Deepavali 2024: ದೀಪಾವಳಿ ಹಬ್ಬದ ದಿನ ಸಾಲ ಕೇಳುವವರು ಇರ್ತಾರೆ ಹುಷಾರ್!

ದೀಪಾವಳಿ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ, ಈಗಾಗಲೇ ಎರಡು ದಿನ ದೀಪಾವಳಿ ಹಬ್ಬ ಆಚರಣೆ ನಡೆದಿದೆ. ದೀಪಾವಳಿಗೆ ಲಕ್ಷ್ಮೀ ದೇವಿ ಪೂಜೆ ಮಾಡಿ, ಮನೆಗೆ ಲಕ್ಷ್ಮೀ ದೇವಿ ಬರಲಿ ಎಂಬ ಬೇಡಿಕೆಯನ್ನ ಜನರು ಕೂಡ ಇಟ್ಟಿದ್ದಾರೆ. ಆದರೆ ಇಂತಹ ಸಮಯದಲ್ಲೇ ಕೆಲವರು ಅದರಲ್ಲೂ, ನಿಮ್ಮ ಆತ್ಮೀಯ ಸ್ನೇಹತರೇ ಬೇಕು ಬೇಕು ಅಂತಾ ದೀಪಾವಳಿ ಹಬ್ಬದ ದಿನ ಸಾಲ ಕೇಳುವ ಗುಣ ಇಟ್ಟುಕೊಂಡಿರುತ್ತಾರೆ. ಆದರೆ ಹೀಗೆ ಕಾಸು ಕೇಳಿದಾಗ ನೀವು ಕೊಡಬೇಕಾ? ಸಾಲ ಕೊಡಬಾರದಾ? ನೀವು ದುಡ್ಡನ್ನು ಸಾಲದ ರೂಪದಲ್ಲಿ ನಿಮ್ಮ ಸ್ನೇಹಿತರಿಗೆ ನೀಡಿದರೆ ನಿಮ್ಮ ಮನೆಯಿಂದ ಲಕ್ಷ್ಮೀ ದೇವಿ ಹೊರಟು ಹೋಗುತ್ತಾಳಾ?

ದುಡ್ಡು ಮಾಡಬೇಕು, ಕೈತುಂಬಾ ಕಾಸು ಇರಬೇಕು ಅನ್ನೋದು ಎಲ್ಲರ ಆಸೆ. ಕೆಲವರು ಈ ರೀತಿ ದುಡ್ಡು ಮಾಡಲು ನ್ಯಾಯಯುತ ಹಾದಿ ಹಿಡಿಯುತ್ತಾರೆ. ಆದರೆ ಇನ್ನೂ ಕೆಲವರಿಗೆ, ದುಡ್ಡು ಸುಲಭವಾಗಿ ಬರಬೇಕು & ಕಷ್ಟಪಡಲು ಅಂತಹ ಜನ ತಯಾರು ಇರುವುದಿಲ್ಲ. ಈ ರೀತಿಯ ಜನರು ಬೇರೆಯವರ ಬಳಿ ದುಡ್ಡು ಪಡೆದು ಮೋಸ ಮಾಡಿ ಬದುಕುವುದಕ್ಕೆ ತುಂಬಾ ಫೇಮಸ್. ಅದೇ ರೀತಿ ದೀಪಾವಳಿ ಹಬ್ಬದ ದಿನ ನಿಮ್ಮ ಸ್ನೇಹಿತರು ಬೇಕು ಬೇಕು ಅಂತಲೇ ಸಾಲ ಕೇಳಿದರೆ ನೀವು ಕೊಡಬೇಕಾ?

Why You Don t Need To Give Loan To Your Friends On The Diwali Vacation

ದೀಪಾವಳಿ ದಿನ ಸಾಲ ಕೇಳುವವರ ಕಾಟ!

ಹೌದು ದೀಪಾವಳಿ ಹಬ್ಬದ ದಿನ ಅದರಲ್ಲೂ ಲಕ್ಷ್ಮೀ ಪೂಜೆಯ ಸಮಯದಲ್ಲಿ ಕೆಲವರು ಬೇಕು ಬೇಕು ಅಂತಾ ಸಾಲ ಕೇಳುತ್ತಾರೆ. ಸ್ನೇಹಿತರು ಸಾಲ ಕೇಳಿದ ಸಮಯದಲ್ಲಿ ದುಡ್ಡು ಕೊಡಬೇಕಾ? ಅಥವಾ ದುಡ್ಡು ಕೊಡಬಾರದಾ? ಅನ್ನೋ ಗೊಂದಲ ಇದ್ದೇ ಇರುತ್ತದೆ. ಹೀಗಿದ್ದಾಗ ನೀವು ನಿಮ್ಮ ಸ್ನೇಹಿತರು ಸಾಲ ಕೇಳಿದ ಸಮಯದಲ್ಲಿ ದುಡ್ಡು ಕೊಡದೇ ಇದ್ದರೆ ಒಳ್ಳೆಯದು. ಹೀಗೆ ಇದ್ದಾಗ ನಿಮ್ಮ ಸ್ನೇಹಿತರು ನಿಜವಾಗಿಯೂ ಕಷ್ಟದಲ್ಲಿ ಇದ್ದಾರಾ? ಅನ್ನೋದನ್ನ ಮೊದಲು ಕನ್ಫರ್ಮ್ ಮಾಡಿಕೊಳ್ಳಿ.

ಅಕಸ್ಮಾತ್ ನಿಮ್ಮ ಸ್ನೇಹಿತ ಕಷ್ಟದಲ್ಲಿ ಇದ್ದರೆ ಸಾಲ ಕೊಡುವ ದಿನವನ್ನು ಮುಂದೂಡಲು ಎಲ್ಲಾ ರೀತಿ ಪ್ರಯತ್ನ ಮಾಡಿ. ಇಲ್ಲವಾದರೆ ಕೊಟ್ಟುಬಿಡಿ. ಅದನ್ನ ಬಿಟ್ಟು ನಾಟಕ ಮಾಡಿ ನಿಮ್ಮ ಬಳಿ ದುಡ್ಡು ಪಡೆದು, ಲಕ್ಷ್ಮೀ ಪೂಜೆಯ ದಿನ ಲಕ್ಷ್ಮೀ ಒಲಿಸಿಕೊಳ್ಳಬೇಕು ಎನ್ನುವ ದುರಾಲೋಚನೆ ಇದ್ದರೆ ಅಂತಹ ವ್ಯಕ್ತಿಗಳಿಂದ ದೂರ ಇರಿ. ಇವರು ಡೇಂಜರ್ ಡೇಂಜರ್!

ಪಟಾಕಿ ಹಚ್ಚುವ ಸಮಯದಲ್ಲಿ ಹುಷಾರು

ದೀಪಾವಳಿ ಹಬ್ಬದ ದಿನ ಪಟಾಕಿ ಹೊಡೆಯುವ ಬಗ್ಗೆ ಸಾಕಷ್ಟು ವಿವಾದಗಳು ಇವೆ. ಒಂದು ಕಡೆ ಪಟಾಕಿ ದೀಪಾವಳಿ ಹಬ್ಬದ ಸಂಸ್ಕೃತಿ ಅಂತಾ ಕೆಲವರು ಹೇಳಿದರೆ, ಇನ್ನೂ ಕೆಲವರು ಪಟಾಕಿ ನಮ್ಮ ಸಂಸ್ಕೃತಿ ಅಲ್ಲ ಅಂತಾರೆ. ಇದೆಲ್ಲಾ ಒಂದು ಕಡೆ ಇರಲಿ ಆದ್ರೆ ನಮ್ ಹುಡುಗರು ಮಾತ್ರ ಭರ್ಜರಿಯಾಗಿ ಡಿಸೈನ್ ಡಿಸೈನ್ ಆಗಿ ಪಟಾಕಿ ಹಚ್ಚುತ್ತಾರೆ.

ಅದ್ರಲ್ಲೂ ಸುಮ್ಮನೆ ಪಟಾಕಿ ಹೊಡೆದು ಬರ್ರೋ ಅಂದ್ರೆ ಪಟಾಕಿ ಹಚ್ಚುವಾಗ ಮಹಾಯುದ್ಧನೇ ಮಾಡ್ತಿದ್ದಾರೆ. ಒಟ್ನಲ್ಲಿ ದೀಪಾವಳಿಯ ಸಂಭ್ರಮ ಇನ್ನೇನು ಕೊನೆಯ ಹಂತಕ್ಕೆ ಬಂದಿದ್ದು, ಪಟಾಕಿ ಹಚ್ಚುವ ಸಮಯದಲ್ಲಿ ಹುಷಾರಾಗಿ ಇರಿ. ಸ್ವಲ್ಪ ಎಡವಟ್ಟು ನಡೆದರು ಕೂಡ ಆ ಸಮಯದಲ್ಲಿ ನಿಮ್ಮ ಜೀವಕ್ಕೆ ಹಾನಿ ಆಗುವುದು ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+