ಮತ್ತೆ ಮದುವೆ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು..? ಆಗೋವುದು ಯಾವಾಗ..?
ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಜೋಡಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ವಿಚ್ಛೇದನ ಪಡೆದು ಹೊಸ ಬದುಕು ಆರಂಭಿಸಿದ್ದಾರೆ. ಆದರೆ ಮಕ್ಕಳ ಈ ನಿರ್ಧಾರವನ್ನು ಪೋಷಕರು ಹೇಗೆ ಒಪ್ಪಿಕೊಂಡರು. ತಮ್ಮ ನಿರ್ಧಾರದಿಂದ ಪೋಷಕರ ಮೇಲೆ ಯಾವ ಪರಿಣಾಮ ಬೀರಿತು ಎನ್ನುವುದರ ಬಗ್ಗೆ ಕನ್ನಡ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ.
ಕಿರಿಕ್ ಕೀರ್ತಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ಸಾಮಾನ್ಯವಾಗಿ ತಂದೆ-ತಾಯಿಗಳಿಗೆ ಅವರ ಮಕ್ಕಳು ಚೆನ್ನಾಗಿರಬೇಕು ಎನ್ನುವುದು ತಲೆಯಲ್ಲಿ ಇರುತ್ತದೆ. ಮದುವೆ ಆಗಿರಲಿ, ಮದುವೆ ಆಗಿ ದೂರ ಆಗೋದು ಆಗಿರಲಿ. ಒಟ್ಟಿನಲ್ಲಿ ಅವರ ಮಕ್ಕಳು ಖುಷಿಯಾಗಿರಲಿ ಎನ್ನುವುದು ಪೋಷಕರ ಆಶಯ.

ನಮ್ಮ ತಂದೆ-ತಾಯಿಗೆ ಆಗಿರಬಹುದು ಅಥವಾ ನಿವಿ ಅವರ ತಂದೆ-ತಾಯಿಗೆ ಆಗಿರಬಹುದು. ಇಬ್ಬರ ಮಧ್ಯ ಹೊಂದಾಣಿಕೆ ಇಲ್ಲ. ಜಗಳ ಆಗುತ್ತದೆ. ಮನಸ್ತಾಪಗಳು ಹೆಚ್ಚುತ್ತದೆ ಅಂದಾಗ ಅವರೇ ಬೇಡ ಬಿಟ್ಟು ಬಿಡಿ. ದೂರ ಇದ್ದರೆ ಖುಷಿಯಾಗಿ ಇರುತ್ತೇವೆ ಅನಿಸಿದರೆ ದೂರವೇ ಇದ್ದು ಬಿಡಿ ಅಂತಾ ಅವರು ಕೂಡ ಮೆಂಟಲಿ ಫಿಕ್ಸ್ ಆಗಿ ಬಿಟ್ಟಿದ್ದರು. ಆದರೂ ಅವರಿಗೆ ಕಷ್ಟ ಆಗಿರುತ್ತದೆ ನಮ್ಮ ಹತ್ರ ತೋರಿಸಿಕೊಂಡಿರಲಿಲ್ಲ ಎಂದರು.
ಮತ್ತೆ ಮದುವೆ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, ಸ್ವಲ್ಪ ದಿನ ಸುಮ್ಮನಿರು ನಾನೇ ಒಂದು ಹುಡುಗಿ ಹುಡುಕಿ ಮದುವೆ ಮಾಡುತ್ತೇವೆ ಎನ್ನುವುದು ಮಾಮೂಲಿ ಡೈಲಾಗ್. ಮತ್ತೆ ಮದುವೆ ಸದ್ಯಕ್ಕೆ ಪ್ಲಾನ್ ಇಲ್ಲ. ನಾನು ಅಷ್ಟೊಂದು ಸ್ಪೀಡ್ ಇಲ್ಲ. ಇದೆಲ್ಲಾ ಒಂದು ಕಾರು ತೆಗೆದುಕೊಂಡ ಹಾಗೆ ಅಲ್ಲಾ ಅಲ್ವಾ. ಮೊದಲು ನಾನು ಆ ಜೋನ್‌ಯಿಂದ ಹೊರಗಡೆ ಬಂದು ಸಾಧನೆ ಕಡೆ ಫೋಕಸ್ ಮಾಡಬೇಕು. ಯಾಕೆಂದರೆ ನಾನೀಗ ಕಂಬ್ಯಾಕ್ ಮಾಡಬೇಕಿದೆ ಎನ್ನುವ ದೃಢ ನಿರ್ಧಾರಕ್ಕೆ ಚಂದನ್ ಶೆಟ್ಟಿ ಬಂದಿದ್ದಾರೆ.

ಇನ್ನು ಹೊಂದಾಣಿಕೆ ಇಲ್ಲದ ಜೀವನದ ಬಗ್ಗೆ ಮಾತನಾಡಿದ ಅವರು, ಸೆಟ್ ಆಗುತ್ತಿದೆಯಾ ಖುಷಿ ಖುಷಿಯಾಗಿರಿ. ಸೆಟ್ ಆಗುತ್ತಿಲ್ವಾ ಬಿಟ್ಟು ನೆಮ್ಮದಿಯಾಗಿರಿ. ಡಿವೋರ್ಸ್ ಎನ್ನುವುದು ಒಂದು ಅಥವಾ ಎರಡು ತಿಂಗಳಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಸಂಬಂಧದಲ್ಲಿ ಸ್ವಲ್ಪ ಸಮಯ ಕೊಡಬೇಕಾಗುತ್ತದೆ. ಆದರೆ ಒಂದು ತಿಂಗಳಲ್ಲಿ ದೂರಾಗುವವರು ಸಹ ಇರುತ್ತಾರೆ. ಯಾಕೆಂದರೆ ಅವರ ಸಮಸ್ಯೆ ಏನು ಇರುತ್ತದೆಯೋ ಅದರ ಬಗ್ಗೆ ನಾವು ಮಾತನಾಡುವುದು ತಪ್ಪಾಗುತ್ತದೆ ಎಂದರು.
ಆದರೆ ಸಂಬಂಧದಲ್ಲಿ ಸಮಯಕೊಟ್ಟು ನೋಡಬೇಕು ಸುಧಾರಿಸುತ್ತದಾ ಅಂತಾ. ಒಂದು ಟೈಮ್‌ನಲ್ಲಿ ಆಗೋದೆ ಇಲ್ಲ..ಮನಸ್ಸಿಗೆ ನೆಮ್ಮದಿನೇ ಇಲ್ಲ.. ಅಂತಾ ಅಂದಾಗ ದೂರಾಗುವುದು ತುಂಬಾ ಒಳ್ಳೆಯದು. ಅವರು-ಇವರು ಕೇಳುತ್ತಾರೆ..ಹೇಳುತ್ತಾರೆ ಎನ್ನುವುದನೆಲ್ಲಾ ಬಿಟ್ಟು ಬಿಡಬೇಕು. ಯಾಕೆಂದರೆ ನಮ್ಮ ಮನಃ ಶಾಂತಿ ನಮಗೆ ಮುಖ್ಯ. ಮುಂಚೆ ಮನುಷ್ಯ ನೂರು ವರ್ಷ ಬದುಕುತ್ತಿದ್ದ ಈಗ ಐವತ್ತು ವರ್ಷ ಬದುಕಿದರೆ ಹೆಚ್ಚು. ಇರುವ ಐವತ್ತು ವರ್ಷದಲ್ಲಿ ಕಿತ್ತಾಡಿಕೊಂಡು..ಜಗಳ ಮಾಡಿಕೊಂಡು ಬದುಕಲು ಆಗುತ್ತದೆಯಾ..? ಎಂದು ಚಂದನ್ ಶೆಟ್ಟಿ ಪ್ರಶ್ನಿಸಿದ್ದಾರೆ.











Click it and Unblock the Notifications