ನಟ ದರ್ಶನ್‌ಗೆ ಬೇಗ ಜಾಮೀನು ಸಿಗಬೇಕಂದ್ರೆ ಹೀಗೆ ಆಗ್ಲೇಬೇಕು? ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದೇನು?

Actor Darshan Case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಜೈಲುಪಾಲಾಗಿದೆ. ಇನ್ನು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ದರ್ಶನ್‌ ಪರ- ವಿರೋಧದ ಚರ್ಚೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿವೆ. ಅಲ್ಲದೆ, ಇದೀಗ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಪತಿ ದರ್ಶನ್‌ಗಾಗಿ ವಿಜಯಲಕ್ಷ್ಮಿ ಟೆಂಪಲ್‌ ರನ್‌ ಕೂಡ ಮುಂದುವರೆಸಿದ್ದು, ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟನಿಗಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಇದರ ನಡುವೆಯೇ ಕೆಲವರು ದರ್ಶನ್‌ ಪರ ಚರ್ಚೆ ಮಾಡಿದರೆ, ಇನ್ನು ಕೆಲವು ಮಂದಿ ವಿರುದ್ಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Will get bail to Actor Darshan Do you know what did senior police officer says

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಜೈಲುಪಾಲಾಗಿ ಒಂದೂವರೇ ತಿಂಗಳು ಕಳೆದಿದ್ದು, ಚಾರ್ಜ್‌ಶೀಟ್‌ ಕೂಡ ಸಲ್ಲಿಕೆಯಾಗಿಲ್ಲ. ಆದರೆ ದರ್ಶನ್‌ಗೆ ಜಾಮೀನು ಸಿಗುತ್ತಾ.. ಇಲ್ಲವಾ? ಅನ್ನುವುದು ಇದೀಗ ತುಂಬಾ ಪ್ರಮುಖವಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಲೇ ಇದೆ.

ಇನ್ನು ಹಿರಿಯ ಪೊಲೀಸ್‌ (ನಿವೃತ್ತ ಪೊಲೀಸ್‌) ಅಧಿಕಾರಿ ಲೋಕೇಶ್ವರ್‌ ಎಂಬುವವರು ಹೇಳುವ ಪ್ರಕಾರ, "ಈ ಪ್ರಕರಣ ಒಂದು ವಿಶೇಷ ಪ್ರಕರಣ ಆಗಿದೆ. ಆದ್ದರಿಂದ ದರ್ಶನ್‌ಗೆ ಜಾಮೀನು ಸಿಗುವುದು ತುಂಬಾ ಕಷ್ಟ," ಎಂದು ಹೇಳಿದ್ದಾರೆ. ಇನ್ನು ಈಗಾಲೇ ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ಪೊಲೀಸರು ಕೆಲಹಾಕಿದ್ದು, ಇವುಗಳು ಬಲಿಷ್ಠವಾಗಿವೆ. ಟೆಕ್ನಿಕಲ್‌ ಎವಿಡೆನ್ಸ್‌ ಕೂಡ ಪ್ರಬಲವಾಗಿವೆ ಎನ್ನಲಾಗುತ್ತಿದೆ.

ನಟ ದರ್ಶನ್‌ ಈ ಮನೆ ಊಟದ ವಿಷಯಕ್ಕೆಲ್ಲ ಜಾಮೀನು ಅರ್ಜಿ ಸಲ್ಲಿಕೆ ಮಾಡಬಾರದು, ಅದು ಒಂದು ರೀತಿಯಲ್ಲಿ ಪ್ರಕರಣಕ್ಕೆ ಹಿನ್ನಡೆ ಆದಂತೆ ಆಗುತ್ತದೆ. ದರ್ಶನ್‌ ಹೊರಬರುವುದಕ್ಕೆ ಒಂದು ದಾರಿಯಿದೆ, ದರ್ಶನ್‌ ಜೈಲಿನೊಳಗೆ ಯಾವ ರೀತಿ ನಡೆದುಕೊಳ್ತಾರೆ ಅನ್ನೋದರ ಮೇಲೆ ಸ್ವಲ್ಪ ಬೇಗ ಜಾಮೀನು ಸಿಗಬಹುದು ಎಂದು ಹೇಳಿದ್ದಾರೆ.

ಅಲ್ಲದೆ, 2011ರಲ್ಲಿ ದರ್ಶನ್‌ ಪತ್ನಿ ಮೇಲೆ ಹಲ್ಲೆ ಮಾಡಿ ಜೈಲಿಗೆ ಹೋಗಿ ಬಂದ ನಂತರ ಬದಲಾಗಬೇಕಿತ್ತು. ಆ ವಿಚಾರದಲ್ಲಿ ದುನಿಯಾ ವಿಜಯ್‌ ಕೂಡ ಸಂಧಾನಕ್ಕೆ ಬಂದಿದ್ದರು. ನಂತರ ಜಾಮೀನು ಸಿಕ್ಕು ಪ್ರಕರಣ ಖುಲಾಸೆ ಆಗಿತ್ತು. ಇನ್ನು ಇಷ್ಟಾದರೂ ನಟ ದರ್ಶನ್‌ ಬದಲಾಗಿಲ್ಲ. ಅವರ ಹಿಂದೆ ಇರುವವರ ಸಹವಾಸ ಅಂತಹದ್ದಾಗಿದೆ. ಒಬ್ಬ ಸೆಲೆಬ್ರೆಟಿ ಸೆಲೆಬ್ರೆಟಿ ಥರ ಇರಬೇಕು. ಆದರೆ ಇವರು ನಾನು ದೊಡ್ಡ ನಟ, ಬೆಳೆದುಬಿಟ್ಟಿದ್ದೇನೆ ದುರಂಕಾರ ಅವನನ್ನು ಹೀಗೆ ಮಾಡಿಸಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಅವನು ತುಂಬಾ ಕಷ್ಟದಿಂದ ಬಂದವನಾಗಿದ್ದನು. ಹಾಗೆಯೇ ದಿನ ಕಳೆಯುತ್ತಾ ಬೆಳೆಯುತ್ತಾ ದೊಡ್ಡ ನಟನಾಗಿ ಸಾಧನೆ ಮಾಡಿದ. ಆದರೆ ಇದನ್ನೆಲ್ಲ ಅವನು ಉಳಿಸಿಕೊಂಡು ಹೋಗಬೇಕಿತ್ತು. ಚಿತ್ರದುರ್ಗದ ಪೊಲೀಸರಿಗೆ ಈ ಬಗ್ಗೆ ಮುಂಚೆಯೇ ಹೇಳಿದ್ದರೆ, ಈ ಕೊಲೆಯೂ ನಡೆಯುತ್ತಿರಲಿಲ್ಲ. ಆತನ ಅಂದರೆ ದರ್ಶನ್‌ ಕೆರಿಯರ್‌ಗೂ ಏನು ಆಗುತ್ತಿರಲಿಲ್ಲ. ಇನ್ನು ಇದೀಗ ಆತನಿಗೆ ಜಾಮೀನು ಸಿಗೋದು ತುಂಬಾನೇ ಕಷ್ಟ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+