ಮತ್ತೆ ಪೊಲೀಸರ ಅತಿಥಿಯಾದ್ರಾ ವಿಕಿಪೀಡಿಯಾ ವಿಕಾಸ್:‌ ವಿಷಯ ಅದಲ್ಲ

ನಾನು ನಂದಿನಿ' ಹಾಡಿನ ಖ್ಯಾತಿಯ ವಿಕ್ಕಿ, ಅಮಿತ್ ಚಿಟ್ಟೆ ಇದೀಗ ​ ಪೊಲೀಸರ ಅತಿಥಿಯಾಗಿದ್ದಾರೆ. ನಾನು ನಂದಿನ ಬೆಂಗಳೂರಿಗೆ ಬಂದಿನಿ ಎಂಬ ಈ ಹಾಡು ದೇಶದಾದ್ಯಂತ ಖ್ಯಾತಿ ಪಡೆದು ವಿಕ್ಕಿ ಅವರಿಗೆ ದೊಡ್ಡ ಹೆಸರನ್ನೂ ತಂದುಕೊಟ್ಟಿತು.ಆದರೆ, ಇದೀಗ ಅದೇ ವಿಕ್ಕಿ ಹಾಗೂ ಅಮಿತ್ ಚಿಟ್ಟೆ ಇಬ್ಬರೂ ಸ್ಕ್ಯಾಮ್ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ವಿಡಿಯೋವನ್ನು ಶೇರ್ ಮಾಡಿಕೊಂಡು ನೆಟ್ಟಿಗರಿಗೆ ಮನರಂಜನೆ ನೀಡುತ್ತಿದ್ದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್​ ಪೊಲೀಸರ ಅತಿಥಿಯಾಗಿದ್ದಾರೆ. ಭಿನ್ನ ವಿಭಿನ್ನ ರೀಲ್ಸ್​ಗಳನ್ನು​ ಶೇರ್ ಮಾಡಿ ಸಖತ್​ ಸುದ್ದಿಯಲ್ಲಿ ಇರುತ್ತಿದ್ದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್​ಗೆ ಮತ್ತೊಂದು ಹೊಸ ಹಾಡನ್ನು ರೆಡಿ ಮಾಡಿದ್ದಾರೆ. ಅದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

wikipedia vikas new reels cyber crime video viral

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಕ್ರೈಮ್ ಅಪರಾಧಗಳು ಜಾಸ್ತಿ ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ವರ್ಷದಲ್ಲಿ ಸಾವಿರ ಕೋಟಿಗೂ ಅಧಿಕ ಹಣ ಸೈಬರ್ ವಂಚಕರ ಪಾಲಾಗಿದೆ. ಹೀಗಾಗಿ ಇಂತಹ ವಂಚಕರಿಗೆ ಆಹಾರವಾಗಬಾರದು ಎಂದು ವಿಕ್ಕಿಪೀಡಿಯಾ ವಿಕಾಸ್ ವಿಡಿಯೋ ಮೂಲಕ ನೆಟ್ಟಿಗರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಸ್ಕ್ಯಾಮ್ ಮಾಡುವವರು ಹೇಗೆ ನಿಮ್ಮನ್ನು ಯಾಮಾರಿಸುತ್ತಾರೆ? ಯಾವಾವ ಉದ್ದೇಶದಿಂದ ನಿಮಗೆ ಕರೆ ಮಾಡಿ ನಿಮ್ಮ ಹಣ ಲಪಟಾಯಿಸುತ್ತಾರೆ? ಎಂಬುದನ್ನು ತೋರಿಸಿ ಜಾಗೃತಿ ಮೂಡಿಸಿದ್ದಾರೆ. ಇದನ್ನು ಸ್ವತಃ ಪೊಲೀಸರ ನೆರವಿನಿಂದಲೇ ಮಾಡಿದ್ದಾರೆ. ಪೊಲೀಸ್ ಇಲಾಖೆಯಿಂದಲೇ ಸೈಬರ್ ಸ್ಕ್ಯಾಮ್ ತಡೆಗಟ್ಟುವುದಕ್ಕೆ ಜಾಗೃತಿ ಮೂಡಿಸಲು ಈ ಇಬ್ಬರನ್ನು ಬಳಕೆ ಮಾಡಿಕೊಂಡು ವಿಡಿಯೋ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಇನ್ನೂ ಈ ಜಾಗೃತಿ ವಿಡಿಯೋದಲ್ಲಿ ಬ್ಯಾಂಕ್‌ನವರ ಹೆಸರಿನಲ್ಲಿ ಕರೆ ಮಾಡುವ ಸೈಬರ್ ಸ್ಕ್ಯಾಮ್ ಮಾಡುವವರು ನಿಮ್ಮ ಅಕೌಂಟ್ ಫ್ರೀಜ್ ಆಗಿದೆ. ಎಟಿಎಂ ಕಾರ್ಡ್ ಬ್ಲ್ಯಾಕ್ ಆಗಿದೆ ಹಾಗೂ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಬೇಕು ಎಂದು ಕರೆ ಮಾಡಿ ನಿಮ್ಮ ಮೊಬೈಲ್‌ಗೆ ಒಂದು ಒಪಿಟಿ ಕಳಿಸಿ ನಿಮ್ಮ ಖಾತೆಯಲ್ಲಿರುವ ಎಲ್ಲ ಹಣ ಲಪಟಾಯಿಸುತ್ತಾರೆ. ಮತ್ತೊಂದು ರೀತಿಯಲ್ಲಿ ಇದು ಪೊಲೀಸ್, ನ್ಯಾಯಾಧೀಶರು ಎಂದೆಲ್ಲಾ ಹೇಳಿ ಡಿಜಿಟಲ್ ಆರೆಸ್ಟ್ ಆಗಿದ್ದೀರಿ ಎಂದು ಹೇಳಿ ನಿಮ್ಮ ಬ್ಯಾಂಕ್ ಖಾತೆ ವಿವರ ಪಡೆದು ವಂಚಿಸುತ್ತಾರೆ ಎಂದು ಈ ವಿಡಿಯೋ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಏಕಾಏಕಿ ಫೋನ್‌ ಮಾಡಿ ನಿಮಗೆ ಉದ್ಯೋಗ ಆಫರ್, ಬ್ಯಾಂಕ್ ಜಾಬ್, ಕೋರಿಯರ್ ಬಂದಿದೆ, ಗಿಫ್ಟ್ ಬಂದಿದೆ, ಆಪ್ ಡೌನ್‌ಲೋಡ್ ಮಾಡಿಕೊಳ್ಳಿ, ವರ್ಕ್‌ಫ್ರಂ ಹೋಮ್ ಇತ್ಯಾದಿಗಳನ್ನು ನಿಮಗೆ ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ ಎಂದು ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಇಂಥವರಿಂದ ಹುಷಾರಾಗಿದೆ. ಒಂದು ವೇಳೆ ಸೈಬರ್ ಅಪರಾಧ ಕೃತ್ಯಕ್ಕೆ ಒಳಗಾದಲ್ಲಿ ಕೂಡಲೇ ಸೈಬರ್ ಅಪರಾಧ ಸಹಾಯವಾಣಿ 1930 ಕರೆ ಮಾಡಿ ದೂರು ದಾಖಲಿಸಿ ಎಂದು ವಿಡಿಯೋ ಮೂಲಕ ಜಾಗೃತಿ ಮೂಡಿಸಿದ್ದಾರೆ. ಇನ್ನೂ ಈ ಜಾಗೃತಿ ವಿಡಿಯೋದಲ್ಲಿ ಬೆಂಗಳೂರಿನ ಪೂರ್ವ ವಲಯದ ಬೈಯಪ್ಪನಹಳ್ಳಿ ಪೊಲೀಸ ಠಾಣೆ ಹಾಗೂ ಸೆನ್ ಪೊಲೀಸ್‌ ಠಾಣೆ ಪೊಲೀಸರು ಕೂಡ ಪಾಲ್ಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+