25,00,000 ರೂಪಾಯಿ ಹಣ ಇಟ್ಟುಕೊಂಡು ವಿಷ್ಣುವರ್ಧನ್ ಅವರ ಮನೆ ಮುಂದೆ ನಾಯಿಗಳ ರೀತಿ... Vishnuvardhan
ಕನ್ನಡ ಸಿನಿಮಾ ರಂಗದಲ್ಲಿ ಮೊದಲಿಗೆ ಬರುವುದೇ ಡಾ. ರಾಜ್‌ಕುಮಾರ್ ಅವರ ಹೆಸರು, ಆ ನಂತರವೇ ಡಾ. ವಿಷ್ಣುವರ್ಧನ್ ಮತ್ತು ಡಾ. ಅಂಬರೀಶ್ ಅವರ ಹೆಸರು ಸಹೋದರರ ರೀತಿ ರಾರಾಜಿಸುತ್ತದೆ. ಹೀಗೆ ಕನ್ನಡಿಗರ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಮೂವರು ತಾರೆಯರು ಮಿಂಚಿ ಮರೆಯಾಗಿದ್ದಾರೆ. ಅದರಲ್ಲೂ, ಸಾಹಸ ಸಿಂಹ ಅಂತಾ ದೊಡ್ಡ ಹೆಸರು ಮಾಡಿದ್ದ ಡಾ. ವಿಷ್ಣುವರ್ಧನ್ ಅವರಿಗೆ ಕೋಟಿ, ಕೋಟಿ ಅಭಿಮಾನಿ ಬಳಗ ಇತ್ತು. ಹೀಗಿದ್ದಾಗಲೇ, 25,00,000 ರೂಪಾಯಿ ಹಣ ಇಟ್ಟುಕೊಂಡು ವಿಷ್ಣುವರ್ಧನ್ ಅವರ ಮನೆ ಮುಂದೆ ನಾಯಿಗಳ ರೀತಿ...
ಆ ದಿನ ಕನ್ನಡಿಗರು ಕಣ್ಣೀರು ಹಾಕಿದ್ದರು, ಅದು ಡಿಸೆಂಬರ್ 30, 2009... ಅಂದು ಬೆಳ್ಳಂಬೆಳಗ್ಗೆ ಬಂದ ಸುದ್ದಿ ಕನ್ನಡ ಚಿತ್ರರಂಗ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿತ್ತು. ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ನಟ & ಸಾಹಸ ಸಿಂಹ ಎಂಬ ಬಿರುದು ಪಡೆದಿದ್ದ ಡಾ.ವಿಷ್ಣುವರ್ಧನ್ ಅವರು ಕಲಾಭಿಮಾನಿಗಳನ್ನ ಬಿಟ್ಟು ಹೋಗಿದ್ದರು. ಹೀಗೆ ಡಾ. ವಿಷ್ಣುವರ್ಧನ್ ಅವರು ಅಭಿಮಾನಿ ದೇವರುಗಳನ್ನು ಅಗಲಿ ಇಂದಿಗೆ 15 ವರ್ಷ ಕಳೆದು ಹೋಗಿದ್ದು, ಹೀಗಿದ್ದರೂ ಅಭಿಮಾನಿಗಳ ಮನಸ್ಸಲ್ಲಿ ಮಾತ್ರ ಡಾ. ವಿಷ್ಣುವರ್ಧನ್ ಅವರು ಅಜರಾಮರ. ಇಂತಹ ಸಮಯದಲ್ಲೇ ಡಾ. ವಿಷ್ಣುವರ್ಧನ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಈಗ ರೋಮಾಂಚನ ಸೃಷ್ಟಿಸುವ ಸುದ್ದಿಯೊಂದು ಸಿಕ್ಕಿದೆ!

25,00,000 ರೂಪಾಯಿ ಹಣ ಇಟ್ಟುಕೊಂಡು...
'ನಾಗರಹಾವು' ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸಾಹಸ ಸಿಂಹ ವಿಷ್ಣುವರ್ಧನ್ ಅವರು, ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡುತ್ತಾ ಕನ್ನಡಿಗರ ಪ್ರೀತಿಯ & ನೆಚ್ಚಿನ ನಟನಾಗಿದ್ದರು. ಸಾಲು ಸಾಲು ಹಿಟ್ ಸಿನಿಮಾ ನೀಡಿ ಕೋಟ್ಯಂತರ ಅಭಿಮಾನಿಗಳ ಹೃದಯವನ್ನ ಗೆದ್ದರು. ಅದ್ರಲ್ಲೂ ಒಂದು ಕಾಲದಲ್ಲಿ ಒಂದೇ ವರ್ಷಕ್ಕೆ ಹಲವು ಸಿನಿಮಾ ರಿಲೀಸ್ ಮಾಡಿ ತುಂಬಾ ಬ್ಯುಸಿ ನಟ ಎನಿಸಿಕೊಂಡಿದ್ದರು ಡಾ. ವಿಷ್ಣು ಅವರು. ಆದರೆ ಸಾಹಸ ಸಿಂಹ ಎಂಬ ಬಿರುದು ಪಡೆದಿದ್ದ ಡಾ. ವಿಷ್ಣುವರ್ಧನ್ ಅವರ ಎದುರು ನಿರ್ಮಾಪಕರು ಹೇಗೆ ಇರುತ್ತಿದ್ದರು ಗೊತ್ತೆ?
ಡಾ. ವಿಷ್ಣುವರ್ಧನ್ ಎದುರು ನಿರ್ಮಾಪಕರು...
ಅದು ಕನ್ನಡ ಸಿನಿಮಾ ಇಂಡಸ್ಟ್ರಿ ಅತ್ಯುನ್ನತ ಸ್ಥಾನದಲ್ಲಿ ಇದ್ದ ಕಾಲಘಟ್ಟ, ಕನ್ನಡ ಸಿನಿಮಾ ಮಾಡಿದರೆ ಕೋಟಿ ಕೋಟಿ ರೂಪಾಯಿ ಲಾಭ ಗ್ಯಾರಂಟಿ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇದ್ದವು. ಹೀಗಿದ್ದಾಗ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಭರ್ಜರಿ ಡಿಮ್ಯಾಂಡ್ ಇತ್ತು. ಹೇಗಾದರೂ ಮಾಡಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಡೇಟ್ಸ್ ಪಡೆಯಬೇಕು ಅಂತಾ ಕೋಟಿ ಕೋಟಿ ದುಡ್ಡು ಹಾಕೋದಕ್ಕೆ ರೆಡಿ ಇದ್ದ ನಿರ್ಮಾಪಕರು ಕಾಯುತ್ತಿದ್ದರು...
ಅದರಲ್ಲೂ 25,00,000 ರೂಪಾಯಿ ಹಣ ಇಟ್ಟುಕೊಂಡು ವಿಷ್ಣುವರ್ಧನ್ ಅವರ ಮನೆ ಮುಂದೆ ನಾಯಿಗಳ ರೀತಿ ಕಾಯುತ್ತಿದ್ದರು ಅಂತಾ ಕನ್ನಡ ಸಿನಿಮಾ ರಂಗದ ಮಾಜಿ ವಿಲನ್, ಖಳನಾಯಕ ವೇಣು ಅವರು ಈಗ ಹೇಳಿಕೊಂಡಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಬಳಿ ಸಿನಿಮಾ ಮಾತುಕತೆಗೆ ಬರಲು ಶೂಟಿಂಗ್ ಸೆಟ್ & ಮನೆ ಬಳಿ 25,00,000 ರೂಪಾಯಿ ಅಡ್ವಾನ್ಸ್ ಹಣ ಇಟ್ಟುಕೊಂಡು ಪ್ರೊಡ್ಯೂಸರ್ಸ್ ಕಾಯುತ್ತಿದ್ದರು. ಆಗ ನಮ್ಮ ಜೊತೆ ಇದ್ದವರು, ನೋಡು ಹೇಗೆ ದುಡ್ಡು ಹಿಡ್ಕೊಂಡು ನಾಯಿಗಳ ರೀತಿ ಕಾಯ್ತಾ ಇದ್ದಾರೆ ಅಂತಾ ಚರ್ಚೆ ಮಾಡುತ್ತಿದ್ದೆವು ಅನ್ನೋ ಸತ್ಯವನ್ನ ವೇಣು ಅವರು ಇದೀಗ ಬಿಚ್ಚಿಟ್ಟಿದ್ದಾರೆ. ಖಾಸಗಿ ಸಂದರ್ಶನ ಒಂದರಲ್ಲಿ ವೇಣು ಅವರು ಈ ಸತ್ಯ ಹೇಳಿದ್ದಾರೆ.












Click it and Unblock the Notifications