೂರು ರಾಜ್ಯವಾಗಿ ಹೋಳಾಗುತ್ತಾ ಉತ್ತರ ಪ್ರದೇಶ?

|
Google Oneindia Kannada News

ನವದೆಹಲಿ, ಜೂನ್ 13: ಉತ್ತರ ಪ್ರದೇಶ ಮೂರು ಪ್ರತ್ಯೇಕ ರಾಜ್ಯಗಳಾಗಲಿದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಜನರನ್ನು ಹೊಂದಿರುವ ರಾಜ್ಯ ಎನಿಸಿರುವ ಉತ್ತರಪ್ರದೇಶವನ್ನು ಉತ್ತರ ಪ್ರದೇಶ, ಪೂರ್ವಾಂಚಲ ಹಾಗೂ ಬುಂದೇಲ್‌ಖಂಡ್ ಎಂದು ಮೂರು ಭಾಗಗಳಾಗಿ ಮಾಡಲಾಗುತ್ತದೆ ಎಂದು ಸಂದೇಶಗಳ ರವಾನೆಯಾಗುತ್ತಿದೆ.

ಇನ್ನು ಈ ವೈರಲ್ ಸಂದೇಶದಲ್ಲಿ ಉತ್ತರ ಪ್ರದೇಶದ ರಾಜಧಾನಿಯಾಗಿ ಲಕ್ನೋ ಮುಂದುವರಿಯಲಿದೆ, ಪೂರ್ವಾಂಚಲದ ರಾಜಧಾನಿಯಾಗಿ ಗೋರಖ್‌ಪುರ ಆಯ್ಕೆಯಾಗಲಿದೆ ಹಾಗೂ ಬುಂದೇಲ್‌ಖಂಡ್ ರಾಜ್ಯಕ್ಕೆ ಪ್ರಯಾಗ್‌ರಾಜ್ ರಾಜಧಾನಿಯಾಗಲಿದೆ ಎಂದು ಕೂಡ ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೂ ಮುನ್ನ ಈ ವಿಂಗಡಣೆ ನಡೆಯಲಿದ್ದು ಪೂರ್ವಾಂಚಲ ಜಿಲ್ಲೆಗೆ 23 ಜಿಲ್ಲೆಗಳು, ಬುಂದೇಲ್‌ಖಂಡ್ ಹಾಗೂ ಉತ್ತರ ಪ್ರದೇಶ ರಾಜ್ಯಗಳು ಕ್ರಮವಾಗಿ 17 ಹಾಗೂ 20 ಜಿಲ್ಲೆಗಳನ್ನು ಹೊಂದಲಿದೆ ಎಂದು ಈ ಸಂದೇಶಗಳಲ್ಲಿ ಮಾಹಿತಿಗಳು ಇವೆ.

Fact Check: ಏನಿದು ಅಚ್ಚರಿ! ಕೋವಿಡ್ 19 ಲಸಿಕೆ ಪಡೆದವರ ಮೈಯಲ್ಲಿ ಕರೆಂಟ್!Fact Check: ಏನಿದು ಅಚ್ಚರಿ! ಕೋವಿಡ್ 19 ಲಸಿಕೆ ಪಡೆದವರ ಮೈಯಲ್ಲಿ ಕರೆಂಟ್!

ಆದರೆ ಈ ವೈರಸ್ ಸಂದೇಶ ಸುಳ್ಳು ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ. ಇಂಥಾ ಯಾವುದೇ ಪ್ರಸ್ತಾಪ ಕೂಡ ನಮ್ಮ ಮುಂದೆ ಇಲ್ಲ ಎಂದಿದೆ ಯೋಗಿ ಆದಿತ್ಯನಾಥ್ ಸರ್ಕಾರ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ರೀತಿಯ ಸಂದೇಶಗಳಿಗೆ ಕಿವಿಗೊಡದಂತೆ ಜನರಿಗೆ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದ ಮಾಹಿತಿ ಇಲಾಖೆ ಶನಿವಾರ ಈ ವಿಚಾರವಾಗಿ ಮತ್ತಷ್ಟು ಸ್ಪಷ್ಟನೆಯನ್ನು ನೀಡಿದ್ದು ರಾಜ್ಯವನ್ನು ವಿಭಾಗಿಸುವ ಯಾವುದೇ ಪ್ರಸ್ತಾಪಗಳು ಕೂಡ ಇಲ್ಲ ಎಂದಿದೆ. "ರಾಜ್ಯವನ್ನು ಭಾಗ ಮಾಡುವ ಸುದ್ದಿ ಸುಳ್ಳು. ಅದಕ್ಕೆ ಯಾವುದೇ ಆಧಾರಗಳು ಇಲ್ಲ" ಎಂದು ಉತ್ತರ ಪ್ರದೇಶದ ಸಚಿವ ಹಾಗೂ ವಕ್ತಾರ ಸಿದ್ಧಾರ್ಥ್ ನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದೇ ವರ್ಷದ ಆರಂಭದಲ್ಲಿ ಉತ್ತರಪ್ರದೇಶ ಸರ್ಕಾರ ರಾಜ್ಯವನ್ನು ವಿಭಾಗಿಸುವ ವಿಚಾರವಾಗಿ ಯಾವುದೇ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಹೇಳಿದ್ದರು. ಕುತೂಹಲಕಾರಿ ಸಂಗತಿಯೆಂದರೆ 2011ರಲ್ಲಿ ಉತ್ತರಪ್ರದೇಶ ರಾಜ್ಯವನ್ನು ನಾಲ್ಕು ಭಾಗವನ್ನಾಗಿ ಮಾಡಲು ಅಂದಿನ ಮುಖ್ಯಮಂತ್ರಿ ಮಾಯಾವತಿ ಪ್ರಸ್ತಾವನೆಯನ್ನು ಮುಂದಿಟ್ಟದ್ದರು.

Fact Check

ಕ್ಲೇಮು

ಉತ್ತರ ಪ್ರದೇಶವನ್ನು ಮೂರು ರಾಜ್ಯಗಳಾಗಿ ವಿಂಗಡಿಸಲಾಗುತ್ತದೆ

ಪರಿಸಮಾಪ್ತಿ

ಉತ್ತರ ಪ್ರದೇಶ ರಾಜ್ಯವನ್ನು ಮೂರು ಭಾಗಗಳಾಗಿ ವಿಂಗಡಿಸುವ ಯೋಚನೆಗಳು ಇಲ್ಲ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿದೆ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
On the internet, there is a message claiming that Uttar Pradesh will be divided into three states. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X