Fact check: ಕರೌಲಿ ಮಸೀದಿಯ ಮುಂದೆ ಹಿಂದೂ ಗುಂಪು: ಇದರ ಹಿಂದಿರುವ ಸತ್ಯ
ಎಪ್ರಿಲ್ 2 ರಂದು ರಾಜಸ್ಥಾನದ ಕರೌಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಹಿಂದೂಗಳ ಹಬ್ಬ ಯುಗಾದಿಯಂದು ಮುಸ್ಲಿಂ ಪ್ರಾಬಲ್ಯದ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ಬೈಕ್ ರ‍್ಯಾಲಿ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿತ್ತು. ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಳಾಗುತ್ತಿದೆ. ಆದರೆ ಇತ್ತೀಚೆಗೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ ಮಸೀದಿಯೊಂದರ ಮುಂದೆ ಹಿಂದೂ ಗುಂಪು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು. ಜೊತೆಗೆ ಇವರನ್ನು ಕರೌಲಿಯಿಂದ ಬಂದವರೆಂದು ಹೇಳಿಕೊಂಡು ವಿಡಿಯೊ ವೈರಲ್ ಮಾಡಲಾಗಿದೆ.
ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಲವಾರು ಜನರು ಈ ವಿಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. "ಭಾರತದಲ್ಲಿ ಮುಸ್ಲಿಮರ ಮನೆಗಳನ್ನು ಸುಡುತ್ತಿರುವಾಗ ಮಾನವ ಹಕ್ಕುಗಳು ಎಂದು ಕರೆಯಲ್ಪಡುವವರು ಎಲ್ಲಿದ್ದರು #Karauli #Karauliviolence" ಎಂದು ಬರೆಯಲಾಗಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AWFA) ಈ ವಿಡಿಯೊ ಕರ್ನಾಟಕದ ಕೋಲಾರದಿಂದ ಬಂದಿದೆ ಎಂದು ಕಂಡುಹಿಡಿದಿದೆ. ಮಾರ್ಚ್ 27 ರಂದು ಹುಸೇನಿ ಮಕಾನ್ ಮಸೀದಿಯ ಮುಂದೆ ಹಿಂದೂ ಜನಸಮೂಹ ಹೊರಟಿರುವ ವಿಡಿಯೋ ಇದಾಗಿದೆ. ವೈರಲ್ ವಿಡಿಯೊವನ್ನು ಮಾರ್ಚ್ ಅಂತ್ಯದಲ್ಲಿ ಅಲ್ ಜಜೀರಾ ಮುಬಾಶರ್ ಸೇರಿದಂತೆ ಒಂದೆರಡು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿರುವುದು ಕಂಡುಬಂದಿದೆ.
ಈ ವರದಿಗಳ ಪ್ರಕಾರ, ಕರ್ನಾಟಕ ಮೂಲದ ವರದಿಗಾರ ಮೊಹಮ್ಮದ್ ಇರ್ಷಾದ್ ಮಾರ್ಚ್ 29 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. "ತೇಜಸ್ವಿ ಸೂರ್ಯ ಅವರು ಮಾರ್ಚ್ 21 ರಂದು ಬೆಂಗಳೂರಿನಿಂದ ಕೋಲಾರಕ್ಕೆ ಸೈಕಲ್ ರ್ಯಾಲಿಯನ್ನು ಆಯೋಜಿಸಿದ್ದರು. ಕೋಲಾರದ ಹುಸೇನಿ ಮಕಾನ್ ಮಸೀದಿಗೆ ರ್ಯಾಲಿ ತಲುಪಿದಾಗ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರು ರ್ಯಾಲಿ ನಿಲ್ಲಿಸಿ ಈ ಅನಾಹುತ ಮಾಡಲು ಪ್ರಾರಂಭಿಸಿದರು" ಎಂದು ಬರೆದಿದ್ದಾರೆ.

ನಂತರ ಮತ್ತೊಂದು ಟ್ವೀಟ್‌ನಲ್ಲಿ ಅವರು ಮತ್ತೊಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು "ತಪ್ಪು ದಿನಾಂಕ ಹಂಚಿಕೊಂಡಿದ್ದಕ್ಕಾಗಿ ಕ್ಷಮಿಸಿ: ಇದನ್ನು ಮಾರ್ಚ್ 27 ರಂದು ಆಯೋಜಿಸಲಾಗಿತ್ತು. ಕೋಲಾರದ ಶಹಬಾಜ್ ಶಾ ಖಲಂದರ್ ದರ್ಗಾದ ಮುಂದೆ ಸಂಘಪರಿವಾರದ ಸದಸ್ಯರು ನೃತ್ಯ ಮಾಡುತ್ತಿದ್ದಾರೆ" ಎಂದು ಬರೆದಿದ್ದಾರೆ.
ಮಾಹಿತಿಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಕೋಲಾರದ ಹುಸೇನಿ ಮಕಾನ್ ಮಸೀದಿಯನ್ನು Google Maps ನಲ್ಲಿ ಹುಡುಕಲಾಯಿತು ಮತ್ತು 2018ರಲ್ಲಿ ತೆಗೆದ ಮಸೀದಿಯ ಚಿತ್ರ ಸಿಕ್ಕಿದೆ. ಹುಸೇನಿ ಮಕಾನ್ ಮಸೀದಿಯ ಮುಂಭಾಗವನ್ನು ವೈರಲ್ ವೀಡಿಯೋದಲ್ಲಿ ನೋಡಿದ ಜೊತೆ ಹೋಲಿಸಿದಾಗ ಗಮನಾರ್ಹವಾದ ಹೋಲಿಕೆಗಳನ್ನು ಕಂಡುಬಂದಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಮಸೀದಿಯು ನಿಜವಾಗಿಯೂ ಹುಸೇನಿ ಮಕಾನ್ ಮಸೀದಿ ಎಂದು ಇದು ದೃಢಪಡಿಸುತ್ತದೆ.
ಪ್ರತ್ಯಕ್ಷ ಸಾಕ್ಷಿ
ಈ ಮಾಹಿತಿಯು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹುಸೇನಿ ಮಕಾನ್ ಮಸೀದಿಯ ಬಳಿ ವಾಸಿಸುವ ಸ್ಥಳೀಯರನ್ನು ಸಂಪರ್ಕಿಸಲಾಯಿತು. ಗೂಗಲ್ ನಕ್ಷೆಗಳ ಸಹಾಯದಿಂದ ಅದೇ ಪ್ರದೇಶದಲ್ಲಿ ವಾಸಿಸುವ ಮುಹಮ್ಮದ್ ಅಕ್ರಂ ಎಂಬ ಸ್ಥಳೀಯ ಉದ್ಯಮಿಯನ್ನು ಸಂಪರ್ಕಿಸಲು ಸಾಧ್ಯವಾಯಿತು.
ವೈರಲ್ ವೀಡಿಯೊವನ್ನು ವೀಕ್ಷಿಸಿದ ನಂತರ, ಅಕ್ರಮ್ ಕಟ್ಟಡವನ್ನು ಗುರುತಿಸಿದರು ಮತ್ತು ಘಟನೆಯ ದಿನಾಂಕ ಮಾರ್ಚ್ 27 ಎಂದು ಖಚಿತಪಡಿಸಿದರು. ಈ ರ್ಯಾಲಿಯನ್ನು ಸೂರ್ಯ ಆಯೋಜಿಸಿದ್ದೇ ಎಂದು ಕೇಳಿದಾಗ, ಅಕ್ರಂ ಹೇಳಿದರು, "ಆ ದಿನ ಎರಡು ಮೆರವಣಿಗೆಗಳು ಮಸೀದಿ ಮುಂದೆ ನಡೆದವು. ಒಂದನ್ನು ಸೂರ್ಯ ಆಯೋಜಿಸಿದ್ದು, ಇನ್ನೊಂದು ಬಜರಂಗದಳದಿಂದ ಆಯೋಜಿಸಲಾಗಿತ್ತು. ವೈರಲ್ ವಿಡಿಯೋದಲ್ಲಿ ಸೆರೆಹಿಡಿದದ್ದು ಯಾವು ಮೆರವಣಿಗೆ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ" ಎಂದರು.
ನಂತರ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಲು ಸ್ಥಳೀಯ ಪತ್ರಕರ್ತ ಅಯೂಬ್ ಖಾನ್ ಅವರನ್ನು ಸಂಪರ್ಕಿಸಲಾಯಿತು. ಮಾರ್ಚ್ 27 ರಂದು ತೇಜಸ್ವಿ ಸೂರ್ಯ ಆಯೋಜಿಸಿದ್ದ ಸೈಕಲ್ ರ್ಯಾಲಿಯದ್ದೇ ವಿಡಿಯೊ ಎಂದು ಖಾನ್ ಹೇಳಿದರು. "ಮಾರ್ಚ್ 27 ರಂದು ಹುಸೇನಿ ಮಕಾನ್ ಮಸೀದಿಯಿಂದ ರ್ಯಾಲಿ ಹಾದುಹೋಯಿತು. ಇದು ಸಾಮಾನ್ಯ ಘೋಷಣೆಗಳೊಂದಿಗೆ ಶಾಂತಿಯುತ ರ್ಯಾಲಿಯಾಗಿತ್ತು" ಎಂದು ಖಾನ್ ಹೇಳಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಸದ ತೇಜಸ್ವಿ ಸೂರ್ಯ ಅವರು ಮಾರ್ಚ್ 27 ರಂದು ಬೆಂಗಳೂರಿನ ವಿಧಾನಸೌಧದಿಂದ ಕೋಲಾರಕ್ಕೆ 75 ಕಿಮೀ "ಸೈಕಲ್ 2 ಫ್ರೀಡಂ" ಸವಾರಿ ಅನ್ನು ಆಯೋಜಿಸಿದರು. ಈ ರ್ಯಾಲಿಯು "ಆಜಾದಿ ಕಾ ಅಮೃತ ಮಹೋತ್ಸವ" ದ ಭಾಗವಾಗಿತ್ತು. ಮಾರ್ಚ್ 27 ರಂದು, ಸೂರ್ಯ ಕೋಲಾರದಿಂದ ರ್ಯಾಲಿಯ ಫೋಟೋಗಳನ್ನು ಸಹ ಟ್ವೀಟ್ ಮಾಡಿದ್ದಾರೆ.
ವೈರಲ್ ವೀಡಿಯೊದಲ್ಲಿ ತೋರಿಸಿರುವ ರ್ಯಾಲಿ ಮಾರ್ಚ್ 27 ರಂದು ತೇಜಸ್ವಿ ಸೂರ್ಯ ಆಯೋಜಿಸಿದ್ದೇ ಎಂದು ನಮಗೆ ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗದಿದ್ದರೂ, ಪ್ರತ್ಯಕ್ಷದರ್ಶಿ ಹೇಳಿಕೆ ಮೇಲೆ ಮತ್ತು ಗುಪ್ತಚರ ಮಾಹಿತಿ ಮೇಲೆ ಈ ವಿಡಿಯೋ ಮಾರ್ಚ್ 27 ರಂದು ಕೋಲಾರದ ಹುಸೇನಿ ಮಕಾನ್ ಮಸೀದಿಯನ್ನು ತೋರಿಸಿದೆ ಎಂದು ಪರಿಶೀಲಿಸಲು ಸಹಾಯ ಮಾಡಿದೆ. ಹೀಗಾಗಿ ಈ ವಿಡಿಯೊ ರಾಜಸ್ಥಾನದ ಕರೌಲಿಯಲ್ಲಿ ನಡೆದ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ.

Fact Check
ಕ್ಲೇಮು
ಕರೌಲಿ ಮಸೀದಿಯ ಮುಂದೆ ಹಿಂದೂ ಜನಸಮೂಹದ ವಿಡಿಯೋ ವೈರಲ್
ಪರಿಸಮಾಪ್ತಿ
ಮಸೀದಿಯ ಮುಂದೆ ಹಿಂದೂ ಜನಸಮೂಹದ ವೈರಲ್ ವಿಡಿಯೋ ಕರೌಲಿಯಿಂದಲ್ಲ ಆದರೆ ಕರ್ನಾಟಕದ ಕೋಲಾರದಲ್ಲಿ ತೆಗೆಯಲಾಗಿದೆ.












Click it and Unblock the Notifications