Shobha Shetty: ಬಿಗ್‌ ಬಾಸ್‌ ಶೋಭಾ ಶೆಟ್ಟಿ ಬಾಯ್‌ಫ್ರೆಂಡ್ ಯಾರು? ಶಿಶಿರ್ ಹೇಳಿದ್ದೇನು?

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್‌ ಎಂಟ್ರಿ ಕೊಟ್ಟಿರುವ ನಟಿ ಶೋಭಾ ಶೆಟ್ಟಿ ಆರಂಭದಲ್ಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ವೇದಿಕೆ ಮೇಲೆ ಸುದೀಪ್‌ಗೆ ದೃಷ್ಟಿ ತೆಗೆದು ಸಲುಗೆ ಪಡೆದುಕೊಳ್ಳಲು ಹೋದರು ಬಳಿಕ ಸುದೀಪ್ ಕ್ಲಾಸ್ ತೆಗೆದುಕೊಂಡ ಬಳಿಕ ಸುಮ್ಮನಾಗಿದ್ದರು. ಬಳಿಕ ಬಿಗ್ ಬಾಸ್ ಮನೆ ಪ್ರವೇಶಿಸುತ್ತಿದ್ದಂತೆ ಹಲವು ಸ್ಪರ್ಧಿಗಳ ಮುಖವಾಡ ಕಳಚುತ್ತೇನೆ ಎಂದು ಹೇಳಿ ಸುದ್ದಿಯಾಗಿದ್ದರು. ಈಗ ಶೋಭಾ ಬಾಯ್‌ಫ್ರೆಂಡ್‌ ಬಗ್ಗೆ ಬಿಗ್‌ ಬಾಸ್‌ನಲ್ಲಿ ಮಾತು ಕೇಳಿಬಂದಿದ್ದು ಶಿಶಿರ್ ಶೋಭಾ ಶೆಟ್ಟಿಗೆ ಬಾಯ್‌ಫ್ರೆಂಡ್ ಇರುವ ವಿಚಾರ ಬಹಿರಂಗಪಡಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಜೋರು ಧ್ವನಿ ಮೂಲಕ ಎಲ್ಲ ಸ್ಪರ್ಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಶಿಶಿರ್, ಐಶ್ವರ್ಯಾ ಮತ್ತು ತ್ರಿವಿಕ್ರಂ ಭವ್ಯಾ ಇಷ್ಟು ದಿನ ಜೊತೆಯಲ್ಲಿ ಇದ್ದರು. ಈಗ ತ್ರಿವಿಕ್ರಂ ಮತ್ತು ಶಿಶಿರ್ ಶೋಭಾ ಶೆಟ್ಟಿ ಜೊತೆ ಸ್ನೇಹ ಮಾಡುತ್ತಾರಾ ಎನ್ನುವ ಪ್ರಶ್ನೆ ಬಂದಾಗ ಉತ್ತರ ಕೊಟ್ಟ ಶಿಶಿರ್ ಶೋಭಾಗೆ ಬಾಯ್‌ಫ್ರೆಂಡ್ ಇರುವ ವಿಚಾರವನ್ನು ಬಿಗ್‌ ಬಾಸ್‌ ಮನೆಯಲ್ಲಿ ಬಹಿರಂಗಪಡಿಸಿದರು.

who is shobha shetty boyfriend shishir reveals in bigg boss

ಶೋಭಾ ಶೆಟ್ಟಿ ಮತ್ತು ಶಿಶಿರ್ ಇಬ್ಬರ ನಡುವೆ ಹಳೆ ಪರಿಚಯವಿದೆ. ಇಬ್ಬರೂ ಕೂಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಶಿಶಿರ್ ಮತ್ತು ಶೋಭಾ ಶೆಟ್ಟಿ ಪರಸ್ಪರ ತಬ್ಬಿಕೊಂಡು, ವಿಶ್ ಮಾಡಿದ್ದರು. ಇದನ್ನೇ ಕಾರಣವಾಗಿಟ್ಟುಕೊಂಡ ಉಗ್ರಂ ಮಂಜು ಶಿಶಿರ್ ಕಾಲೆಳೆಯಲು ಮುಂದಾದರು.

ಶೋಭಾ ಮನೆಗೆ ಬರುತ್ತಿದ್ದಂತೆ ಶಿಶಿರ್ ಮುಖದಲ್ಲಿ ಕಳೆ ಬಂದಿದೆ. ಇಷ್ಟು ದಿನ ಇಲ್ಲದ ಧ್ವನಿ ಈಗ ಬಂದಿದೆ, ರವಿಚಂದ್ರನ್ ರೀತಿ ಬಟ್ಟೆ ಹಾಕಿದ್ದಾರೆ ಎಂದು ಹೇಳಿದರು. ಇದಕ್ಕೆ ಉತ್ತರ ನೀಡಿದ ಶಿಶಿರ್, ಶೋಭಾಗೆ ಹೊರಗೆ ಬಾಯ್‌ಫ್ರೆಂಡ್ ಇದ್ದಾನೆ, ಮದುವೆ ಆಗುತ್ತಿದ್ದಾರೆ ಎಂದು ಹೇಳಿದರು.

ಮೂಲತ ಕರ್ನಾಟಕದವರಾದ ಶೋಭಾ ತೆಲುಗು ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದಾರೆ. 'ಕಾರ್ತಿಕ ದೀಪಂ' ಧಾರವಾಹಿ ಮೂಲಕ ಹೆಚ್ಚು ಜನಪ್ರಿಯವಾಗಿದ್ದರು. ಇದೇ ಧಾರವಾಹಿಯಲ್ಲಿ ಆದಿತ್ಯ ಪಾತ್ರ ಮಾಡಿದ್ದ ಯಶ್ವಂತ್ ರೆಡ್ಡಿಯನ್ನು ಶೋಭಾ ಪ್ರೀತಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಶೋಭಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಶೋಭಾ ಶೆಟ್ಟಿ ಬಿಗ್‌ ಬಾಸ್‌ ತೆಲುಗು 7ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ಬಿಗ್‌ಬಾಸ್ ಸಂದರ್ಭದಲ್ಲಿ ಶೋಭಾ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಇಬ್ಬರು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಇಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+