ಪ್ರೀತಿ..ವಶೀಕರಣ..ಪೃಥ್ವಿ ಭಟ್ ಮದುವೆ ವಿವಾದಕ್ಕೆ ಟ್ವಿಸ್ಟ್: ತಂದೆಗೆ ಮಗಳು ಹೇಳಿದ್ದೇನು?
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪದ ಮಾಜಿ ಸ್ಪರ್ಧಿ ಗಾಯಕಿ ಪೃಥ್ವಿ ಭಟ್ ಮದುವೆ ವಿವಾದ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಗಾಯಕಿ ಪೃಥ್ವಿ ಭಟ್ ತಮ್ಮ ಪೋಷಕರ ವಿರೋಧದ ನಡುವೆ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ ಎನ್ನುವ ಮಾಹಿತಿ ಇತ್ತೀಚಿಗಷ್ಟೇ ಬಹಿರಂಗವಾಗಿದ್ದು, ಸ್ವತಃ ಪೃಥ್ವಿ ಭಟ್ ತಂದೆ ಮಗಳು ಹಾಗೂ ಮತ್ತೋರ್ವ ವ್ಯಕ್ತಿಯ ಬಗ್ಗೆ ನೇರವಾಗಿ ಅಸಮಾಧಾನ ಹೊರಹಾಕಿದ್ದರು.
ಮಗಳು ಮನೆಬಿಟ್ಟು ಹೋಗಿ ಮದುವೆಯಾದ ನೋವಿನಲ್ಲಿರುವ ಪೃಥ್ವಿ ಭಟ್ ತಂದೆ ಶಿವ ಪ್ರಸಾದ್ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದ್ದು, ಈ ಆಡಿಯೋದಲ್ಲಿ ಪೃಥ್ವಿ ಭಟ್ ತಂದೆ ಮಗಳ ಬಗ್ಗೆ ಅತೀ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಮದುವೆಗೆ ಕಾರಣರಾದ ಮತ್ತೋರ್ವ ಜನಪ್ರಿಯ ವ್ಯಕ್ತಿಯ ಹೆಸರನ್ನು ಆಡಿಯೋದಲ್ಲಿ ಅವರು ಪ್ರಸ್ತಾಪ ಮಾಡಿದ್ದು, ಆ ವ್ಯಕ್ತಿಯ ಬಗ್ಗೆ ವಶೀಕರಣ ಸೇರಿದಂತೆ ಒಂದಿಷ್ಟು ಆರೋಪಗಳನ್ನು ಮಾಡಿದ್ದಾರೆ.

ಪ್ರಥ್ವಿ ಭಟ್ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಖ್ಯಾತ ಸಂಗೀತ ಶಿಕ್ಷಕ ಹಾಗೂ ಸರಿಗಮಪ ಕಾರ್ಯಕ್ರಮದ ಜ್ಯೂರಿ ನರಹರಿ ದೀಕ್ಷಿತ್ ಅವರ ಹೆಸರನ್ನು ಹೇಳಿದ್ದು, ತಮ್ಮ ಮಗಳು ಮನೆ ಬಿಟ್ಟು ಹೋಗಿ ಮದುವೆಯಾಗುವಲ್ಲಿ ನರಹರಿ ದೀಕ್ಷಿತ್ ಅವರ ಪಾತ್ರವೇನು ಎನ್ನುವುದನ್ನು ವಿವರಿಸಿದ್ದಾರೆ.
ನರಹರಿ ದೀಕ್ಷಿತ್ ವಿರುದ್ಧ ಪ್ರಥ್ವಿ ಭಟ್ ತಂದೆ ಆರೋಪವೇನು?
ನರಹರಿ ದೀಕ್ಷಿತ್ ನಮ್ಮ ಮನೆಗೆ ಬಂದು ಹೋದ ಮೇಲೆ ಅವಳ ನಡವಳಿಕೆಯಲ್ಲಿ ಬದಲಾವಣೆ ಆಗಿತ್ತು. ಒಂದು ರೀತಿ ವಶೀಕರಣ ಆದವರ ರೀತಿ ಇದ್ದಳು. ಮಗಳು ಮನೆ ಬಿಟ್ಟು ಹೋಗಿ ಮದುವೆಯಾದ ಮೇಲೆ ಗೊತ್ತಾಯ್ತು. ನಮ್ಮ ಮಗಳಿಗೆ ನರಹರಿ ದೀಕ್ಷಿತ್ ಧಾರೆ ಎರೆದಿದ್ದಾರೆ ಅಂತಾ. ಅದು ನಮಗೆ ಆಘಾತವಾಯ್ತು. ನಮ್ಮ ಜೊತೆಯಲ್ಲೇ ಇದ್ದುಕೊಂಡು ಹೀಗೆ ಮಾಡಿದರು ಅಂತಾ. ಅವರು ಜೀ ಕನ್ನಡದಲ್ಲಿ ಏನೋ ಲಾಭ ಕಂಡಿದ್ದಾರೆ. ಹೀಗಾಗಿ ಈ ಮದುವೆ ಮಾಡಿದ್ದಾರೆ.

ಅವಳು ಮದುವೆಯಾಗುವ ದಿನ ಬೆಳಗ್ಗೆ ವಿಷಯ ಗೊತ್ತಾದಾಗ ನನಗೆ ಹೇಳಬಹುದಿತ್ತು. ನಮ್ಮ ಜೀವನದಲ್ಲಿ ಧಾರೆ ಎರೆಯುವ ಒಂದೇ ಒಂದು ಅವಕಾಶವನ್ನು ಕಿತ್ತುಕೊಂಡರು. ಜೀ ಕನ್ನಡದವರು ಹೇಳಿದ್ದಾರೆ ಅಂತಾ ಧಾರೆ ಎರೆದಿದ್ದಾರಂತೆ. ಇದಕ್ಕೆ ಅರ್ಥ ಇದೆಯಾ. ಇವನಿಗೆ ಕ್ಷಮೆ ಇದೆಯಾ? ಇವನ ಬಗ್ಗೆ ಜನರಿಗೆ ತಿಳಿಸಿ. ಇವನನ್ನು ನಂಬಿಕೊಂಡು ಹೆಣ್ಣು ಮಕ್ಕಳನ್ನು ಇವನ ಕ್ಲಾಸ್‌ಗೆ ಕಳುಹಿಸುವುದು ಹೇಗೆ ಎಂದು ಪೃಥ್ವಿ ಭಟ್ ತಂದೆ ಆರೋಪಿಸಿದ್ದರು. ತಂದೆಯ ಆಡಿಯೋ ವೈರಲ್ ಆಗುತ್ತಿದ್ದಂತೆ ಗಾಯಕಿ ಪೃಥ್ವಿ ಭಟ್ ತಂದೆಯ ಆರೋಪಗಳಿಗೆ ಉತ್ತರ ಕೊಟ್ಟಿದ್ದು, ತಮ್ಮ ಮದುವೆಯಲ್ಲಿ ನರಹರಿ ದೀಕ್ಷಿತ್ ಅವರ ಪಾತ್ರ ಏನು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಗಾಯಕಿ ಪೃಥ್ವಿ ಭಟ್ ಹೇಳಿದ್ದೇನು?
'ತಪ್ಪಾಯ್ತು ಅಪ್ಪ. ನೀವು ಕಳೆದ ಎರಡು ದಿನಗಳಿಂದ ಹವ್ಯಕ ಗ್ರೂಪ್ ಸೇರಿದಂತೆ ಮತ್ತೆ ಬೇರೆ ಬೇರೆ ಗ್ರೂಪ್‌ಗಳಲ್ಲಿ ನರಹರಿ ದೀಕ್ಷಿತ್ ಸರ್ ಬಗ್ಗೆ ಮತ್ತೆ ನನ್ನ ಬಗ್ಗೆ ಆಡಿಯೋ ಮೆಸೇಜ್ ಕಳುಹಿಸುತ್ತಿದ್ದೀರಿ. ಈ ವಿಷಯದಲ್ಲಿ ನರಹರಿ ದೀಕ್ಷಿತ್ ಸರ್ ಅವರ ತಪ್ಪು ಏನಿಲ್ಲ. ಮಾರ್ಚ್ 7ಕ್ಕೆ ದೀಕ್ಷಿತ್ ಸರ್ ಮನೆಗೆ ಬಂದಿದ್ದು, ಈ ವಿಷಯ ಬಗ್ಗೆ ಮಾತನಾಡಿದರು. ಆಗ ನಾನು ಅವರ ಎದುರು ಹಾಗೂ ನಿಮ್ಮ ಎದುರು ಅಭಿ ಇಷ್ಟ ಅಂತನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು. ಅದಾದ ಮೇಲೆ ನೀವು ನನ್ನನ್ನು ಕಟ್ಟುನಿಟ್ಟು ಮಾಡಿದಿರಿ.

ಕಾರ್ಯಕ್ರಮಗಳಿಗೆ ಹೋಗುವುದು ಬೇಡ ಅಂದಿರಿ. ಸಂಗೀತ ಬೇಡ ಅಂತಾ ಹೇಳಿದಿರಿ ಅದಕ್ಕೆ ಭಯಪಟ್ಟು ನಾನೇ ಈ ನಿರ್ಧಾರ ಮಾಡಿರುವುದು. ನಾನು ಮೊದಲು ಹೇಳಿದ ಹಾಗೆ ಈಗಲೂ ಹೇಳುತ್ತಿದ್ದೇನೆ. ನರಹರಿ ದೀಕ್ಷಿತ್ ಸರ್ ಅವರ ತಪ್ಪು ಏನಿಲ್ಲ. ನಮ್ಮ ಮದುವೆಯ ದಿನ ಅವರಿಗೆ ಗೊತ್ತಿರಲಿಲ್ಲ. ಆಮೇಲೆ ನಾನು ಫೋನ್ ಮಾಡಿ ಬರಲು ಹೇಳಿದ್ದು, ಆಮೇಲೆ ಅವರು ನನಗೆ ಅಭಿಗೆ ಆಶೀರ್ವಾದ ಮಾಡಿದರು. ಇದರಲ್ಲಿ ಅವರ ತಪ್ಪಿಲ್ಲ. ನಾನು ಮಾಡಿರುವುದು ಖಂಡಿತಾ ತಪ್ಪು, ಕ್ಷಮಿಸಿ' ಎಂದು ಪೃಥ್ವಿ ಭಟ್ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ.
ಮಗಳ ಮದುವೆ ಬಗ್ಗೆ ಪೃಥ್ವಿ ಭಟ್ ತಂದೆ ಹೇಳಿದ್ದೇನು?
'ನನ್ನ ಮಗಳು ಕಳೆದ ತಿಂಗಳು ಇಪ್ಪತ್ತೇಳನೇ ತಾರೀಖಿನಂದು ದೇವಸ್ಥಾನದಲ್ಲಿ ಯಾರನ್ನೋ ಮದುವೆಯಾಗಿ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ನಮ್ಮ ಸಂಪರ್ಕದಲ್ಲಿ ಇಲ್ಲ ಅವಳು ಈಗ. ಅವನು ಹವ್ಯಕ ಅಲ್ಲ, ಬ್ರಾಹ್ಮಣನೂ ಅಲ್ಲ. ಜಾತಿ ಯಾವುದಾದರೇನೂ ಅವಳು ನಮ್ಮನ್ನು ಬಿಟ್ಟು ಹೋಗಿ ಆಗಿದೆ. ಇನ್ನು ಜಾತಿ ಕಟ್ಟಿಕೊಂಡು ಏನು ಮಾಡಲು ಆಗುವುದಿಲ್ಲ. ನಮ್ಮನ್ನು ಬಿಟ್ಟು ಹೋಗಿ ಇಪ್ಪತ್ತು ದಿವಸ ಆಗಿ ಹೋಯ್ತು. ಇದನ್ನು ನೀವ್ಯಾರೂ ನಿರೀಕ್ಷೆ ಮಾಡುವಂತಹ ವಿಷಯವೇ ಅಲ್ಲ. ಅವಳು ಯಾವ ರೀತಿ ಇದ್ದಳು. ಅವಳನ್ನು ನಾವು ಯಾವ ರೀತಿ ಬೆಳೆಸಿದ್ದೇವೆ ಎನ್ನುವುದು ನೋಡಿದವರಿಗೆ ಗೊತ್ತಿರುವ ವಿಚಾರ. ಯಾಕೆ ಹೀಗೆ ಆಯ್ತು ಎನ್ನುವುದು ಯಾರಿಗೂ ಅರ್ಥವಾಗುವುದಿಲ್ಲ'.
'ಮೊದಲು ಈ ಬಗ್ಗೆ ಗೊತ್ತಾಗಿ ಪೃಥ್ವಿಯನ್ನು ವಿಚಾರಿಸಿದಾಗ ಅಭಿಷೇಕ್ ತುಂಬಾ ಸಮಯದಿಂದ ನನ್ನನ್ನು ಇಷ್ಟಪಡುತ್ತಿದ್ದಾರೆ. ನಿಮಗೆ ಇಷ್ಟವಾದರೆ ನನಗೂ ಇಷ್ಟ. ಇಲ್ಲವಾದರೆ ನನಗೂ ಬೇಡ. ನಿಮಗೆ ಇಷ್ಟ ಇದ್ದರೆ ನಾನು ಮದುವೆಯಾಗುತ್ತೇನೆ ಅಂತಾ ಹೇಳಿದ್ದಳು. ನನಗೆ ಧೈರ್ಯ ಬರಲಿಲ್ಲ. ಅವಳಿಗೆ ದೇವರ ಮೇಲೆ ನಂಬಿಕೆ ಇದೆ. ಹೀಗಾಗಿ ದೇವರ ಕೋಣೆಯಲ್ಲಿ ದೇವರ ಮೇಲೆ ಆಣೆ ಮಾಡು ಅಂದಾಗ, ಪ್ರಮಾಣ ಮಾಡಿ ನೀವು ಹೇಳಿದ ಹುಡುಗನನ್ನೇ ಮದುವೆಯಾಗುವುದು ಎಂದು ಹೇಳಿದಳು. ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿದಳು. ಆದರೆ ಇಪ್ಪತ್ತೇಳನೇ ತಾರೀಖಿನಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ' ಎಂದು ನೋವು ತೋಡಿಕೊಂಡಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications