ರಾಜ್‌ಕುಮಾರ್ ಮೊಮ್ಮಗ ಯುವ ಬಾಳಲ್ಲಿ ಬಿರುಗಾಳಿ ಏಳಲು ಆ ಪ್ರಖ್ಯಾತ ನಟಿ ಕಾರಣ?
ಕನ್ನಡಿಗರ ಪಾಲಿನ ವರನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್ ಪಡೆಯಲು ಯುವ ಮತ್ತು ಅವರ ಪತ್ನಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾದ್ರೆ ಯುವ ರಾಜ್‌ಕುಮಾರ್ ಬಾಳಲ್ಲಿ ಬಿರುಗಾಳಿ ಏಳಲು ಯಾರು ಕಾರಣ ಗೊತ್ತಾ? ಅವರು ಕೂಡ ಕನ್ನಡ ಸಿನಿಮಾ ರಂಗದ ಪ್ರಖ್ಯಾತ ನಟಿ ಎಂಬ ಮಾತು, ಇದೀಗ ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡುತ್ತಿದೆ. ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಡಾ. ರಾಜ್‌ಕುಮಾರ್ ಅವರ ಕುಟುಂಬ ಅಂದ್ರೆ ಮಂಡ್ಯ ಟು ಇಂಡಿಯಾ ಹವಾ ಮಾತ್ರವಲ್ಲದೆ, ಭಾರಿ ಗೌರವ ಕೂಡ ಇದೆ. ಆದರೆ ಇದೀಗ ಯುವ ರಾಜ್‌ಕುಮಾರ್ ಬಾಳಲ್ಲಿ ಬಿರುಗಾಳಿ ಎದ್ದಿದ್ದು ವಿಚ್ಛೇದನ ಅಂದ್ರೆ ಡಿವೋರ್ಸ್ ಪಡೆಯಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುವ ಸಮಯದಲ್ಲೇ, ಯುವ ಬಾಳಿನಲ್ಲಿ ಪ್ರಖ್ಯಾತ ನಟಿ ಎಂಟ್ರಿ ಕೂಡ ಆಗಿದ್ದಾರೆ. ಇದೇ ಕಾರಣಕ್ಕೆ ಯುವ ರಾಜ್‌ಕುಮಾರ್ ಇದೀಗ ಡಿವೋರ್ಸ್ ಪಡೆಯುತ್ತಿದ್ದಾರೆಂಬ ಆರೋಪದ ಮಾತುಗಳು ಹಾಗೂ ಗಾಳಿ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಯಾರು ಆ ನಟಿ? ಮುಂದೆ ಓದಿ.

ಯುವ ಬಾಳಲ್ಲಿ ಪ್ರಖ್ಯಾತ ನಟಿ?
ಅಂದಹಾಗೆ ಯುವ ರಾಜ್‌ಕುಮಾರ್ ಅವರು ಇತ್ತೀಚೆಗೆ ಸಿನಿಮಾ ಇಂಡಸ್ಟ್ರಿಗೆ ಭರ್ಜರಿ ಎಂಟ್ರಿ ಕೊಟ್ಟು, ಸಖತ್ ಸದ್ದು ಮಾಡಿದ್ದವರು. ಅದ್ರಲ್ಲೂ ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ 'ಯುವ' ಇತ್ತೀಚೆಗೆ ಬಿಡುಗಡೆ ಆಗಿತ್ತು. ಹೀಗಿದ್ದಾಗಲೇ, ಅವರ ಬಾಳಲ್ಲಿ ಇದೀಗ ಬಿರುಗಾಳಿ ಎದ್ದಿದೆ. ಅದ್ರಲ್ಲೂ ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ಯುವ ಅವರ ಬಾಳಿಗೆ ಎಂಟ್ರಿ ಕೊಟ್ಟ ನಂತರ ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಅವರ ಮಧ್ಯೆ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಇದ್ಯಾವುದೂ ಇನ್ನೂ ಅಧಿಕೃತ ಆಗಿಲ್ಲ. ಹೀಗಾಗಿ ಈ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ.
ಅಪ್ಪು ಪುನೀತ್ ಅವರ ಜೊತೆ ಹೋಲಿಕೆ!
ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಈಗ ದೇವರಾಗಿದ್ದಾರೆ, ಅಪ್ಪು ಅಂದ್ರೆ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಇಂಡಿಯಾ ಎದ್ದು ನಿಂತು ಸಲ್ಯೂಟ್ ಹೊಡೆಯುತ್ತದೆ. ಹೀಗಿದ್ದಾಗ ಇದೇ ಯುವ ರಾಜ್‌ಕುಮಾರ್ ಅವರನ್ನು ಅಪ್ಪು ಅಂದ್ರೆ ನಮ್ಮ ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ಹೋಲಿಕೆ ಮಾಡಲಾಗಿತ್ತು.
ಯಾಕಂದ್ರೆ ಯುವ ರಾಜ್‌ಕುಮಾರ್ ನಟನೆ & ಡಾನ್ಸ್ ಸೇರಿದಂತೆ, ಆಕ್ಷನ್ ಥೇಟ್ ಪುನೀತ್ ರಾಜ್‌ಕುಮಾರ್ ಅವರಿಗೆ ಹೋಲಿಕೆ ಆಗುತ್ತಿತ್ತು. ಹೀಗಾಗಿ ಯುವ ಅವರ ಹೆಸರು, ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆದರೆ ಇದೀಗ ಅವರ ವಿಚ್ಛೇದನ ಆಗ್ತಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಈ ಬಗ್ಗೆ ಸ್ಪಷ್ಟನೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಈ ವಿಚಾರವಾಗಿ ಮಾತ್ರ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗಾಗಿ ಈ ಕುರಿತು ಶೀಘ್ರದಲ್ಲೇ ಸ್ಪಷ್ಟನೆ ಕೂಡ ಸಿಗಬಹುದು ಎನ್ನಲಾಗಿದೆ. ಗಾಳಿ ಸುದ್ದಿಗೆ ಯಾರೂ ಕಿವಿಗೊಡಬೇಡಿ ಎಂಬುದು ಅಭಿಮಾನಿಗಳ ಮನವಿ. ಹೀಗಾಗಿ ಅಧಿಕೃತ ಮಾಹಿತಿ ಸಿಗುವ ತನಕ ಕಾಯಬೇಕಿದೆ.
ಡಾ. ರಾಜ್ ಕುಟುಂಬದಲ್ಲಿ ಮೌನ
ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ವಿಚ್ಛೇದನ ವಿಚಾರ ಈಗ ಎಲ್ಲೆಲ್ಲೂ ಸಂಚಲನ ಎಬ್ಬಿಸಿದೆ. ಅದರಲ್ಲೂ ಡಾ. ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಈ ಕುರಿತು ಮೌನ ಆವರಿಸಿದೆ. ಅಭಿಮಾನಿಗಳು ಕೂಡ ಈ ಸುದ್ದಿ ಕೇಳಿ ನೋವು ಪಟ್ಟಿದ್ದಾರೆ. ಹೀಗಾಗಿ ಈ ಘಟನೆಗಳಿಗೆ ಆದಷ್ಟು ಬೇಗ ಬ್ರೇಕ್ ಬೀಳಬೇಕು, ನಾವು ಕೇಳಿದ ಸುದ್ದಿ ಸುಳ್ಳಾಗಲಿ ಅಂತಾ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ದೊಡ್ಮನೆ ಹಿರಿಯರು, ಈ ವಿಚಾರವನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಸಮಸ್ಯೆ ಸರಿ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈಗಲಾದರೂ ಈ ಸಮಸ್ಯೆ ಸರಿ ಆಗುತ್ತಾ? ಅಥವಾ ಮತ್ತಷ್ಟು ಜಟಿಲವಾಗಿ ಮುಂದುವರಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications