Darshan Thoogudeepa: ಜಾಮೀನು ಮುಂದೂಡಿಕೆ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡಿದ ಪತ್ನಿ ವಿಜಯಲಕ್ಷ್ಮಿ-ದಾಸನ ಪ್ರತಿಕ್ರಿಯೆ ಹೇಗಿತ್ತು
ಬಳ್ಳಾರಿ ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಇಂದು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದರು. ಭೇಟಿ ವೇಳೆ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಕೋರ್ಟ್‌ನಲ್ಲಿ ಇಂದಾದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ಇಂದು ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ ಎಂದು ದರ್ಶನ್ ಅವರಿಗೆ ವಿಜಯಲಕ್ಷ್ಮಿ ತಿಳಿಸಿದರು. ಇದನ್ನು ತಿಳಿದು ದಾಸ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜೈಲಿನಲ್ಲಿ ತಮಗಿರಲು ಆಗುತ್ತಿಲ್ಲ ಎಂದು ಪತ್ನಿ ಮುಂದು ನೋವು ತೋಡಿಕೊಂಡಿದ್ದಾರೆನ್ನುವ ವಿಚಾರ ತಿಳಿದು ಬಂದಿದೆ.
ಹೌದು... ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ದರ್ಶನ್ ಹಾಗೂ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಇವರಿಬ್ಬರ ಜಾಮೀನು ಅರ್ಜಿಯನ್ನು ಕೋರ್ಟ್ ಮುಂದೂಡಿದೆ. ಇದನ್ನು ತಿಳಿದು ದರ್ಶನ್ ಭಾರೀ ಬೇಸರಗೊಂಡಿದ್ದಾರೆ.

ಜೊತೆಗೆ ಪತ್ನಿಗೆ ತಮಗೆ ಜೈಲಿನಲ್ಲಿ ಇರಲು ಆಗುತ್ತಿಲ್ಲ ಎಂದು ಹೇಳಿದ್ದಾರಂತೆ. ದಿಂಬು, ಬೆಡ್, ಚೇರ್ ಕೊಡ್ತಾಯಿಲ್ಲ ಅಂತ ದರ್ಶನ್ ಪತ್ನಿ ಮುಂದೆ ಗೋಳಾಡಿದ್ದಾರಂತೆ. ಆಗ ವಿಜಯಲಕ್ಷ್ಮಿ ಇನ್ನೂ ಸ್ವಲ್ಪ ದಿನ ಎಲ್ಲವೂ ಸರಿ ಹೋಗುತ್ತದೆ. ವಕೀಲರ ಜೊತೆ ಮಾತನಾಡುವುದಾಗಿ ಸಾಂತ್ವಾನ ಹೇಳಿದ್ದಾರೆಂದು ತಿಳಿದು ಬಂದಿದೆ.
ಅಲ್ಲದೆ ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ15, ಎ16, ಎ17 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನಿಮಗೂ ಸಹ ಜಾಮೀನು ಸಿಗುತ್ತದೆ. ಧೈರ್ಯವಾಗಿರಿ ಎಂದು ದರ್ಶನ್ ಅವರಿಗೆ ಪತ್ನಿ ಧೈರ್ಯ ತುಂಬಿದ್ದಾರೆ. ಬಳಿಕ ದರ್ಶನ್ ಅವರಿಗೆ ಬಟ್ಟೆ, ಹಣ್ಣು ನೀಡಿ ವಿಜಯಲಕ್ಷ್ಮಿ ವಾಪಾಸ್ ತೆರಳಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿಸಲಾಗಿದ್ದ 17 ಆರೋಪಿಗಳ ಪೈಕಿ ಒಟ್ಟು 3 ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಇನ್ನುಳಿದಂತೆ 14 ಆರೋಪಿಗಳಿಗೆ ಜೈಲೂಟವೇ ಗತಿಯಾಗಿದೆ.
ಮೂವರಿಗೆ ಜಾಮೀನು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ15 ಆರೋಪಿ ಕಾರ್ತಿಕ್, ಎ16 ಆರೋಪಿ ಕೇಶವ್ ಮೂರ್ತಿ, ಎ17 ಆರೋಪಿ ನಿಖಿಲ್‌ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕೇಶವ್ ಮೂರ್ತಿ, ಕಾರ್ತಿಕ್ ಇವರಿಬ್ಬರೂ ರೇಣುಕಾಸ್ವಾಮಿ ಮೃತ ದೇಹ ಸಾಗಿಸಲು ಹಣ ಪಡೆದಿದ್ದರು. ಬಳಿಕ ನಿಖಿಲ್ ಅವರೊಂದಿಗೆ ಇವರಿಬ್ಬರು ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿದವರು ತಾವೇ ಎಂದು ಹೇಳಿಕೊಂಡು ಶರಣಾಗಿದ್ದರು. ಆದರೆ ಈ ಮೂರು ಜನರದ್ದು ಕೊಲೆಯಲ್ಲಿ ನೇರ ಪಾತ್ರ ಇರಲಿಲ್ಲ. ಹೀಗಾಗಿ ಇವರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ವಕೀಲ ರಂಗನಾಥ್, ದೋಷಾರೋಪಣ ಪಟ್ಟಿ ಗಮನಿಸಿದರೆ, ಕೊಲೆಯಲ್ಲಿ ಈ ಮೂರು ಜನರದ್ದು ಪಾತ್ರ ಇಲ್ಲ. ಇವರು ಹಣ ಪಡೆದು ಶವವನ್ನು ಸಾಗಿಸಿ, ತಾವೇ ಕೊಲೆ ಮಾಡಿದವರು ಎಂದು ಹೇಳಿಕೊಂಡಿದ್ದರು. ಆದರೆ ಇವರ ಪಾತ್ರ ಕೊಲೆಯಲ್ಲಿ ಇಲ್ಲದ ಕಾರಣ ಅವರಿಗೆ ಕೋರ್ಟ್ ಜಾಮೀನು ನೀಡಿದೆ ಎಂದರು. ಇದರಿಂದಾಗಿ ದರ್ಶನ್‌ಗೂ ಜಾಮೀನು ಸಿಗುತ್ತೆ ಅನ್ನೋ ಆಶಾಭಾವನೆಯಲ್ಲಿ ಫ್ಯಾನ್ಸ್ ಕಾಯುತ್ತಿದ್ದಾರೆ.
ದರ್ಶನ್‌ಗೆ ಜಾಮೀನು
ಇನ್ನೂ ದರ್ಶನ್‌ಗೆ ಜಾಮೀನು ಸಿಗುತ್ತಾ? ಇಲ್ವಾ? ಅನ್ನೋ ಪ್ರಶ್ನೆಗೆ ವಕೀಲರು ಸಿಗುತ್ತದೆ. ಆದರೆ ತಡವಾಗಬಹುದು ಎಂದು ಹೇಳಿದ್ದಾರೆ. ಯಾಕೆಂದರೆ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿ ಆಗಿದ್ದಾರೆ. ಅವರು ಪಾತ್ರ ಇರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲೂ ಇದೆ. ಆದರೆ ಪವಿತ್ರಾ ಗೌಡ ಹಾಗೂ ಗಾಂಗ್‌ನಲ್ಲಿರುವ ಇತರರ ಪ್ರಚೋದನೆಯಿಂದಾಗಿ ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆಂದು ಚಾರ್ಜ್‌ಶೀಟ್‌ನಲ್ಲಿ ಸ್ವಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ದರ್ಶನ್‌ಗೆ ಜಾಮೀನು ಸಿಗುವುದು ಸದ್ಯಕ್ಕೆ ತಡವಾಗುಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.












Click it and Unblock the Notifications