Yash: ನಾಳೆ 'ಟಾಕ್ಸಿಕ್' ರಿಲೀಸ್; ಇಂದು ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಯಶ್ ವಿಶೇಷ ಪೂಜೆ

ಮಂಗಳೂರು: ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ನಾಳೆ ಬುಧವಾರ (ಆಗಸ್ಟ್ 26) ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಹೊತ್ತಿನಲ್ಲೇ ಯಶ್ ಅವರು ಆರಾಧಿಸುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಯಶ್ ಈ ಭೇಟಿ, ದೇವರ ಮೇಲಿನ ಭಕ್ತಿ ಕಂಡು ಅವರ ಫ್ಯಾನ್ಸ್ ಮತ್ತಷ್ಟು ಖುಷ್ ಆಗಿದ್ದಾರೆ.

ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿಂದ ಅವರು ಕಾರಿನಲ್ಲಿ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಟಾಕ್ಸಿಕ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಶ್ರೀ ಮಂಜುನಾಥನ ದರ್ಶನ ಪಡೆದಿದ್ದು, ವಿಶೇಷ ಪೂಜೆ ಪುನಸ್ಕಾರಗಳನ್ನು ನೇರವೇರಿಸಿದ್ದಾರೆ.

Yash Visits Dharmasthala

ಇನ್ನೂ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು, ಅಭಿಮಾನಿ ಸಂಘದವರು ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು. ಯಶ್ ಅವರು ಈ ಹಿಂದೆ 'ಟಾಕ್ಸಿಕ್' ಸಿನಿಮಾ ಆರಂಭಕ್ಕೂ ಮುನ್ನ ಧರ್ಮಸ್ಥಳಕ್ಕೆ ಯಶ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು.

'ನಂಬಿದರೆ ಮಂಜುನಾಥ ಸ್ವಾಮಿ ಕೈ ಬಿಡಲ್ಲ'

ಆಗ ಮಾತನಾಡಿದ್ದ ಅವರು, ಅಪ್ಪ ಯಾವಾಗಲೂ ಹೇಳುತ್ತಾ ಇರುತ್ತಾರೆ. ಶ್ರೀ ಕ್ಷೇತ್ರದ ಧರ್ಮಸ್ಥಳ ಮಂಜುನಾಥನ ಬೇಡಿಕೊಂಡರೆ ಎಲ್ಲವು ಒಳಿತಾಗುತ್ತದೆ. ಈ ನಂಬಿಕೆಯಲ್ಲಿ ಬೆಳೆದು ಬಂದವರು ನಾವು, ಸಂಪೂರ್ಣ ಕರ್ನಾಟಕ ಆ ನಂಬಿಕೆಯಲ್ಲಿ ಬದುಕುತ್ತಾ ಇದೆ. ನನಗೆ ಇದ್ದಿದ್ದು ಒಂದೇ ನಂಬಿಕೆ ಎಂದರೆ ಮಂಜುನಾಥ ಸ್ವಾಮಿ ಕೈ ಬಿಡಲ್ಲ' ಎಂದು ಯಶ್ ಅವರು ಈ ಮೊದಲು ಹೇಳಿಕೊಂಡಿದ್ದರು.

ಅವರ ಅಂದು ಹೇಳಿದ ಮಾತಿನಂತೆಯೇ ಈಗಲೇ ನಡೆದುಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆದರೂ, ವಿಶ್ವಮಟ್ಟದಲ್ಲಿ ಕ್ರೇಜ್ ಹೊಂದಿದ್ದರು ಸಹಿತ ಅವರಿಗೆ ದೇವರ ಮೇಲಿನ ಭಕ್ತಿ ಕಡಿಮೆ ಆಗಿಲ್ಲ. 'ಟಾಕ್ಸಿಕ್' ಬಿಡುಗಡೆ ಒಂದು ದಿನ ಮುನ್ನ ಅವರು ಮಂಜುನಾಥನ ಸನ್ನಿಧಿಗೆ ಭೇಟಿ ನೀಡಿದ್ದು, ಅವರ ಫೋಟೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.

12000+ ಅಧಿಕ ಸ್ಕ್ರೀನ್‌ಗಳಲ್ಲಿ 'ರಾಯ'ನ ಆರ್ಭಟ

ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಏಕಕಾಲಕ್ಕೆ ಸಿದ್ದವಾದ ಯಶ್ ಅವರ 'ಟಾಕ್ಸಿಕ್' ಸಿನಿಮಾ ನಾಳೆ ಜಾಗತಿಕವಾಗಿ ಬಿಡುಗಡೆ ಆಗುತ್ತಿದೆ. ಬೆಂಗಳೂರು, ಕರ್ನಾಟಕ, ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಒಟ್ಟು ಸುಮಾರು 12,000ಕ್ಕೂ ಅಧಿಕ ಸ್ಕ್ರಿನ್‌ಗಳಲ್ಲಿ ಟಾಕ್ಸಿಕ್ ರಿಲೀಸ್ ಆಗುತ್ತಿದೆ.

ಕರ್ನಾಟಕದ ದಾವಣಗೆರೆ, ಬೆಂಗಳೂರು ಸೇರಿದಂತೆ ಕೆಲವು ಭಾಗಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋ ಆರಂಭವಾಗುತ್ತಿವೆ. ಯಶ್ ಕ್ರೇಜ್ ಪ್ಯಾನ್ ಇಂಡಿಯಾದಿಂದ ಪ್ಯಾನ್ ವರ್ಲ್ಡ್‌ಗೆ ಹೆಚ್ಚಾಗಿದೆ. ಈ ಟಾಕ್ಸಿಕ್ ಯಾವೆಲ್ಲ ದಾಖಲೆಗಳನ್ನು ಪುಡಿ ಮಾಡಲಿದೆ, ಎಷ್ಟು ಗಳಿಕೆ ಮಾಡಲಿದೆ, ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಫ್ಯಾನ್‌ಗಳಲ್ಲಿ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+