Yash: ನಟಿ ರಶ್ಮಿಕಾ ಮಂದಣ್ಣರ "ಮಿಸ್ಟರ್ ಶೋ ಆಫ್" ಕಾಮೆಂಟ್ಗೆ ನಯವಾಗಿ ತಿರುಗೇಟು ಕೊಟ್ಟ ರಾಕಿಂಗ್ ಸ್ಟಾರ್ ಯಶ್
Yash: ರಾಕಿಂಗ್ ಸ್ಟಾರ್ ಯಶ್ ಅವರು ನಟಿ ರಶ್ಮಿಕಾ ಮಂದಣ್ಣ ಅವರ ಹೇಳಿಕೆಗೆ ನಯವಾಗಿಯೇ ತಿರುಗೇಟು ನೀಡಿದ್ದಾರೆ. ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಯಶ್ ಅವರ ಬಗ್ಗೆ ಕಾಮೆಂಟ್ ಮಾಡಿದ್ದರು. ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವು ತಿಂಗಳುಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ನಟ ಯಶ್ ಅವರನ್ನು "ಮಿಸ್ಟರ್ ಶೋಆಫ್" ಎಂದಿದ್ದರು.
ಇದೀಗ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ನಟ ಯಶ್ ಅವರು ಈ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವು ಟಿವಿ ಶೋಗಳ ಆಂಕರ್ಗಳು ಉದ್ದೇಶಪೂರ್ವಕಾಗಿಯೇ ಈ ರೀತಿ ಪ್ರಶ್ನೆಗಳನ್ನು ಕೇಳುತ್ತಾರೆ ಅಂತಲೂ ನಟ ಯಶ್ ಅವರು ಹೇಳಿದ್ದಾರೆ. ಇನ್ನು ನಟ ಯಶ್ ಅವರು ಪ್ಯಾನ್ ಇಂಡಿಯಾ ಮಟ್ಟದ ರಾವಣ ಹಾಗೂ ಟಾಕ್ಸಿಕ್ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಟಾಕ್ಸಿಕ್ ಸಿನಿಮಾದ ಪ್ರಮೋಷನ್ ಕೆಲಸಗಳು ನಡೆಯುತ್ತಿವೆ. ಇದೀಗ ನಟ ಯಶ್ ಅವರು ದೇಶದ ಅತ್ಯಂತ ದೊಡ್ಡ ಶೋಗಳಲ್ಲಿ ಒಂದಾಗಿರುವ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನಟಿ ರಶ್ಮಿಕಾ ಅವರು ಮಿಸ್ಟರ್ ಶೋ ಆಫ್ ಕಾಮೆಂಟ್ಗೆ ಪ್ರತಿಕ್ರಿಯಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಯಶ್ ಅವರು, ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯವಿರುತ್ತದೆ. ಅದಕ್ಕೆ ಅವರು ಅರ್ಹರು ಸಹ ಹೌದು. ಆದರೆ ಯಾರೊಬ್ಬರ ಗ್ರಹಿಕೆ ಸಹ ಮತ್ತೊಬ್ಬರ ವ್ಯಕ್ತಿತ್ವವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ರಾಕಿಂಗ್ಸ್ಟಾರ್ ಯಶ್ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲ ಅಭಿಮಾನಿಗಳು ಸಹ ನಟರನ್ನು ಗೌರವಿಸಬೇಕೆಂದು ಯಶ್ ಅಭಿಪ್ರಾಯಪಟ್ಟಿದ್ದಾರೆ.
ನನ್ನ ವ್ಯಕ್ತಿತ್ವ ಎಂದಿಗೂ ಬದಲಾಗಲ್ಲ ಎಂದ ಯಶ್
ಇನ್ನು ರಶ್ಮಿಕಾ ಮಂದಣ್ಣ ಅವರು, ನಟ ಯಶ್ ಅವರ ಬಗ್ಗೆ "ಮಿಸ್ಟರ್ ಶೋಆಫ್" ಎಂದು ತಮ್ಮ ವೃತ್ತಿ ಜೀವನದ ಪ್ರಾರಂಭಿಕ ದಿನಗಳಲ್ಲಿ ಹೇಳಿದ್ದರು. ಸಂದರ್ಶನವೊಂದರಲ್ಲಿ ನಿಮ್ಮ ಪ್ರಕಾರ, "ಕನ್ನಡ ಚಿತ್ರರಂಗದ ಮಿಸ್ಟರ್ ಶೋ ಆಫ್ ಎಂದರೆ ಯಾರು?" ಎಂದು ಕೇಳಲಾಗಿತ್ತು. ಪ್ರಾರಂಭದಲ್ಲಿ ರಶ್ಮಿಕಾ ಅವರು ಉತ್ತರ ಕೊಟ್ಟಿರಲಿಲ್ಲ. ಆದರೆ ಆ ಮೇಲೆ ಯಶ್ ಎಂದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಇದಕ್ಕೆ ಯಶ್ ಅವರ ಅಭಿಮಾನಿಗಳು ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ನಟಿ ರಶ್ಮಿಕಾ ಅವರ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಆಪ್ ಕಿ ಅದಾಲತ್ ಶೋನಲ್ಲಿ ಆಂಕರ್ ರಜತ್ ಶರ್ಮಾ ಅವರ ಪ್ರಶ್ನೆಗೆ ನಟ ಯಶ್ ಅವರು ಸಮಾಧಾನದಿಂದಲೇ ಉತ್ತರಿಸಿದ್ದಾರೆ. ಆ ಸಂದರ್ಶನ ನಡೆದ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಹೊಸಬರು. ಕೆಲವೊಮ್ಮೆ ಟಿವಿ ಶೋಗಳು ಅಥವಾ ಸಂದರ್ಶನಗಳಲ್ಲು ಮೂರ್ನಾಲ್ಕು ಆಯ್ಕೆಗಳನ್ನು ಕೊಡ್ತಾರೆ, ಯಾವುದಾದರೂ ಒಂದು ಹೆಸರನ್ನ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ರಶ್ಮಿಕಾ ಸಹ ಇದೇ ರೀತಿ ಯೋಚಿಸಿ ಹೇಳಿರುವ ಸಾಧ್ಯತೆ ಇದೆ. ಅಂತಿಮವಾಗಿ ಬೇರೆಯವರ ಅಭಿಪ್ರಾಯ ಅಥವಾ ದೃಷ್ಟಿಕೋನದಿಂದ ನನ್ನ ವ್ಯಕ್ತಿತ್ವ ಎಂದಿಗೂ ಬದಲಾಗಲ್ಲ ಅಂತ ಯಶ್ ಹೇಳಿದ್ದಾರೆ.


Click it and Unblock the Notifications
