ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಮಗಳಿಗೆ ಪರಿ ಅಂತಾ ಹೆಸರಿಟ್ಟಿದ್ಯಾಕೆ..?
ಕನ್ನಡ ಚಿತ್ರರಂಗದ ಲವ್ ಮಾಕ್ಟೇಲ್ ಜೋಡಿ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿಯ ಬಾಳಿಗೆ ಮುದ್ದು ದೇವತೆಯ ಆಗಮನವಾಗಿದೆ. ಸೆಪ್ಟೆಂಬರ್ 5ರಂದು ಮಗಳು ಜನಿಸಿದ ಖುಷಿ ಸುದ್ದಿಯನ್ನು ಹಂಚಿಕೊಂಡಿರುವ ಕೃಷ್ಣ ಹಾಗೂ ಮಿಲನಾ ದಂಪತಿ ಈಗಾಗಲೇ ಮಗುವಿನ ಮುಖ ರಿವೀಲ್ ಮಾಡಿದ್ದಾರೆ. ಜೊತೆಗೆ ಆಕೆಯನ್ನು ಪರಿ ಎಂದು ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ಮಗಳಿಗೆ ಪರಿ ಎನ್ನುವ ಹೆಸರನ್ನು ಯಾಕೆ ಇಟ್ಟರು ಎನ್ನುವುದರ ಬಗ್ಗೆ ನ್ಯೂಸ್ ಫಸ್ಟ್ ವಾಹಿನಿ ಜೊತೆ ಮಿಲನಾ ನಾಗರಾಜ್ ಮಾತನಾಡಿದ್ದಾರೆ.

'ಪರಿ ಎನ್ನುವ ಹೆಸರನ್ನು ತುಂಬಾ ಹುಡುಕಿದ್ದಾಗಲೀ, ಇಟ್ಟಿದ್ದಾಗಲೀ ಅಲ್ಲ. ಪ ಎನ್ನುವ ಅಕ್ಷರ ಬಂದಿತ್ತು ಹಾಗಾಗಿ ಪರಿ ಎಂದು ಕರೆಯುತ್ತಿದ್ದೇವೆ. ಮೊದಲು ಕೃಷ್ಣ ಪರಿ ಅಂತಾ ಕರೆಯೋಣ ಎಂದು ಹೇಳಿದ್ದರು. ಅದು ಅವಳ ಹೆಸರೇ ಇರಬಹುದು ಅಥವಾ ನಿಕ್ ನೇಮ್ ಕೂಡ ಆಗಿರಬಹುದು. ಸದ್ಯಕ್ಕೆ ಪರಿ ಎನ್ನುತ್ತಿದ್ದೇವೆ. ಚಿನ್ನು, ಮುನ್ನು ಎಂದೆಲ್ಲಾ ಕರೆಯುವ ಬದಲು ಪರಿ ಎಂದು ಹೆಸರಿಟ್ಟಿದ್ದೇವೆ' ಎಂದರು.
ನಾನು ಯಾವತ್ತೂ ಏನು ಹೆಸರು ಇಡಬೇಕು ಎನ್ನುವುದರ ಬಗ್ಗೆ ಎಲ್ಲಾ ಹುಡುಕಿದ್ದೇ ಇಲ್ಲ. ಹೆಸರಿನ ಅರ್ಥ ಕೂಡ ಚೆನ್ನಾಗಿತ್ತು. ಹೀಗಾಗಿ ಕೃಷ್ಣ ಪರಿ ಅಂತಾ ಕರೆಯೋಣ ಅಂದರು. ಹೀಗಾಗಿ ನಮ್ಮ ಮಗಳನ್ನು ಸದ್ಯಕ್ಕೆ ಪರಿ ಎನ್ನುವ ಹೆಸರಿನಿಂಡ ಕರೆಯುತ್ತಿದ್ದೇವೆ ಎಂದು ಮಿಲನಾ ನಾಗರಾಜ್ ತಮ್ಮ ಮಗಳ ಹೆಸರಿನ ಬಗ್ಗೆ ವಿವರಿಸಿದ್ದಾರೆ.

ಇನ್ನು ಮಗಳು ಬಂದಿರುವುದಕ್ಕೆ ಕೃಷ್ಣ ಅವರ ಸಂಭ್ರಮದ ಬಗ್ಗೆ ಮಾತನಾಡಿದ ಮಿಲನಾ ನಾಗರಾಜ್, ಖಂಡಿತವಾಗಿಯೂ ಮನೆಯಲ್ಲಿ ಸಂಭ್ರಮ ಇದೆ. ಪ್ರತಿಯೊಬ್ಬರಿಗೂ ಕೂಡ ತಂದೆ-ತಾಯಿಯಾಗುವುದು ವಿಭಿನ್ನ ಅನುಭವ. ಖುಷಿ ಕೊಡುವಂತದ್ದು. ಇಷ್ಟು ದಿನ ಕೃಷ್ಣ ಅವರಿಗೆ ಶೂಟಿಂಗ್ ನಡೆಯುತ್ತಿತ್ತು. ಈಗ ಅವರಿಗೆ ಎರಡು ದಿನ ಶೂಟಿಂಗ್ ಇಲ್ಲ. ನನಗೆ ಪ್ರಮೋಷನ್ ಇದೆ. ನಾನು ಪ್ರಮೋಷನ್‌ಗೆ ಬರಲೇಬೇಕು. ಹೀಗಾಗಿ ಈಗ ಕೃಷ್ಣ ಮಗಳಿಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ ಎಂದರು.
ನಮಗೆ ಸಿನಿಮಾದವರಿಗೆ ಹೇಗೆ ಎಂದರೆ ನಾವು ನಾಳೆ ಬರುತ್ತೇವೆ ಎಂದರೆ ಸಿನಿಮಾ ನಮಗಾಗಿ ಕಾಯುವುದಿಲ್ಲ. ಸಿನಿಮಾ ಯಾರಿಗಾಗಿ ಕೂಡ ಕಾಯಲ್ಲ. ಹೀಗಾಗಿ ಸಿನಿಮಾ ಹಾಗೂ ಮನೆ ಮಗಳು ಎರಡನ್ನೂ ಬ್ಯಾಲನ್ಸ್ ಮಾಡಿಕೊಂಡು ಹೋಗುವಂತಹ ಪಾರ್ಟ್ನರ್ ಸಿಕ್ಕಿರುವುದು ನನ್ನ ಅದಷ್ಟ. ಇಬ್ಬರು ಸಿನಿಮಾದಲ್ಲೇ ಇರುವುದರಿಂದ ವ್ಯತ್ಯಾಸ ಏನೂ ಇಲ್ಲ. ಮಗಳು ಸಿನಿಮಾ ಎರಡೂ ಸಂತೋಷ ನಮ್ಮ ಜೀವನದಲ್ಲಿ ಇದೆ ಎಂದು ಮಿಲನಾ ನಾಗರಾಜ್ ಹೇಳಿದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications