5 New Serial: ಜೀ ಕನ್ನಡದಲ್ಲಿ ಏಕಕಾಲಕ್ಕೆ 5 ಹೊಸ ಸೀರಿಯಲ್: ಅಮೃತಧಾರೆ ಸೇರಿ ಈ ಧಾರಾವಾಹಿಗಳು ಕ್ಲೋಸ್ ?!

5 New Serial: ಜೀ ಕನ್ನಡದಲ್ಲಿ ಏಕಕಾಲಕ್ಕೆ 5 ಹೊಸ ಕಥೆಗಳು - ಸೀರಿಯಲ್‌ಗಳನ್ನು ಪರಿಚಯಿಸಲಾಗುತ್ತಿದೆ. ಈ ಮೂಲಕ ಜೀ ಕನ್ನಡದಲ್ಲಿ ಹೊಸ ಕಥೆಗಳ ಪರ್ವವೇ ಶುರುವಾಗಿದೆ. ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ಬಿಡುಗಡೆಗೆ ಸಂಬಂಧಿಸಿದಂತೆ ಜೀ ಕನ್ನಡ ವಾಹಿನಿಯು ಮಹತ್ವದ ಮಾಹಿತಿ ಹಂಚಿಕೊಂಡಿದೆ. ಜೀ ಕನ್ನಡ ವಾಹಿನಿಯಿಂದ ಹೊಸ ಪ್ರೋಮೋವೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ "ಹೊಸ ಕಥೆಗಳ ಪರ್ವ" ಕಾಲ ಎಂದು ತೋರಿಸಲಾಗಿದೆ.

ಇದೀಗ ವಾಹಿನಿಯಲ್ಲಿ ಐದು ಹೊಸ ಕಥೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಮೃತಧಾರೆ ಸೀರಿಯಲ್ ಸೇರಿದಂತೆ ಯಾವ ಸೀರಿಯಲ್ ಮುಕ್ತಾಯವಾಗಲಿದೆ ಎನ್ನುವ ಚರ್ಚೆ ಜೋರಾಗಿದೆ. ಅಮೃತಧಾರೆ ಸೀರಿಯಲ್ ಸೇರಿದಂತೆ ಹಲವು ಸೀರಿಯಲ್‌ಗಳು ಮುಕ್ತಾಯವಾಗಲಿದೆ ಎಂದು ಹೇಳಲಾಗಿತ್ತು. ಇದೀಗ ಅಧಿಕೃತ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

5 New Serial

ಕನ್ನಡದ ಪ್ರಮುಖ ವಾಹಿನಿಗಳಲ್ಲಿ ಒಂದಾಗಿರುವ ಜೀ ಕನ್ನಡ ವಾಹಿನಿಯು ಏಕಕಾಲಕ್ಕೆ ಹೊಸ ಐದು ಸೀರಿಯಲ್‌ಗಳನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧವಾಗಿದೆ. ಇದೀಗ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಸೀರಿಯಲ್‌ಗಳು ಮುಕ್ತಾಯವಾಗಲಿದೆ. ಬಾಕ್ಸಿಂಗ್‌ ಆಧಾರಿತ ಶಿವಶಕ್ತಿ, ಗ್ರಾಮೀಣ ಭಾಗದ ಕಥೆ ಅರಸಿ, ಪ್ರೇಮಕಥೆ ರಾಮ್ ಲೀಲಾ, ಇಂಟ್ರಸ್ಟಿಂಗ್ ಹಾಗೂ ಕವಲು ದಾರಿಯ ಪ್ರೇಮಕಥೆ ಮಿಲನ ಹಾಗೂ ಅಮ್ಮನ ಮಗ ಗೌರಿಪುತ್ರ ಎನ್ನುವ ಐದು ಹೊಸ ಸೀರಿಯಲ್‌ಗಳು ಬಿಡುಗಡೆ ಆಗಲಿವೆ ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ. ಈ ಹೊಸ ಧಾರಾವಾಹಿಯ ಪಾತ್ರಧಾರಿಗಳು ಯಾರು ಹಾಗೂ ವಿಶೇಷವೇನು ಎನ್ನುವುದನ್ನು ವಾಹಿನಿಯು ಇನ್ನೂ ಸಂಪೂರ್ಣವಾಗಿ ಹಂಚಿಕೊಂಡಿಲ್ಲ. ಹೊಸ ಪ್ರೋಮೋದ ಬಿಡುಗಡೆಯ ಬೆನ್ನಲ್ಲೇ ಯಾವ ಸೀರಿಯಲ್ ಮುಕ್ತಾಯವಾಗಲಿದೆ ಎನ್ನುವ ಚರ್ಚೆ ಜೋರಾಗಿದೆ. ಈ ಐದು ಹೊಚ್ಚ ಹೊಸ ಕಥೆಗಳು ಶೀಘ್ರದಲ್ಲಿಯೇ ಪ್ರಸಾರವಾಗಲಿದೆ ಎಂದು ಹೇಳಲಾಗಿದೆ.

ಮುಕ್ತಾಯವಾಗಲಿದೆಯೇ ಈ ಐದು ಪ್ರಮುಖ ಸೀರಿಯಲ್‌ಗಳು

ಇನ್ನು ಜೀ ಕನ್ನಡದಲ್ಲಿ ಕೆಲವೊಂದು ಸೀರಿಯಲ್‌ಗಳು ಮುಕ್ತಾಯದ ಹಂತದಲ್ಲಿವೆ ಎಂದು ವೀಕ್ಷಕರು ಲೆಕ್ಕಾಚಾರ ಹಾಕಿದ್ದಾರೆ. ಶ್ರಾವಣಿ ಸುಬ್ರಮಣ್ಯ, ಅಮೃತಧಾರೆ, ಲಕ್ಷ್ಮೀನಿವಾಸ, ಬ್ರಹ್ಮಗಂಟು ಹಾಗೂ ನಾ ನಿನ್ನ ಬಿಡಲಾರೆ ಸೀರಿಯಲ್‌ಗಳ ಕಥೆಗಳು ಮುಕ್ತಾಯವಾಗುವ ಹಂತದಲ್ಲಿವೆ. ಈ ಸೀರಿಯಲ್‌ಗಳು ಮುಕ್ತಾಯವಾಗಲಿದೆ ಎಂದು ವೀಕ್ಷಕರು ಅಂದಾಜಿಸಿದ್ದಾರೆ.

5 New Serial: ಅಮೃತಧಾರೆ ಸೀರಿಯಲ್

ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ತಿರುವು ಎದುರಾಗಿದ್ದು, ಇದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಅಮೃತಧಾರೆ ಸೀರಿಯಲ್‌ನ ಮುಖ್ಯ ಪಾತ್ರಧಾರಿ ಭೂಮಿಕಾಗೆ ಬ್ರೆಸ್ಟ್‌ ಕ್ಯಾನ್ಸರ್ ಬಂದಿದೆ. ಆದರೆ, ಈ ಅನಾರೋಗ್ಯ ಸಮಸ್ಯೆಯ ಬಗ್ಗೆ ತೋರಿಸುತ್ತಿರುವ ವಿಧಾನಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬ್ರೆಸ್ಟ್‌ ಕ್ಯಾನ್ಸರ್‌ ಬಂದ ಹಲವರು ಸವಾಲು ಎದುರಿಸಿ, ಆರೋಗ್ಯವಾಗಿ ಇದ್ದಾರೆ. ಆದರೆ ಬ್ರೆಸ್ಟ್‌ ಕ್ಯಾನ್ಸರ್‌ ಬಂದರೆ ಸತ್ತೇ ಹೋಗಲಿದ್ದಾರೆ ಎಂಬಂತೆ ತೋರಿಸುವುದು ತಪ್ಪು ಎಂದು ವೀಕ್ಷಕರು ಹೇಳಿದ್ದಾರೆ. ಅಲ್ಲದೆ ಭೂಮಿಕಾ ಅವರು ತಾವಾಗಿಯೇ ಹೇರ್ ಕಟಿಂಗ್ ಮಾಡಿಸಿಕೊಂಡಿರುವ ಸೀನ್‌ಗೂ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ಯಾನ್ಸರ್‌ ಬಂದರೆ ಕೂದಲು ತನ್ನಿಂದ ತಾನೇ ಉದುರುತ್ತದೆ ಕಟಿಂಗ್ ಮಾಡಿಸಿಕೊಳ್ಳುವ ಅವಶ್ಯಕತೆ ಏನಿದೆ ಅಂತ ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+