Ramya Video: ನಟಿ ರಮ್ಯಾಗೆ ರಿಂಗ್ ಕೊಡಿಸಿ ಟ್ವಿಸ್ಟ್ ಕೊಟ್ಟ ವಿನಯ್ ರಾಜ್ ಕುಮಾರ್! ಆ ಹುಡುಗಿ ಯಾರು?
Ramya & Vinay Rajkumar: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Actress Ramya) ಮತ್ತು ನಟ ವಿನಯ್ ರಾಜ್ ಕುಮಾರ್ (Actor Vinay Rajkumar) ಮಧ್ಯ ಪ್ರೀತಿ ಅರಳಿದೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಈ ಸುದ್ದಿಯನ್ನು ರಮ್ಯ ತಳ್ಳಿ ಹಾಕಿದ್ದರು. ಇದೀಗ ವಿನಯ್ ಅವರು ನಟಿ ರಮ್ಯಾಗೆ ರಿಂಗ್ ಕೊಡಿಸಿದ್ದಾರೆ. ಇಬ್ಬರು ಸೇರಿ ಜ್ಯುವೆಲ್ಲರಿ ಶಾಪ್‌ಗೆ ತೆರಳಿ ರಿಂಗ್ ಖರೀದಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ.
ರಮ್ಯಾ ಮತ್ತು ನಟ ಪುನೀತ್ ರಾಜ್ ಕುಮಾರ್ ಅವರಿಬ್ಬರು ಒಳ್ಳೆ ಪೇರ್. ಆಗಾಗ ಚಿತ್ರೀಕರಣ ವೇಳೆ ನಟ ವಿನಯ್ ರಾಜ್ ಕುಮಾರ್ ಅವರು ಸೆಟ್ ಗೆ ಹೋಗುತ್ತಿದ್ದರು. ಆಗಿನಿಂದಲೇ ವಿನಯ್ ರಮ್ಯಾ ಅವರಿಗೆ ಚಿರಪರಿಚಿತ. ಇತ್ತೀಚೆಗೆ ವಿನಯ್ ಜೊತೆಗೆ ರಮ್ಯಾ ಅವರು ಅಮೆರಿಕದಲ್ಲಿ ಕಾರ್ಯಕ್ರಮವೊಂದಕ್ಕೆ ಹೋದಾಗ ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡಿದ್ದರು. ಇವು ವೈರಲ್ ಆಗುತ್ತಿದ್ದಂತೆ ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎಂದು ಹಬ್ಬಿಸಲಾಯಿತು. ಆದರೆ ಇದಕ್ಕೆ ರಮ್ಯಾ ಅವರು, ವಿ'ನಯ್ ನನ್ನ ತಮ್ಮನ ತರ' ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಹೊಸ ವಿಡಿಯೋ ಮೂಲಕ ಮತ್ತೊಮ್ಮೆ ತಮ್ಮ ಮಧ್ಯೆ ಏನು ಇಲ್ಲ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ವಿನಯ್ ರಾಜ್ ಕುಮಾರ್ ಮೆಸೆಜ್ ಮಾಡಿ ರಿಂಗ್ ಕೊಡಿಸುವುದಾಗಿ ತಾವೆ ರಮ್ಯಾ ಅವರಿಗೆ ಮೆಸೆಜ್ ಮಾಡುತ್ತಾರೆ. ಅಲ್ಲಿ ರಮ್ಯಾ ಹೆಸರು "ಬೆಸ್ಟಿ' ಎಂದು ಸೇವ್ ಮಾಡಿಕೊಳ್ಳಲಾಗಿರುತ್ತದೆ. ಓಕೆ ಎಂದ ರಮ್ಯಾ ಮತ್ತು ವಿನಯ್ ಇಬ್ಬರು ಜ್ಯುವೆಲ್ಲರಿ ಶಾಪ್ ತೆರಳಿ ಡೈಮಂಡ್ ಉಂಗುರವನ್ನು ಫೈನಲ್ ಮಾಡುತ್ತಾರೆ. ಈ ವೇಳೆ ರಮ್ಯಾ ಅವರು, 'ರಿಂಗ್ ಯಾಕೆ ಕೊಡಬೇಕು ಅನ್ನಿಸಿತು?' ಎಂದು ವಿನಯ್ ಅವರಿಗೆ ಕೇಳುತ್ತಾರೆ. ಅದಕ್ಕೆ ವಿನಯ್ 'ಅವಳನ್ನು ಮೀಟ್ ಮಾಡಿ ಮೂರು ವರ್ಷ ಆಯ್ತು, ಅದಕ್ಕೆ ಏನಾದರೂ ಗಿಫ್ಟ್ ಕೊಡೋಣ ಅಂತನಿಸಿ, ನಿನ್ನ ಕರೆದುಕೊಂಡು ಬಂದೆ' ಎನ್ನುತ್ತಾರೆ.
ಎಲ್ಲರು ಹಾಗೆ ಅಂದುಕೊಳ್ತಾರೆ..!
ಇಬ್ಬರು ಸೇರಿ ಉಂಗುರ ಫೈನಲ್ ಮಾಡುತ್ತಿದ್ದಂತೆ ಜ್ಯುವೆಲ್ಲರಿ ವ್ಯಕ್ತಿ ಇಬ್ಬರಿಗೂ ಕಂಗ್ರಾಜುಲೇಷನ್ಸ್ ತಿಳಿಸುತ್ತಾರೆ. ಆಗ ರಮ್ಯಾ 'ಇವನಿಗೆ ಓಕೆ, ನನಗೆ ಯಾಕೆ' ಶುಭ ಕೋರಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆ ವ್ಯಕ್ತಿ ತಪ್ಪಾಯಿತಾ ಮೇಡಮ್? ಎಂದು ಕೇಳುತ್ತಾರೆ. ಇಲ್ಲಾ ಇಲ್ಲಾ ಎಲ್ಲರೂ ಇದೇ ರೀತಿ ಅಂದಕೊಳ್ತಾರೆ. ನಾವ್ ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾರೆ. ಈ ಮೂಲಕ ತಮ್ಮಿಬ್ಬರ ಮಧ್ಯ ಉತ್ತಮ ಸ್ನೇಹ ಸಂಬಂಧವಿದೆ ಹೊರತು ಬೇರೆನು ಇಲ್ಲ ಎಂಬುದನ್ನು ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಮತ್ತೊಮ್ಮೆ ಸಾರಿದ್ದಾರೆ. ವಿಡಿಯೋ ಕೊನೆಗೆ ಟ್ವಿಸ್ಟ್ ಕೊಟ್ಟಿದ್ದಾರೆ.
ವಾಸ್ತವದಲ್ಲಿ ಇದು ಜ್ಯುವೆಲ್ಲರಿ ಜಾಹೀರಾತು ವಿಡಿಯೋ ಆಗಿದೆ. ಅದನ್ನು ವಿಶೇಷ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಜಾಹೀರಾತು ಇದೆ. ತಮ್ಮಿದ್ದಬ್ಬ ಮಧ್ಯ ಯಾವ ಪ್ರೀತಿ, ಡೇಟಿಂಗ್ ನಂತಹ ಸಂಬಂಧ ಇಲ್ಲವೇ ಇಲ್ಲ ಎಂಬುದುನ್ನು ರಮ್ಯಾ ಅವರು ಸ್ಪಷ್ಟಪಡಿಸಿದ್ದಾರೆ.
ಹಾಗಾದ್ರೆ ವಿನಯ್ ಹುಡುಗಿ ಯಾರು?
ಹಾಗಾದ್ರೆ ಮೂರು ವರ್ಷದಿಂದ ಅವಳನ್ನು ನೋಡಿಲ್ಲ ಎಂದ ವಿನಯ್ ರಾಜ್ ಕುಮಾರ್ ಅವರ ಹುಡುಗಿ ಯಾರು? ಯಾರಿಗೆ ಆ ರಿಂಗ್ ತೆಗೆದುಕೊಂಡಿದ್ದ ಎಂದು ಅವರ ಅಭಿಮಾನಿಗಳು ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ. ಕೆಲವರು ಇದು ಆಡ್ ಗಾಗಿ ಮಾಡಿದ್ದ ಎಂದಿದ್ದಾರೆ. ಮತ್ತೆ ಕೆಲವರು ವಿನಯ್ ಗೆ ಬೇರೆ ಹುಡುಗಿ ಇರಬೇಕ ಅಂತಲೂ ಚರ್ಚಿಸುತ್ತಿದ್ದಾರೆ. ಸದ್ಯ ಈ ವಿಡಯೋ ಸಾಕಷ್ಟು ವೀಕ್ಷಣೆ, ಲೈಕ್ಸ್ ಪಡೆದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.












Click it and Unblock the Notifications