Varthur Santhosh: ಮದುವೆ, ಮುರಿದುಬಿದ್ದ ಸಂಸಾರ; ಹೆಂಡ್ತಿ, ಮಾವನಿಗೆ ಚಳಿ ಬಿಡಿಸಿದ ವರ್ತೂರು ಸಂತೋಷ್: ಮತ್ತೆ ಏನಾಯ್ತು?
ಬೆಂಗಳೂರು, ಜೂನ್ 10: ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ದೊಡ್ಮನೆಗೆ ಕಾಲಿಟ್ಟಾಗಿನಿಂದಲೂ ಭಾರೀ ವಿವಾದಗಳಿಂದಲೇ ಸದ್ದು ಮಾಡಿದ್ರು. ಅಲ್ಲದೇ ವರ್ತೂರು ಸಂತೋಷ್ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿ ಆಗಿತ್ತು. ಇತ್ತೀಚಿಗಷ್ಟೇ ವರ್ತೂರು ಸಂತೋಷ್ ಅವರು ಎರಡನೇ ಮದುವೆ ಆಗ್ತೀನಿ ಅಂದಿದ್ದು, ಇದೀಗ ಲೈಫ್‌ನಲ್ಲಿ ನಡೆದಿದ್ದು ಮದುವೆನೇ ಅಲ್ಲ ಡೊಂಬರಾಟ ಎಂದು ಹೆಂಡತಿ ಹಾಗೂ ಹೆಣ್ಣು ಕೊಟ್ಟ ಮಾವನಿಗೆ ತೀವ್ರ ವಾಗ್ದಾಳಿ ನಡೆಸುವ ಮೂಲಕ ಚಳಿ ಬಿಡಿಸಿದ್ದಾರೆ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ವರ್ತೂರು ಸಂತೋಷ್‌ಗೆ ಹೆಸರು, ಹಣ ಎಲ್ಲವೂ ಇದೆ. ಆದರೆ, ಅವರ ಕೌಟುಂಬಿಕ ಜೀವನ ಮಾತ್ರ ಯಶಸ್ವಿಯಾಗಿಲ್ಲ. ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಅವರ ವೈವಾಹಿಕ ಜೀವನದ ಬಗ್ಗೆ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಇದೀಗ ಯಶಸ್ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪತ್ನಿ ಹಾಗೂ ಅವರ ಮನೆಯವರಿಗೆ ಟಾರ್ಚರ್ ಅನುಭವಿಸಿದ ಕುರಿತುಇ ವರ್ತೂರು ಸಂತೋಷ್ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.

ಯಶಸ್ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪತ್ನಿ ಹಾಗೂ ಅವರ ಮನೆಯವರಿಗೆ ವಿರುದ್ಧ ಕಿಡಿಕಾರಿದ್ದು, ಇನ್ಮುಂದೆ ತನ್ನ ತಂಟೆಗೆ ಬಂದರೆ, ಎಲ್ಲಾ ವಿಷಯವನ್ನು ಹೊರ ಹಾಕುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಮದುವೆ ಆಗುತ್ತೇನೆ ಅಂತ ಸುಮಾರು ವಿಡಿಯೋಗಳನ್ನು ಬಿಟ್ಟಿದ್ದೆ ನನ್ನ ಲೈಫ್‌ನಿಂದ ಹೆಂಡತಿ ಹೊರ ಹೋಗಿ ಐದು ವರ್ಷ ಆಯ್ತು. ತಿರುಬೋಕಿ ಬಾಳು ಮಾಡಬಾರದು. ಮನೆಯಲ್ಲಿ ಇದ್ದ ಹೆಂಡ್ತಿಯ ವಸ್ತುಗಳೆಲ್ಲವೂ ಆಚೆ ಹೋಗುತ್ತವೆ ನನ್ನ ಲೈಫ್‌ನಲ್ಲಿ ನಡೆದಿದ್ದು ಮದುವೆನೇ ಅಲ್ಲ ಡೊಂಬರಾಟ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಇದ್ದಕ್ಕಿದ್ದ ಹಾಗೆ ಮತ್ತೆ ಪತ್ನಿ ಹಾಗೂ ಮಾವನ ಮೇಲೆ ರೊಚ್ಚಿಗೆದ್ದಿದ್ದಾರೆ.
ನನ್ನ ಜೀವನದಲ್ಲಿ ಕೆಲವನ್ನು ಒದ್ದು ಹೊರಗೆ ಹಾಕುತ್ತಿದ್ದೇನೆ. ಕೆಲವೊಂದನ್ನು ಇಟ್ಟುಕೊಂಡಿದ್ದೆ. ನನಗೆ ಅದು ಅವಶ್ಯಕತೆನೇ ಇರಲಿಲ್ಲ. ಆದರೂ ಮಾನವೀಯತೆ, ಧರ್ಮ ಅನ್ನೋದು ಇದೆಯಲ್ಲ. ನಾನು ಅಂತಲ್ಲ. ನನ್ನಂಥ ಯುವಕರು ಅದೆಷ್ಟು ಮಂದಿ ಎಷ್ಟು ನೋವು ತಿನ್ನುತ್ತಿದ್ದಾರೋ ಗೊತ್ತಿಲ್ಲ. ನೂರಕ್ಕೆ 90 ಪರ್ಸೆಂಟ್ ಯುವಕರೇ ಸಾಯೋದು. ಯಾಕಂದ್ರೆ, ಜವಾಬ್ದಾರಿ ಇರುತ್ತೆ. ಮಾನ ಮರ್ಯಾದೆಗೆ ಅಂಜುತ್ತಾರೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ನಾನು ಮದುವೆ ಆಗುತ್ತೇನೆ ಅಂತ ಸುಮಾರು ವಿಡಿಯೋಗಳನ್ನು ಬಿಟ್ಟೆ. ನ್ಯಾಯ, ಧರ್ಮ, ಸತ್ಯ ಟೈಮ್‌ಗೆ ಮರೆ ಮಾಚುತ್ತವೆ. ಸುಳ್ಳು ಕುಣಿಯುತ್ತಿರುತ್ತೆ. ನಾನು ಅತ್ತು ಮಾತಾಡಿರುವುದರಲ್ಲಿ ನೋವಿರುತ್ತೆ. ಅಲ್ಲಿ ನಾಟಕ ಬರುವುದೇ ಇಲ್ಲ ಎಂದಿದ್ದಾರೆ. ಪತ್ನಿಗಾಗಿ ತಂದು ಕೊಟ್ಟಿದ್ದ ವಸ್ತುಗಳನ್ನು ತೋರಿಸಿದ್ದಾರೆ. ಜೊತೆಗೆ ಮನೆಯಲ್ಲಿ ಅವರ ವಸ್ತುಗಳು ಏನೇನಿವೆ ಎನ್ನುವುದನ್ನೂ ತೋರಿಸಿದ್ದಾರೆ. ಅದೆಲ್ಲವೂ ಮನೆಯಿಂದ ಹೊರಗೆ ಹಾಕುತ್ತೇನೆ ಎಂದು ವರ್ತೂರು ಸಂತೋಷ್ ಅವರು ಗರಂ ಆಗಿದ್ದಾರೆ.
ನಾನು ಬಿಗ್‌ಬಾಸ್‌ಗೆ ಹೋಗಿ ಬಂದು ಎರಡು ವರ್ಷ ಆಯ್ತು. ನನ್ನ ಲೈಫ್‌ನಲ್ಲಿ ಈ ಡ್ಯಾಶ್ (ಹೆಂಡ್ತಿ) ಹೋಗಿ ಐದು ವರ್ಷದ ಮೇಲಾಗುತ್ತಿದೆ. ಕೆಲವರು ಬಂದು ಹೇಗೆ ಪ್ರಶ್ನೆ ಮಾಡುತ್ತಾರೆ. ಆ ಟೈಮ್‌ನಲ್ಲಿ ಉತ್ತರ ಕೊಡುವುದಕ್ಕೆ ಆಗಲ್ಲ. ಅವರ ಮನಸ್ಥಿತಿಯ ಹೇಗಿರುತ್ತೆ ಅಂತ ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ. ಬಿಲ್ಡಪ್ ಕೊಡುವುದಕ್ಕೆ ಆ ಮನೆಯಲ್ಲಿ ಚಿನ್ನ ಬಿಟ್ಟು ಬಂದಿದ್ದೇನೆ ಎನ್ನುವ ಮಾತು ಬಂತು. ಅದ್ಯಾರು ಹೇಳಿದ್ದಾರೋ ಅವರನ್ನೇ ಕಳಿಸಿ. ಇದ್ದರೆ ಎತ್ತಿಕೊಂಡು ಹೋಗಬಹುದು. ಇಂತಹ ತಿರುಬೋಕಿ ಬಾಳು ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications