Fact check: ನೀಟ್‌ ಪಿಜಿ 2023ರ ಪರೀಕ್ಷಾ ದಿನಾಂಕ ಮುಂದೂಡಲ್ಪಟ್ಟಿದೆಯೇ?

NEET-PG 2023 ಪರೀಕ್ಷೆಯ ದಿನಾಂಕ ಮುಂದೂಡಿರುವುದಾಗಿ ಸಂದೇಶವೊಂದು ವೈರಲ್ ಆಗಿದೆ. ಇದು ನಿಜವೇ? ತಿಳಿಯಿರಿ.

NEET-PG 2023 ಅನ್ನು ಮುಂದೂಡಲು ಬೇಡಿಕೆ ಹೆಚ್ಚಾಗಿರುವ ನಡುವೆ ಪರೀಕ್ಷೆಯನ್ನು ಮೇ 21 ರವರೆಗೆ ಮುಂದೂಡಲಾಗಿದೆ ಎಂಬ ನಕಲಿ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. "ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ನಿರ್ದೇಶನಗಳ ಅನುಸಾರವಾಗಿ, ಭಾರತ ಸರ್ಕಾರ 2023 ರ ಮಾರ್ಚ್ 5 ರಂದು ನಡೆಸಲು ಮೊದಲೇ ಸೂಚಿಸಲಾಗಿದ್ದ NEET-PG 2023 ಪರೀಕ್ಷೆಯನ್ನು ಮರುನಿಗದಿಪಡಿಸಿದೆ. NEET-PG 2023 ಅನ್ನು ಈಗ 21 ನೇ ಮೇ 2023 ರಂದು ನಡೆಸಲಾಗುವುದು (09:00 AM ನಿಂದ 12:30 PM)" ಎಂದು ನಕಲಿ ಸಂದೇಶವನ್ನು ಹರಿಬಿಡಲಾಗಿದೆ.

ಈ ವೈರಲ್ ಸಂದೇಶದ ಬಗ್ಗೆ ಆರೋಗ್ಯ ಸಚಿವಾಲಯ ಸ್ಪಷ್ಟೀಕರಣವನ್ನು ನೀಡಿದೆ. NEET-PG 2023 ಪರೀಕ್ಷೆಯ ದಿನಾಂಕ ಮುಂದೂಡಿರುವ ಕುರಿತು ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ ಸಂದೇಶ ನಕಲಿಯಾಗಿದೆ ಎಂದು ಅದು ಹೇಳಿದೆ. ನಕಲಿ ಅಧಿಸೂಚನೆಯ ಸ್ಕ್ರೀನ್‌ಶಾಟ್‌ನೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಪಷ್ಟೀಕರಣ ನೀಡಿದೆ. ಇಂತಹ ನಕಲಿ ಸಂದೇಶಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನೀಟ್-ಪಿಜಿ 2023 ರ ಮುಂದೂಡಿಕೆ ಕುರಿತಾದ ಈ ವೈರಲ್ ಸಂದೇಶವು ನಕಲಿಯಾಗಿದೆ ಎಂದು ಅದು ಹೇಳಿದೆ.

ನೀಟ್-ಪಿಜಿಯನ್ನು ಮುಂದೂಡಲು ಒತ್ತಡ ಹೆಚ್ಚಾಗಿದೆ. ಒತ್ತಡಕ್ಕೆ ಮಣಿದು ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ ಎನ್ನುವ ತಪ್ಪು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. NEET ಆಕಾಂಕ್ಷಿಗಳು ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (FAIMA) ಜೊತೆಗೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ NEET PG 2023 ಅನ್ನು ಮುಂದೂಡಬೇಕೆಂಬ ಬೇಡಿಕೆಯು ಹೆಚ್ಚಾಗಿದೆ.

Fact check: NEET PG 2023 exam date postponed?

NEET PG 2023 ಪರೀಕ್ಷೆಯನ್ನು ಮಾರ್ಚ್ 5, 2023 ರಂದು ನಡೆಸಲು ನಿರ್ಧರಿಸಲಾಗಿದೆ. ಫಲಿತಾಂಶ ಘೋಷಣೆ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಅಭ್ಯರ್ಥಿಗಳು ಪರೀಕ್ಷೆಯನ್ನು 2 ರಿಂದ 3 ವಾರಗಳವರೆಗೆ ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ.

Fact Check

ಕ್ಲೇಮು

ನೀಟ್‌ ಪಿಜಿ 2023ರ ಪರೀಕ್ಷಾ ದಿನಾಂಕ ಮುಂದೂಡಲ್ಪಟ್ಟಿದೆ.

ಪರಿಸಮಾಪ್ತಿ

ನೀಟ್‌ ಪಿಜಿ 2023ರ ಪರೀಕ್ಷಾ ದಿನಾಂಕ ಮುಂದೂಡಲಾಗಿಲ್ಲ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+