52 ಇಳಿ ವಯಸ್ಸಿನಲ್ಲಿ ಮದುವೆ ಆಗ್ತಾರಂತೆ ರೋಮ್ಯಾಂಟಿಕ್ ನಟಿ?!
ಚಿತ್ರರಂಗದಲ್ಲಿರುವ ಹಲವು ನಟಿಯರು ಯೌವನ ಕಳೆದರೂ ಮದುವೆ ಆಗಿರಲ್ಲ. ಅದಕ್ಕೆ ಸಿನಿಮಾಗಳಲ್ಲಿ ಆಫರ್‌ಗಳು ಮಿಸ್ ಆಗ್ತವೆ ಎನ್ನುವುದು ಸಹ ಕಾರಣ. ಇನ್ನು ಕೆಲವು ನಟಿಯರು ಅವರಿಗೆ ಮ್ಯಾಚ್ ಆಗುವ, ಅರ್ಥವಾಗುವ ಹುಡುಗ ಸಿಗುವವರೆಗೆ ಮದುವೆ ಆಗಲ್ಲ ಅಂತ ಕಾಯ್ತಾರೆ. ಆದರೆ, ಇಲ್ಲೊಬ್ಬ ನಟಿ 50 ವರ್ಷದ ನಂತರ ಅಂದರೆ ಅವರ 52ನೇ ವಯಸ್ಸಿನಲ್ಲಿ ಮದುವೆಯಾಗಲು ಮುಂದಾಗಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಈ ನಟಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಚಿತ್ರರಂಗದಲ್ಲಿ ಮಿಂಚಿದ ನಟಿ ಇದೀಗ ಅವರ 52 ವಯಸ್ಸಿನಲ್ಲಿ ಹಸೆಮಣೆ ಹತ್ತುವುದಕ್ಕೆ ಮುಂದಾಗಿದ್ದಾರೆ. ಇಳಿ ವಯಸ್ಸಿನಲ್ಲಿ ಮದುವೆ ಆಗಲು ಬಾಲಿವುಡ್ ಬೆಡಗಿ ಟಬು ಅವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಟಬು ಬಾಲಿವುಡು, ಕಾಲಿವುಡ್ ಹಾಗೂ ಟಾಲಿವುಡ್ ಮೂವಿಗಳಲ್ಲಿ ಮಿಂಚಿದ್ದಾರೆ. ಈಗಲೂ ಅವರು ಬಾಲಿವುಡ್‌ನ ಬಹುಬೇಡಿಕೆಯ ನಟಿ. ಅವರ ವಿವಾಹದ ಬಗ್ಗೆ ಇದೀಗ ಬಿಸಿಬಿಸಿ ಚರ್ಚೆ ಶುರುವಾಗಿದೆ.

ತೆಲುಗಿನಲ್ಲಿ ಇತ್ತೀಚಿನ ವರ್ಷದಲ್ಲಿ ಬಿಡುಗಡೆಯಾಗಿದ್ದ ಅಲಾ ವೈಕುಂಠ ಪುರ ಸಿನಿಮಾದಲ್ಲಿ ಅಲ್ಲುಅರ್ಜುನ್ ಅವರ ಅಮ್ಮನ ಪಾತ್ರ ಮಾಡಿಯೂ ಟಬು ಸೈ ಎನಿಸಿಕೊಂಡಿದ್ದರು. ನಟಿ, ಪೋಷಕ ನಟಿಯಾಗಿ ಮಿಂಚಿರುವ ಈ ಬೆಡಗಿಗೆ ಇದೀಗ 52 ವರ್ಷ. ಈ ವಯಸ್ಸಿನಲ್ಲಿ ಅವರು ಮದುವೆಯಾಗುವ ಮನಸ್ಸು ಮಾಡಿದ್ದಾರೆ.
ಟಬು ಅವರು ಇದೀಗ ಅವರಿಗಿಂತ ಚಿಕ್ಕ ವಯಸ್ಸಿನವರನ್ನು ಮದುವೆಯಾಗಲು ಮುಂದಾಗಿದ್ದಾರೆ ಎನ್ನುವುದು ಸುದ್ದಿ. ಅಲ್ಲದೇ ಟಬು ಅವರಿಗೆ ಇದು ಎರಡನೇ ಮದುವೆಯಂತೆ! ಬಾಲಿವುಡ್‌ನ ನಟ ಹಾಗೂ ತನಗಿಂತ ಕಡಿಮೆ ವಯಸ್ಸಿನ ಯುವಕನನ್ನು ಟಬು ವರಿಸಲಿದ್ದಾರೆ ಎನ್ನುವುದು ಸುದ್ದಿ. ಆದರೆ, ಟಬು ಅವರ ಮದುವೆ ಬಗ್ಗೆ ಎದ್ದಿರುವ ಈ ವಿಷಯದ ಬಗ್ಗೆ ಟಬು ಎಲ್ಲೂ ಬಹಿರಂಗವಾಗಿ ಮಾತಾಡಿಲ್ಲ. ಈ ವಿಷಯವನ್ನು ವಿವಿಧ ಹಿಂದಿ ಮಾಧ್ಯಮಗಳು ವರದಿ ಮಾಡಿವೆಯಷ್ಟೇ.
50ರ ಮೇಲೂ ಮಿಂಚು: ಚಿತ್ರರಂಗದಲ್ಲಿ ನಟಿಯರಿಗೆ ವಯಸ್ಸು ಆಗುತ್ತಿದ್ದಂತೆಯೇ ಅವಕಾಶಗಳು ಕಡಿಮೆಯಾಗುತ್ತವೆ ಎನ್ನುವ ಸುದ್ದಿ ಇದೆ. ಆದರೆ, ಈ ವಿಷಯವನ್ನು ಟಬು ಅವರು ಸುಳ್ಳು ಮಾಡುತ್ತಲ್ಲೇ ಬಂದಿದ್ದಾರೆ. ಟಬು ಅವರಿಗೆ 50 ವರ್ಷಗಳ ನಂತರವೂ ಅವಕಾಶಗಳು ಕಡಿಮೆಯಾಗಿಲ್ಲ. ರೋಮ್ಯಾಂಟಿಕ್ ಮೂವಿಗಳಿಂದಲೇ ಟಬು ಅವರು ಫೇಮಸ್ ಆಗಿದ್ದಾರೆ. ಈಗಲೂ ಅವರ ಹವಾ ಕಡಿಮೆಯಾಗಿಲ್ಲ. 50ರ ಮೇಲೂ ಯುವತಿಯಂತೆ ಅವರು ದೇಹ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ.
ಹಾಲಿವುಡ್‌ನಲ್ಲೂ ಮಿಂಚಿರುವ ಬೆಡಗಿ
ನಟಿ ಟಬು ಅವರು ಕೇವಲ ಭಾರತೀಯ ಸಿನಿರಂಗ ಮಾತ್ರವಲ್ಲ. ಹಾಲಿವುಡ್‌ನಲ್ಲೂ ಮಿಂಚಿದ್ದಾರೆ. ನಟಿ ಟಬು ಅವರು 2006 ರಲ್ಲಿ 'ದಿ ನೇಮ್‌ಸೇಕ್' ಎನ್ನುವ ಸಿನಿಮಾದ ಮೂಲಕ ಹಾಲಿವುಡ್‌ಗೆ ಮೊದಲ ಬಾರಿ ಪ್ರವೇಶಿಸಿದ್ದರು. ಈ ಚಿತ್ರವನ್ನು ಮೀರಾ ನಾಯರ್ ನಿರ್ದೇಶಿಸಿದ್ದರು. ಇರ್ಫಾನ್ ಖಾನ್ ನಟಿಸಿದ ಈ ಚಿತ್ರಕ್ಕೆ ಸಕಾರಾತ್ಮಕ ವಿಮರ್ಶೆ ಸಹ ಬಂದಿತ್ತು. ಎರಡನೇ ಚಿತ್ರ 'ಲೈಫ್ ಆಫ್ ಪೈ' 2012ರಲ್ಲಿ ತೆರೆಕಂಡಿತ್ತು.












Click it and Unblock the Notifications