Fact Check: ಬಿಜೆಪಿಯಿಂದ 3 ತಿಂಗಳ ಮೊಬೈಲ್ ರೀಚಾರ್ಜ್ ಯೋಜನೆ, ಇದು ಸತ್ಯವೇ...?
ಬೆಂಗಳೂರು, ಮಾರ್ಚ್ 13: ಇತ್ತೀಚಿನ ಚುನಾವಣೆಗಳಲ್ಲಿ ಫ್ರೀ ಯೋಜನೆಗಳು ಭಾರೀ ಸದ್ದು ಮಾಡುತ್ತಿವೆ. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಬಿಜೆಪಿ ಇದನ್ನೆ ನೆಪ ಮಾಡಿಕೊಂಡು 'ಬಿಜೆಪಿ ಫ್ರೀ ರೀಚಾರ್ಜ್ ಯೋಜನೆ'ಯ ಲಿಂಕ್ ಅನ್ನು ಸಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲ ಬೊಬೈಲ್ ಬಳಕೆದಾರರಿಗೆ ಮೂರು ತಿಂಗಳ ರೀಚಾರ್ಜ್ ಮಾಡಿಸುವ ಯೋಜನೆ ತಂದಿದ್ದಾರೆ. ಲೋಕಸಭಾ ಚುನಾವಣೆ 2024ಯಲ್ಲಿ ನೀವು ಬಿಜೆಪಿಗೆ ಮತ ಹಾಕಿ. ಮತ್ತೊಮ್ಮೆ ಪ್ರಧಾನಿ ಮೋದಿಯವರನ್ನು ಆಯ್ಕೆ ಮಾಡಲು ಬಿಜೆಪಿಗೆ ಮತ ಹಾಕಿ ಎಂಬ ಆಂಗ್ಲ ಬರಹಗಳ ಜೊತೆಗೆ BJP Free Recharge Yojana ಲಿಂಕ್ (http://hgfc.buzz/pywb5ne/6937962177138738063296ee28) ಹರಿದಾಡುತ್ತಿದೆ.

ದೇಶದ ಜನರು ಚುನಾವಣೆಯ ವಿಚಾರಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದೆ. ರಾಜಕೀಯ ಪಕ್ಷಗಳು ಚುನಾವಣೆ ವೇಳೆ ಉಚಿತ ಯೋಜನೆಗಳನ್ನು ಘೋಷಿಸುವುದು ಸಾಮಾನ್ಯವಾಗಿದೆ. ಇಂತಹ ಅವಕಾಶಗಳ ದುರಪಯೋಗ ಮಾಡಿಕೊಂಡು ಆನ್‌ಲೈನ್ ವಂಚಕರು ತಮ್ಮ ಬ್ರ್ಯಾಂಡ್‌ಗಳ ಪ್ಲಬಿಸಿಟಿ, ಜನರನ್ನು ಯಾಮಾರಿಸಲು, ಇಲ್ಲವೇ ಲಿಂಕ್ ಮೇಲೆ ಒಮ್ಮೆಯಾದರೂ ಜನರಿಂದ ಕ್ಲಿಕ್ ಮಾಡಿಸಿಕೊಂಡು ಹೆಚ್ಚು ವೀಕ್ಷಣೆಗಾಗಿ, ಗಣಗಳಿಕೆಗೆ, ಇಲ್ಲವೇ ನಿಮ್ಮ ಮಾಹಿತಿ ಖದ್ದು ಆರ್ಥಿಕ ತೊಂದರೆ ಕೊಡುವ ಯೋಚನೆ ಹೊಂದಿರುತ್ತಾರೆ.
ವಾಸ್ತವವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ 'ಬಿಜೆಪಿ ಉಚಿತ ಮೊಬೈಲ್ ರೀಚಾರ್ಜ್' ನಂತಹ ಯಾವ ಯೋಜನೆ, ಕಾರ್ಯಕ್ರಮ ಘೋಷಣೆ ಮಾಡಿಲ್ಲ. ಚುನಾವಣೆ ಹೊತ್ತಲ್ಲಿ ಮೊಬೈಲ್ ಬಳಕೆದಾರರನ್ನು ಯಾಮಾರಿಸಲು, ಆನ್‌ಲೈನ್ ಸರ್ವೇ ಹೆಸರಿನಲ್ಲಿ ಫೇಕ್ ಲಿಂಕ್ ಹರಿಬಿಡಲಾಗುತ್ತದೆ. ಅದಕ್ಕೆ ಈ ಬಾರಿ 'ಬಿಜೆಪಿ ಉಚಿತ ಮೊಬೈಲ್ ರೀಚಾರ್ಜ್' ನಕಲಿ ಯೋಜನೆ ಹೆಸರಿನಲ್ಲಿ ಲಿಂಕ್ ಸೃಷ್ಟಿಸಲಾಗಿದೆ.
ಇಂತಹ ನಕಲಿ ಲಿಂಕ್ ಗಳಿಂದ ಕೆಲವೊಮ್ಮ ಸೈಬರ್ ಖದೀಮರು ನಿಮ್ಮ ಮಾಹಿತಿ, ಬ್ಯಾಂಕ್ ಖಾತೆ ಕದಿಯುವ ಸಾಧ್ಯತೆಗಳು ಹೆಚ್ಚಿರುತ್ತದೆ. ಈ ರೀತಿಯ ಲಿಂಕ್‌ಗಳು ಮತ್ತು ಸುಳ್ಳು ಮಾಹಿತಿಯನ್ನು ನಂಬಬೇಡಿ.

ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತದೆ?
ಫ್ರೀ ರೀಚಾರ್ಜ್ ಕೊನೆ ದಿನಾಂಕ ಅಕ್ಟೋಬರ್ 15 ಎಂದು ತಿಳಿಸಲಾಗಿದೆ. ಈ ವಾಟ್ಸಪ್ ಸಂದೇಶದ ಜತೆ ಬಂದ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿದರೆ, ಪ್ರಧಾನಿ ಮೋದಿಯವರ ಚಿತ್ರದ ಸಮೇತ 'ಬಿಜೆಪಿ ಫ್ರೀ ರೀಚಾರ್ಜ್' ಯೋಜನೆ, ಜಿಯೋ, ಏರ್‌ಟೆಲ್ ವಡಾಫೋನ್ ಸಿಮ್ ಕಂಪನಿಗಳ ಲೋಗೊ ಕಾಣಿಸುತ್ತದೆ. ಕೆಳಗೆ ಹಲವರು ರೀಚಾರ್ಜ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿರುವ ಕಾಮೆಂಟ್‌ಗಳನ್ನು ನೀವು ನೋಡಬಹುದು.
ಗೆಟ್ ಫ್ರೀ ರೀಚಾರ್ಜ್ ಟ್ಯಾಬ್ ಆಯ್ಕೆ ಮಾಡಿಕೊಂಡರೆ, ಆಕ್ಟಿವ್ 3 ತಿಂಗಳ ಫ್ರೀ ರೀಚಾರ್ಜ್ ಎಂಬುದು ಕಾಣಿಸುತ್ತದೆ. ಬಳಿಕ ನಿಮ್ಮ ಸಿಮ್ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ಸಬ್ಮಿಟ್ ಕೊಟ್ಟರೆ ಸಕ್ಸ್ ಸ್‌ಫೂಲ್ ಆಕ್ಷಿವ್ ಎಂಬ ಪ್ರದರ್ಶನ ಕಾಣುತ್ತದೆ. ಬಳಿಕ ಇದೇ ಲಿಂಕ್ ಅನ್ನು ವಿವಿಧ ವಾಟ್ಸಾಪ್ ಗ್ರೂಪ್‌ಗೆ ಕಳುಹಿಸುವಂತೆ ಸೂಚಿಸುತ್ತದೆ.
ಸುಳ್ಳು ಮಾಹಿತಿ ಪ್ರಸಾರ
ನಂತರ ಇದು ಆನ್‌ಲೈನ್ ಸರ್ವೇ ಆಗಿದೆ. ಧನ್ಯವಾದ ತಿಳಿಸುವ ಜೊತೆಗೆ ರಮ್ಮಿ ಸರ್ಕಲ್ ಆಪ್ ಡೌನ್‌ಲೋಡ್‌ಗೆ ಸೂಚಿಸುತ್ತದೆ. ಕೆಲವೊಮ್ಮೆ ಬೇರೆ ಬೇರೆ ನಕಲಿ, ಥರ್ಡ್ ಪಾರ್ಟಿ ಟೋಲ್‌ಗಳ ಜಾಲಕ್ಕೆ ಸಂಪರ್ಕಿಸುತ್ತದೆ. ಇಂತಹ ಲಿಂಕ್ ಮೂಲಕ ಜನರಿಗೆ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದೆ. ಜನರ ದಾರಿ ತಪ್ಪಿಸಲಾಗುತ್ತಿದ್ದು ಎಚ್ಚರಿಕೆ ವಹಿಸಬೇಕಿದೆ.
ನಂಬಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಬೇಡಿ
ಬಿಜೆಪಿಯು ಯಾವ ಫ್ರೀ ರೀಚಾರ್ಜ್ ಯೋಜನೆ ಜಾರಿಗೆ ತಂದಿಲ್ಲ. ಇದು ಸಂಪೂರ್ಣ ಸುಳ್ಳು ಎಂಬುದು ಸಾಬೀತಾಗಿದೆ. ಇದೇ ರೀತಿ ಚುನಾವಣೆ ವೇಳೆ ಕೆಲವು ಲಿಂಕ್ ಗಳು ನಿಮ್ಮ ಮೊಬೈಲ್‌ಗೆ ಬಂದರೆ ಜಾಗೃತಿ ವಹಿಸಿ. ಏಕೆಂದರೆ ಅನಾಮಧೇಯ ಲಿಂಕ್ ಮೇಲೆ ಕ್ಲಿಕ್ ಮಾಡಿ, ಮೊಬೈಲ್ ನಂಬರ್, ಒಟಿಪಿ ನಮೂದಿಸಿ ತಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದುಕೊಂಡವರಿದ್ದಾರೆ. ಚುನಾವಣೆ ಮತ್ತಿತರ ಸಂದರ್ಭಗಳಲ್ಲಿ ಆಗಾಗ ಸೈಬರ್ ವಂಚಕರ ಗುಂಪು ಸಕ್ರೀಯವಾಗಿರುತ್ತದೆ. ಜನರು ಎಲ್ಲವನ್ನು ನಂಬದೇ ಎಚ್ಚರಿಕೆ ವಹಿಸಬೇಕಿದೆ.

Fact Check
ಕ್ಲೇಮು
2024ರ ಚುನಾವಣೆ ವೇಳೆ ಬಿಜೆಪಿಯು ಮತ ಸೆಳೆಯಲು ದೇಶದ ಜನರಿಗೆ 'ಬಿಜೆಪಿ ಫ್ರೀ ರೀಚಾರ್ಜ್ ಯೋಜನೆ' ಜಾರಿಗೆ ತಂದಿದೆ ಎಂಬ ಲಿಂಕ್ ವೈರಲ್ ಆಗಿದೆ. ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.
ಪರಿಸಮಾಪ್ತಿ
ವೈರಲ್ ಆದ್ ಲಿಂಕ್, ಸಂದೇಶಗಳಿಗೆ ಹಾಗೂ ಬಿಜೆಪಿ ಪಕ್ಷ ಅಥವಾ ಕೇಂದ್ರ ಸರ್ಕಾರಕ್ಕೆ ಯಾವುದೇ ಸಂಬಂಧ ಇಲ್ಲ. ಇಂತಹ ಯೋಜನೆ ಬಿಜೆಪಿ ಜಾರಿಗೊಳಿಸಿರುವುದಿಲ್ಲ.












Click it and Unblock the Notifications