Yash: ಅಂಬರೀಶ್ ಆಸೆ ಈಡೇರಿಸಿದ ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು, ಮಾರ್ಚ್ 05: ನಟ ರಾಕಿಂಗ್ ಸ್ಟಾರ್ ಯಶ್ ಅವರು ಹಿರಿಯ ನಟ ಅಂಬರೀಶ್ ಅವರ ಜೊತೆ ವಿಶೇಷ ನಂಟು ಹೊಂದಿದ್ದರು. ಹಲವು ವರ್ಷಗಳಿಂದ ಅಂಬಿ ಕುಟುಂಬದ ಜೊತೆ ರಾಕಿಂಗ್ ಸ್ಟಾರ್ ಯಶ್ ಒಡನಾಟ ಇಟ್ಟುಕೊಂಡಿದ್ರು, 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ದರ್ಶನ್ ಜೊತೆ ಸೇರಿ ಯಶ್ ಪ್ರಚಾರ ನಡೆಸಿದ್ದರು. ಇವರಿಬ್ಬರ ಬೆಂಬಲದಿಂದ ಸುಮಲತಾ ಸಂಸದೆಯಾಗಿ ಆಯ್ಕೆ ಆಗಿದ್ದರು.
ಇನ್ನೂ ಡ್ರಾಮಾ ಚಿತ್ರದಲ್ಲಿ ಅಂಬರೀಷ್ - ನಟ ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ನಟಿಸಿದ್ದರು. ಅಂಬಿ ಕುಟುಂಬದ ಜೊತೆಗೆ ಉತ್ತಮ ಒಡನಾಟ ಇರುವ ಕಾರಣದಿಂದಾಗಿ ಸುಮಲತಾ ಆಯೋಜನೆ ಮಾಡುವ ವಿಶೇಷ ಕಾರ್ಯಕ್ರಮಗಳಿಗೆ ಯಶ್ ಹಾಜರಿ ಹಾಕುತ್ತಾರೆ. ಇದೀಗ ಅಂಬರೀಶ್ ಅವರ ಆಸೆಯನ್ನು ಯಶ್ ಅವರು ಈಡೇರಿಸಿದ್ದಾರೆ. ಇದು ಯಶ್ಗೆ ಅಂಬರೀಷ್ ಮೇಲಿರುವ ಗೌರವವನ್ನು ತೋರಿಸುತ್ತದೆ. ಅಂಬಿ ಆಸೆಯನ್ನ ಈಡೇರಿಸಿದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಮಗಳು ಜನಿಸಿದಾಗ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಅಲ್ಲದೇ ರೆಬೆಲ್ ಸ್ಟಾರ್ ಅಂಬರೀಷ್ ಅವರು ಯಶ್ ಮಗಳಿಗೆ ಕಲಘಟಗಿ ತೊಟ್ಟಿಲನ್ನುಮಾಡಿಸಿಕೊಟ್ಟಿದ್ದರು. ಇದನ್ನ ನಟ ಯಶ್ ಅವರು ಅಂಬರೀಷ್ ಅವರ ನೆನಪಿಗಾಗಿ ಇಟ್ಟುಕೊಂಡಿದ್ದಾರೆ. ಇದೀಗ ಅಭಿಷೇಕ್ ಮನೆಗೆ ವಿಶೇಷ ತೊಟ್ಟಿಲು ಮಾಡಿಸಿ ಯಶ್ ಕಳುಹಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಅಭಿಷೇಕ್ ಅವರಿಗೆ ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಶೀಘ್ರವೇ ತೊಟ್ಟಿಲು ಶಾಸ್ತ್ರ ನಡೆಯಲಿದೆ. ಈ ಕಾರಣಕ್ಕೆ ಯಶ್ ಅವರು ಕಲಘಟಗಿಯಿಂದ ತೊಟ್ಟಿಲು ಮಾಡಿಸಿ ಅಭಿಷೇಕ್ ಮನೆ ತಲುಪಿಸಿದ್ದಾರೆ. ಅಭಿಷೇಕ್ಗೆ ಮಗು ಆದ ಬಳಿಕ ಕಲಘಟಗಿ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ತೂಗಿಸಬೇಕು ಎಂಬ ಆಸೆ ಅಂಬರೀಷ್ ಅವರದ್ದಾಗಿತ್ತು. ಆ ಮಾತನ್ನು ನೆನಪಿನಲ್ಲಿಟ್ಟುಕೊಂಡಿದ್ದರು ನಟ ಯಶ್ ಅವರು, ಅಭಿಷೇಕ್ಗೆ ಮಗು ಜನಿಸುತ್ತಿದ್ದಂತೆ ತೊಟ್ಟಿಲು ಮಾಡೋಕೆ ಆರ್ಡರ್ ಕೊಟ್ಟಿದ್ದರು ಎನ್ನಲಾಗಿದೆ.
ಅಂಬರೀಶ್ ಅವರ ಮನೆಯಲ್ಲಿ ಶೀಘ್ರದಲ್ಲಿಯೇ ತೊಟ್ಟಿಲು ಶಾಸ್ತ್ರ ನಡೆಯಲಿದೆ. ಈ ಕಾರಣಕ್ಕೆ ಯಶ್ ಅವರು ಕಲಘಟಗಿಯಿಂದ ತೊಟ್ಟಿಲು ಮಾಡಿಸಿ ಅಭಿಷೇಕ್ ಮನೆ ತಲುಪಿಸಿದ್ದಾರೆ. ಯಶ್ ಅವರು ಈಗ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ. ಈ ಉಡುಗರೆಯಿಂದ ಅಂಬಿ ಅಭಿಮಾನಿಗಳಿಗೆ ಖುಷಿಯಾಗಿದೆ.
ಕನ್ನಡದ ರೆಬೆಲ್ ಸ್ಟಾರ್ ದಿ.ಅಂಬರೀಶ್ ಅವರ ಮೊಮ್ಮಗನ ನಾಮಕರಣಕ್ಕೆ ಸಿದ್ಧವಾಗಿದೆ. ಅಂಬರೀಶ್ ಅವರು ಈ ಹಿಂದೆ ಯಶ್ ಮಗಳಿಗೆ ಗಿಫ್ಟ್ ಆಗಿ ನೀಡಿದ್ದ ತೊಟ್ಟಿಲು ಸಖತ್ ವೈರಲ್ ಆಗಿತ್ತು. ತಮ್ಮ ಮೊಮ್ಮಕ್ಕಳಿಗೂ ಅದೇ ತೊಟ್ಟಿಲು ಬಳಸಬೇಕು ಎಂದು ಅಂಬರೀಶ್ ಅವರು ಹಿಂದೆಯೇ ಆಸೆ ಪಟ್ಟಿದ್ದರಂತೆ. ಹೀಗಾಗಿ ಅಂಬರೀಶ್ ಮೊಮ್ಮಗನಿಗೂ ಕಲಘಟಗಿ ತೊಟ್ಟಿಲು ರೆಡಿಯಾಗಿ ಬಂದಿದೆ. ಮಾರ್ಚ್ 14 ಕ್ಕೆ ಜೂನಿಯರ್ ಅಂಬರೀಶ್ ನಾಮಕರಣ ಇದ್ದು ತಾತ ಕೊಟ್ಟ ತೊಟ್ಟಿಲನ್ನ ಮೊಮ್ಮಗನಿಗೆ ಉಡುಗೊರೆ ಆಗಿ ಯಶ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications