VJ Hemalatha: 'ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು': ವಿಜೆ ಹೇಮಲತಾ ಬಾಳಲ್ಲಿ ಆಗಿದ್ದೇನು?

ಕನ್ನಡ ಜನಪ್ರಿಯ ನಿರೂಪಕಿ ಹೇಮಲತಾ ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಈವರೆಗೂ ಯಾಕೆ ಮದುವೆ ಆಗಿಲ್ಲ ಎನ್ನುವ ಬಗ್ಗೆ ಕೂಡ ಹೇಮಲತಾ ಮಾತನಾಡಿದ್ದು, ಈ ಹಿಂದೆ ನಿಶ್ಚಯವಾಗಿದ್ದ ಮದುವೆ ಯಾಕೆ ರದ್ದಾಯಿತು? ಆ ಸಮಯದಲ್ಲಿ ಆಗಿದ್ದೇನು..? ಎನ್ನುವುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಮಿರರ್‌ ಕನ್ನಡದ ಜೊತೆ ಮದುವೆ ಹಾಗೂ ಸಂಗಾತಿ ಆಯ್ಕೆ ಬಗ್ಗೆ ಮಾತನಾಡಿದ ವಿಜೆ ಹೇಮಲತಾ, 'ತಡವಾಗಿ ಮದುವೆಯಾಗುವುದು ಒಳ್ಳೆಯದು. ಕೆಟ್ಟವನನ್ನು ಮದುವೆಯಾಗಿ ಜೀವನ ಹಾಳು ಮಾಡಿಕೊಳ್ಳುವ ಬದಲು, ಒಂದೇ ಹೀಗೆ ಇದ್ದು ಬಿಡಬಹುದು. ಇಲ್ಲ ಉತ್ತಮ ಸಂಗಾತಿಗಾಗಿ ಕಾಯಬೇಕು' ಎಂದರು.

Why VJ Hemalatha Marriage Cancelled Here Is The Reason

'ನನ್ನ ಜೀವನದಲ್ಲಿ ನನಗೆ ಸಿಕ್ಕವರೆಲ್ಲಾ ಆರ್ಥಿಕವಾಗಿ ನನ್ನ ಸಹಾಯವೇ ಬೇಕು ಎಂದು ಹೇಳಿದವರು ಇದ್ದಾರೆ. ಹಾಗಿದ್ದರೂ ಹಣ ತಾನೇ ಕೊಡೋಣ ಬಿಡು ಅಂದುಕೊಂಡಾಗಲೂ ನನ್ನ ಪರ ನಿಂತವರು ಯಾರೂ ಇರಲಿಲ್ಲ. ಹೀಗಾಗಿ ನನಗೆ ಯಾರ ಮೇಲೂ ಭರವಸೆ ಬಂದಿಲ್ಲ' ಎಂದು ಹೇಳಿರುವ ಹೇಮಲತಾ ಈ ಹಿಂದೆ ಫಿಕ್ಸ್‌ ಆಗಿದ್ದ ಮದುವೆ ಕ್ಯಾನ್ಸಲ್ ಆದ ಬಗ್ಗೆ ಕೂಡ ಮಾತನಾಡಿದ್ದಾರೆ.

'ಇನ್ನು ನನ್ನ ತಂದೆ ಇರುವಾಗಲೇ ನನಗೊಂದು ಹುಡುಗನನ್ನು ನೋಡುತ್ತಾರೆ. ನಮ್ಮ ಫ್ಯಾಮಿಲಿ ಹತ್ತಿರದ ಸಂಬಂಧದಲ್ಲೇ ಒಂದು ಹುಡುಗನನ್ನು ನೋಡಿ ಮದುವೆ ಫಿಕ್ಸ್‌ ಮಾಡುತ್ತಾರೆ. ತಾಂಬೂಲ ಕೂಡ ಬದಲಾಯಿಸಿಕೊಳ್ಳುತ್ತಾರೆ. ನಿಶ್ಚಿತಾರ್ಥದ ದಿನಾಂಕ ಕೂಡ ಫಿಕ್ಸ್‌ ಮಾಡುತ್ತಾರೆ. ಅಷ್ಟರಲ್ಲಿ ನನ್ನ ತಂದೆ ತೀರಿ ಹೋಗುತ್ತಾರೆ'.

Why VJ Hemalatha Marriage Cancelled Here Is The Reason

'ಅಪ್ಪ ತೀರಿ ಹೋದ ಬಳಿಕ ನನಗೆ ಮದುವೆ ಎನ್ನುವ ಆಲೋಚನೆ ಬರುವುದಿಲ್ಲ. ಒಂದು ವರ್ಷ ಡಿಪ್ರೆಶನ್‌ನಲ್ಲಿ ಇರುತ್ತೇನೆ. ಆ ಸಮಯದಲ್ಲಿ ಯಾವ ಹುಡುಗಿಗೆ ಮದುವೆಯಾಗ ಬೇಕು ಅನಿಸುತ್ತದೆ. ಅಪ್ಪ ಇಲ್ಲದ ಮದುವೆ ಬೇಕಾ ಅನಿಸುತ್ತದೆ. ಹೀಗಿರುವಾಗ ಆ ಹುಡುಗನ ಮನೆಯವರು ಬೇಡಾ ಅಂತಾ ಹೇಳಿ ಬಿಟ್ಟು ಹೋಗಿ ಬಿಡುತ್ತಾರೆ. ನನಗೆ ಈಗಲೂ ಅದು ಮನಸ್ಸಿನಲ್ಲಿದೆ. ತಾಂಬೂಲ ಬದಲಾಯಿಸಿಕೊಂಡಿದ್ದರಲ್ಲಾ, ನಿಶ್ಚಿತಾರ್ಥ ಕ್ಯಾನ್ಸಲ್‌ ಆಯ್ತಲ್ಲಾ, ಇಷ್ಟಾದರೂ ಮದುವೆ ಬೇಕಾ..? ಎನ್ನುವ ಪ್ರಶ್ನೆ ಕಾಡುತ್ತದೆ. ನಮ್ಮನ್ನು ಒಪ್ಪಿಕೊಳ್ಳುವವರು ಮುಂದೆ ಬರುತ್ತಾರೆ ಬಿಡು ಎನ್ನುವ ಆಲೋಚನೆಯಲ್ಲಿ ನಾನೀಗ ಇದ್ದೇನೆ' ಎಂದರು.

'ನನ್ನ ತಂದೆಗೆ ಬಹಳ ಆಸೆ ಇತ್ತು ನನ್ನ ಮದುವೆ ನೋಡಬೇಕು ಎಂದು. ನನ್ನ ಅಪ್ಪ ತೀರಿ ಹೋಗುವಾಗ ನನಗೆ 21 ವರ್ಷ, ಆಗಲೇ ಅವರಿಗೆ ಮದುವೆ ಮಾಡಬೇಕು ಇವಳಿಗೆ ಎನ್ನುವುದಿತ್ತು. ಈಗಲೂ ನನ್ನ ಕನಸಿಗೆ ಬಂದು ಹೇಳುತ್ತಾರೆ. ನನಗೋಸ್ಕರ ನೀನು ಎಷ್ಟು ಮಾಡದೇ ನಾನು ನಿನಗೆ ಏನೂ ಮಾಡಿಲ್ಲ, ಮೋಸ ಮಾಡದೇ ಅಂತಾ ಕನಸಲ್ಲಿಯೂ ಬಂದು ಹೇಳುತ್ತಾರೆ' ಎಂದು ವಿಜೆ ಹೇಮಲತಾ ತಮ್ಮ ಬೇಸರ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+