Fact Check: ವಿಶ್ವಸಂಸ್ಥೆಯ ವಾಹನದ ಮೇಲೆ ಭಾರತೀಯ ಸೈನಿಕರಿಂದ ದಾಳಿ?

ಶ್ರೀನಗರ, ಡಿಸೆಂಬರ್ 21: ಕಾಶ್ಮೀರ ಗಡಿಯಲ್ಲಿ ವಿಶ್ವಸಂಸ್ಥೆಯ ವಾಹನದ ಮೇಲೆ ದಾಳಿ ನಡೆಸಲಾಗಿದೆ ಎನ್ನುವ ಪಾಕಿಸ್ತಾನ ಆರೋಪವನ್ನು ಭಾರತೀಯ ವಿದೇಶಾಂಗ ಸಚಿವಾಲಯ ತಳ್ಳಿ ಹಾಕಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಚಿರಿಕೋಟ್ ಭಾಗದಲ್ಲಿ ವಿಶ್ವಸಂಸ್ಥೆಯ ಸೇನಾ ವಿಚಕ್ಷಕರ ವಾಹನದ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ ಎಂದು ಕಳೆದ ಶುಕ್ರವಾರ ಪಾಕಿಸ್ತಾನ ಆರೋಪ ಮಾಡಿತ್ತು.

ಈ ಆರೋಪಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಹಾಗೂ ರಕ್ಷಣಾ ಸಚಿವಾಲಯ ಮೂಲಗಳು ವರದಿಯನ್ನು ತಿರಸ್ಕರಿಸಿದ್ದವು ಆದರೆ ಅಧಿಕೃತ ಉತ್ತರ ನೀಡುವ ಸಲುವಾಗಿ ಸರ್ಕಾರ ಹಾಗೂ ಸೇನೆಯಿಂದ ಅಧಿಕೃತ ತನಿಖೆ ನಡೆಸಲಾಗಿತ್ತು. ತನಿಖೆಯ ಬಳಿಕ ಪಾಕಿಸ್ತಾನದ ಆರೋಪಕ್ಕೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ್ ಅಧಿಕೃತ ಹೇಳಿಕೆ ನೀಡಿದ್ದಾರೆ.

Fact Check:India Dismisses Allegations Of UN Vehicle Being Targeted Across LoC

ಭಾರತೀಯ ಸೇನೆಯಿಂದ ಇಂತಹ ಯಾವುದೇ ಅಚಾತುರ್ಯ ನಡೆದಿಲ್ಲ, ಸೇನೆ ದಾಳಿಯನ್ನು ಕೂಡ ನಡೆಸಿಲ್ಲ, ವಿಶ್ವ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಕ್ತ ಭದ್ರತೆ ನೀಡಲು, ಪಾಕಿಸ್ತಾನ ವಿಫಲವಾಗಿದೆ. ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮುಂದಾಗಿರುವ ಪಾಕಿಸ್ತಾನ ಭಾರತದ ಮೇಲೆ ಅನಗತ್ಯ ಆರೋಪ ಹೊರಿಸುತ್ತಿದೆ.

ಭಾರತದ ಮೇಲೆ ಆರೋಪಹೊರಿಸುವ ಬದಲು ಭದ್ರತೆಯ ಲೋಪಕ್ಕೆ ಕಾರಣವೇನು ಎಂಬುದನ್ನು ಹುಡುಕಬೇಕಿದೆ, ಬದಲಾಗಿ ಆಧಾರರಹಿತ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಾಗದು.

ವಿಶ್ವಸಂಸ್ಥೆಯ ವಾಹನ ಸಂಚಾರ ಕುರಿತು ಭಾರತೀಯ ಸೇನೆಗೆ ಮೊದಲೇ ಮಾಹಿತಿ ಇತ್ತು, ಹಾಗಾಗಿ ಆ ಭಾಗದಲ್ಲಿ ಯಾವುದೇ ಫೈರಿಂಗ್ ನಡೆಸಲಾಗಿಲ್ಲ. ಈ ಕುರಿತು ಪಾಕಿಸ್ತಾನಕ್ಕೂ ಅಧಿಕೃತ ಉತ್ತರವನ್ನು ಕಳುಹಿಸಿಕೊಡಲಾಗಿದೆ ಎಂದು ಅನುರಾಗ್ ತಿಳಿಸಿದ್ದಾರೆ.

Fact Check

ಕ್ಲೇಮು

ವಿಶ್ವಸಂಸ್ಥೆಯ ವಾಹನದ ಮೇಲೆ ಭಾರತೀಯ ಸೈನಿಕರಿಂದ ದಾಳಿ ನಡೆದಿದೆ

ಪರಿಸಮಾಪ್ತಿ

ಭಾರತೀಯ ಸೈನಿಕರು ಯುಎನ್ ವಾಹನದ ಮೇಲೆ ಯಾವುದೇ ದಾಳಿ ನಡೆಸಿಲ್ಲ

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+