Get Updates
Get notified of breaking news, exclusive insights, and must-see stories!

ಸು ಫ್ರಮ್ ಸೋ ನಿರ್ದೇಶಕ ಯಾರು, ಪಾರ್ಟ್‌ - 2 ಬರಲಿದೆಯೇ ? Su From So

Su From So: ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಸು ಫ್ರಮ್ ಸೋ ಇದೀಗ ಮಲಯಾಳಂ ಭಾಷೆಯಲ್ಲೂ ಚರಿತ್ರೆ ಸೃಷ್ಟಿ ಮಾಡುತ್ತಿದೆ. ಇದೀಗ ಈ ಸಿನಿಮಾ ಭಾಷೆ ಹಾಗೂ ಗಡಿಗಳನ್ನು ದಾಟಿ ಮುಂದೆ ಸಾಗುತ್ತಿದೆ. ಈ ಸಂದರ್ಭದಲ್ಲಿ ಸು ಫ್ರಮ್ ಸೋ ನಿರ್ದೇಶಕರ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಸಿನಿಮಾವನ್ನು ನಿರ್ದೇಶನ ಮಾಡಿರುವವರು ಜೆಪಿ ತುಮ್ಮಿನಾಡ್. ಕರಾವಳಿ ಮೂಲದವರಾದ ಇವರು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಈಗಾಗಲೇ ಚಿರಪರಿಚಿತರು. ಯಾರಿವರು ಇವರ ಹಿನ್ನೆಲೆ ಏನು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಕನ್ನಡ ಸಿನಿಮಾರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂಡಿ ಬಂದ ಹಾಸ್ಯಮಯ ಸಿನಿಮಾ ಸು ಫ್ರಮ್ ಸೋ. ಈ ಸಿನಿಮಾ ಕನ್ನಡಿಗರಿಗೆ ಆಪ್ತವೆನಿಸಿದೆ. ಕನ್ನಡ ಸಿನಿ ಪ್ರೇಮಿಗಳು ಈ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎರಡು ವಾರದ ನಂತರವೂ ಈ ಸಿನಿಮಾ ಹಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಅಲ್ಲದೇ ಮಲಯಾಳಿಗಳು ಹಾಗೂ ತಮಿಳಿಗರೂ ಸಹ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ತಮಿಳಿನಲ್ಲೂ ಬಿಡುಗಡೆ ಮಾಡುವಂತೆ ಬೇಡಿಕೆ ಹೆಚ್ಚಾಗಿದೆ. ಮುಂದುವರಿದು ಹೊಸ ಮಾದರಿಯ ಕಥೆ ಎಲ್ಲರಿಗೂ ಆಪ್ತವೆನಿಸಿದೆ. ಈ ಸಿನಿಮಾವನ್ನು ಜೆಪಿ ತುಮ್ಮಿನಾಡ್ ಅವರು ನಿರ್ದೇಶಿಸಿದ್ದು, ರಾಜ್ ಬಿ ಶೆಟ್ಟಿ ನಿರ್ಮಾಪಕರಾಗಿದ್ದಾರೆ.

Who is the director of Su from So will there be a Part 2

ಜೆಪಿ ತುಮ್ಮಿನಾಡ್ ಅವರು ಈಗಾಗಲೇ ಕನ್ನಡಿಗರಿಗೆ ಚಿರಪರಿಚಿತ ಎಂದೇ ಹೇಳಬಹುದು. ಕರಾವಳಿ ಮೂಲದವರಾದ ಇರುವ ಬರೋಬ್ಬರಿ 14 ವರ್ಷ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ರಂಗಭೂಮಿಯ ಅಪ್ಪಟ ಪ್ರತಿಭೆ ಅಂತಲೇ ಹೇಳಬಹುದು. ಅದರ ಚಾಯೆ ಸು ಫ್ರಮ್ ಸೋದಲ್ಲೂ ಇದೆ. ರಂಗಭೂಮಿಯಲ್ಲಿ ನಟನೆಯೊಂದಿಗೆ ನಾಟಕ ರಚನೆ ಹಾಗೂ ನಿರ್ದೇಶನವನ್ನೂ ಜೆಪಿ ತುಮ್ಮಿನಾಡ್ ಅವರು ಮೈಗೂಡಿಸಿಕೊಂಡಿದ್ದಾರೆ. ಅದರ ಫಲವೇ ಈಗ ಬಂದಿರುವ ಸು ಫ್ರಮ್ ಸೋ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದೆ. ಕಥೆ ಗಟ್ಟಿಯಾಗಿದ್ದರೆ ಸಾಕು ಸಿನಿಮಾ ಗೆಲ್ಲುತ್ತದೆ ಎನ್ನುವುದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ.

ಜೆಪಿ ತುಮ್ಮಿನಾಡ್ ಅವರು ಕನ್ನಡದ ಹಲವು ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅವರ ತಂಡದಲ್ಲಿದ್ದ ತುಮ್ಮಿನಾಡ್ ಅವರು ಈಗ ಮುನ್ನೆಲೆಗೆ ಬಂದಿದ್ದಾರೆ. ಇದಕ್ಕೂ ಮುಂಚೆ ಅವರು ಗರುಡ ಗಮನ ವೃಷಭ ವಾಹನ, ಸಪ್ತ ಸಾಗರದಾಚೆ ಎಲ್ಲೊ ಹಾಗೂ ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾಗಳಲ್ಲಿ ತೆರೆಯ ಹಿಂದೆ ಮಿಂಚಿದ್ದರು. ಅಲ್ಲದೇ ಸಪ್ತ ಸಾಗರದಾಚೆ ಎಲ್ಲೊ: ಸೈಡ್​ ಬಿ ಸಿನಿಮಾನಲ್ಲಿ ನಾಯಕಿ ರುಕ್ಮಿಣಿ ಅವರ ಪತಿಯ ಪಾತ್ರದಲ್ಲಿ ತುಮ್ಮಿನಾಡ್ ಅವರು ನಟಿಸಿದ್ದರು. ಪಾತ್ರ ಸಣ್ಣದಾದರೂ ಅವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

ಕರಾವಳಿ ಕಥೆ ಹಾಗೂ ರಂಗಭೂಮಿ ಹಿನ್ನೆಲೆ ಸೇರಿದಂತೆ ಹಲವು ಕಾರಣಗಳಿಗೆ ಈ ಸಿನಿಮಾ ಎಲ್ಲರ ಮನಸ್ಸು ಗೆದ್ದಿದೆ. ಬಡಿದಾಟಗಳಿಲ್ಲದ ತಿಳಿಹಾಸ್ಯ ಇದೀಗ ಎಲ್ಲರ ಮನಸ್ಸನ್ನೂ ಗೆದ್ದಿದೆ.

ಪಾರ್ಟ್ - 2 ನಿರೀಕ್ಷೆ: ಇನ್ನು ಕನ್ನಡ ಸಿನಿಮಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದು ಸಿನಿಮಾದ ಪಾರ್ಟ್ - 2 ಬರುವುದು ಸಹಜ. ಅದೇ ಮಾದರಿಯಲ್ಲಿ ಸು ಫ್ರಮ್ ಸೋ ಸಿನಿಮಾದ ಪಾರ್ಟ್‌ - 2 ಬರಲಿದೆಯೇ ಎಂದು ಸಿನಿಮಾ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಆದರೆ ಸಿನಿಮಾ ತಂಡ ಈ ಬಗ್ಗೆ ಇನ್ನಷ್ಟೇ ಅಪ್ಡೇಟ್ಸ್‌ ಕೊಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+