Yash Toxic: ಮೊದಲ ದಿನವೇ ಧುರಂಧರ್ ದಾಖಲೆ ಉಡೀಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್!

ನಟ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯಲು ಶುರು ಮಾಡಿದೆ. ಮೊದಲ ದಿನವೇ ಟಾಕ್ಸಿಕ್ ಸಿನಿಮಾ ಹಲವು ಹೊಸ ದಾಖಲೆಗಳನ್ನು ಬರೆದಿದ್ದು, ಮೊದಲ ದಿನವೇ ಧುರಂದರ್ ಸಿನಿಮಾದ ಹಲವು ದಾಖಲೆಗಳು ಉಡೀಸ್ ಆಗಿವೆ. ಯಶ್ ಅವರ ಟಾಕ್ಸಿಕ್ ಸಿನಿಮಾ ಆಗಸ್ಟ್‌ 26ರ ಬುಧವಾರ ಮಧ್ಯಾಹ್ನಕ್ಕೂ ಮೊದಲೇ ನಟ ರಣವೀರ್ ಸಿಂಗ್ ಅವರ ಧುರಂಧರ್ ಚಿತ್ರದ ಆರಂಭಿಕ ದಿನದ ಭಾರತದ ನಿವ್ವಳ ಗಳಿಕೆಯನ್ನು ಹಿಂದಿಕ್ಕಿದೆ.

ರಾಕಿಂಗ್ ಸ್ಟಾರ್ ಯಶ್ ಅವರು ಕಳೆದ ನಾಲ್ಕು ವರ್ಷಕ್ಕೂ ಹೆಚ್ಚು ಸಮಯದಿಂದ ಈ ಸಿನಿಮಾಗಾಗಿ ಸಮಯ ಮತ್ತು ಶ್ರಮ ಹಾಕಿದ್ದರು. ಇದೀಗ ಕನ್ನಡಿಗರೊಬ್ಬರ ಸಿನಿಮಾ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಟಾಕ್ಸಿಕ್ ಸಿನಿಮಾವನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶಿಸಿದ್ದಾರೆ. ಬಿಡುಗಡೆಯಾದ ಮೊದಲ ದಿನವೇ ಟಾಕ್ಸಿಕ್ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಕರ್ನಾಟಕದಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ನೆರೆಯ ಕೇರಳಂ ರಾಜ್ಯದಲ್ಲಿ ಓಣಂ ಹಬ್ಬದ ರಜೆ ದಿನವಾಗಿರುವುದರಿಂದ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳು ತುಂಬಿವೆ. ಭಾರತದಾದ್ಯಂತ ಸಿನಿ ರಸಿಕರನ್ನು ಸೆಳೆಯುವಲ್ಲಿ ಟಾಕ್ಸಿಕ್ ಸಿನಿಮಾ ಯಶಸ್ವಿಯಾಗಿದೆ. ಮೊದಲ ದಿನವೇ ಹಲವು ದಾಖಲೆಗಳನ್ನು ಮುರಿದಿರುವದೇ ಇದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

Yash Toxic

Sacnilk ವರದಿಯ ಪ್ರಕಾರ, 'ಟಾಕ್ಸಿಕ್' ಸಿನಿಮಾ ಮಧ್ಯಾಹ್ನ 12.40ರ ವೇಳೆಗೆ 9,003 ಶೋಗಳಿಂದ ₹31.76 ಕೋಟಿ ಗಳಿಕೆ ಮಾಡಿದೆ. ಇದರೊಂದಿಗೆ, ಭಾರತದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ₹37.48 ಕೋಟಿಗೆ ಏರಿಕೆಯಾಗಿದೆ. ಕನ್ನಡ 2D ಆವೃತ್ತಿಯು ಶೇಕಡಾ 77.69 ಪ್ರೇಕ್ಷಕರ ಭರ್ತಿಯ ಪ್ರಮಾಣವನ್ನು ದಾಖಲಿಸಿದೆ. ತೆಲುಗು ಆವೃತ್ತಿಯು ಶೇಕಡಾ 57.08 ರಷ್ಟು, ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಕ್ರಮವಾಗಿ ಶೇಕಡಾ 45.25 ಮತ್ತು 40.13 ರಷ್ಟು ಗಳಿಸಿವೆ. ಹಿಂದಿ ಆವೃತ್ತಿಯು ಶೇ. 37.85 ರಷ್ಟು ಗಳಿಕೆ ಕಂಡಿದೆ ಎಂದು ವರದಿಯಾಗಿದೆ.

ಧುರಂದರ್‌ ದಾಖಲೆಗಳು ಉಡೀಸ್

ರಣವೀರ್ ಸಿಂಗ್ ಅವರ ಧುರಂಧರ್ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 28.60 ಕೋಟಿ ರೂ. ನಿವ್ವಳ ಮತ್ತು 33.60 ಕೋಟಿ ರೂ. ಗಳಿಕೆ ಗಳಿಸಿತ್ತು. ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಬಿಡುಗಡೆಯಾಗಿದ್ದು, ವಿಶ್ವಾದ್ಯಂತ ಮೊದಲ ದಿನವೇ ಬರೋಬ್ಬರಿ 100-120 ಕೋಟಿ ರೂ. ಆದಾಯ ಗಳಿಕೆಯ ಸಮೀಪಕ್ಕೆ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದ ಭಾರತೀಯ ಸಿನಿಮಾಗಳಲ್ಲಿ ಟಾಕ್ಸಿಕ್ ಸಹ ಮುಂಚೂಣಿಯಲ್ಲಿದೆ. ಕೆಜಿಎಫ್: ಚಾಪ್ಟರ್ 2ರ ನಂತರ ಯಶ್ ಅವರ ಮೊದಲ ಸಿನಿಮಾ ಟಾಕ್ಸಿಕ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿದ್ದ ಅನಿಮಲ್ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿ ಮೊದಲ ದಿನವೇ ಭಾರತದಲ್ಲಿ 63.80 ಕೋಟಿ ರೂ. ಗಳಿಸಿತ್ತು. ಆದರೆ ಶಾರುಖ್ ಖಾನ್ ಅವರ ಜವಾನ್ ಚಿತ್ರವು ವಿಶ್ವಾದ್ಯಂತ 129.13 ಕೋಟಿ ರೂ.ಗಳ ಗಳಿಕೆಯನ್ನು ದಾಖಲಿಸಿತು. ಭಾರತದಲ್ಲಿ ಹಿಂದಿ ಆವೃತ್ತಿ ಮಾತ್ರ 40 ಕೋಟಿ ರೂ.ಗಳಿಗಿಂತ ಹೆಚ್ಚು ಕೊಡುಗೆ ನೀಡುವ ನಿರೀಕ್ಷೆಯಿದೆ. ಒಂದು ವೇಳೆ ಈ ಚಿತ್ರವು ಮೊದಲ ದಿನವೇ ವಿಶ್ವಾದ್ಯಂತ 100 ಕೋಟಿ ರೂ.ಗಳನ್ನು ದಾಟಿದರೆ, ಕೆಜಿಎಫ್: ಅಧ್ಯಾಯ 2 ರ ನಂತರ ಈ ಸಾಧನೆ ಮಾಡಿದ ಎರಡನೇ ಕನ್ನಡ ಚಿತ್ರ ಎನ್ನುವ ಖ್ಯಾತಿಯನ್ನು ಸಹ ಟಾಕ್ಸಿಕ್ ಗಳಿಸಲಿದೆ.

ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಮುಂಚಿತವಾಗಿ ಮುಂಗಡ ಬುಕಿಂಗ್ ಜೋರಾಗಿತ್ತು. ಬುಧವಾರ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ, ಟಾಕ್ಸಿಕ್ 5,334 ಪ್ರದರ್ಶನಗಳಲ್ಲಿ ಪ್ರದರ್ಶನಗೊಳ್ಳುತ್ತಿತ್ತು ಮತ್ತು ಭಾರತದಲ್ಲಿ 19.18 ಕೋಟಿ ರೂ.ಗಳ ನಿವ್ವಳ ಮೊತ್ತವನ್ನು ದಾಖಲಿಸಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+