ಸೀತಾರಾಮ ಧಾರವಾಹಿಯ ನಟಿ ವೈಷ್ಣವಿ ಗೌಡ ಮದುವೆ ಫಿಕ್ಸ್: ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಇವರೇ..

ಬಿಗ್‌ಬಾಸ್‌ ಮನೆಯಲ್ಲಿ ರುಚಿಯಾಗಿ ಅಡುಗೆ ಮಾಡಿ ಬಡಿಸಿದ ತುಂಟ ಹುಡುಗಿ, ಕನ್ನಡಿಗರ ಕ್ರಶ್, ಸೀತಾರಾಮ ಧಾರವಾಹಿಯ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ ವೈಷ್ಣವಿ ಗೌಡ.

ಹೌದು ವೈಷ್ಣವಿ ಗೌಡ ನಿಶ್ಚಿತಾರ್ಥದ ಬಗ್ಗೆ ಸುಳಿವೇ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಾಗಲೇ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆನ್ನುವ ಸುದ್ದಿ ಗೊತ್ತಾಗಿದೆ. ಇದರಿಂದ ಅಭಿಮಾನಿಗಳು ಸಂತೋಷಗೊಂಡಿದ್ದು ವೈಷ್ಣವಿ ಅವರನ್ನು ವರಿಸಲಿರುವ ಹುಡುಗ ಯಾರು ಅನ್ನೋ ಕುತೂಹಲ ವ್ಯಕ್ತಪಡಿಸಿದ್ದಾರೆ.

vaishnavi gowda is engaged with businessman photos viral

ವೈಷ್ಣವಿ ಗೌಡ ಮದುವೆಯ ಬಗ್ಗೆ ಸಾಕಷ್ಟು ಕನಸ್ಸು ಇಟ್ಟುಕೊಂಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಈ ಬಗ್ಗೆ ಅವರು ಹಲವಾರು ಬಾರಿ ಪ್ರಸ್ತಾಪ ಕೂಡ ಮಾಡಿದ್ದರು. ಅವರಿಗೆ ಮದುವೆ ಬಗ್ಗೆ ಕೇಳಿದಾಗಲೆಲ್ಲಾ ಮನಸ್ಸಿನಲ್ಲಿರುವ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಹುಡುಗ ಯಾರು ಅನ್ನೋದನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸದ್ದಿಲ್ಲದೆ ವೈಷ್ಣವಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಶಾಕ್ ಜೊತೆಗೆ ಖುಷಿ ಕೂಡ ಉಂಟು ಮಾಡಿದೆ.

ಅಂದಹಾಗೆ ವೈಷ್ಣವಿ ಗೌಡ ಅವರನ್ನು ಮದುವೆ ಆಗುತ್ತಿರುವ ಹುಡುಗನ ಹೆಸರು ಅಕಾಯ್. ಇವರು ತಮ್ಮದೇ ಆದ ಉದ್ಯಮ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ವೈಷ್ಣವಿ ಬಣ್ಣದ ಲೋಕದವರನ್ನು ಬಿಟ್ಟು ಹೊರಗಿನವರನ್ನು ಮದುವೆಯಾಗಿತ್ತಿದ್ದಾರೆ ಅನ್ನೋದು ಇಲ್ಲಿ ಸ್ಪಷ್ಟ.

vaishnavi gowda is engaged with businessman photos viral

ಇದೀಗ ಅದ್ದೂರಿಯಾಗಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದು ಹಲವು ಸಿನಿ ತಾರೆಯರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಗೌಡ ಅಂದುಕೊಂಡ ರೀತಿಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ವೈಷ್ಣವಿ ಗೌಡ ಬಿಗ್‌ಬಾಸ್‌ ಮನೆಯಲ್ಲಿ ಇರುವಷ್ಟು ದಿನ ಯಾರ ಪ್ರಪೋಸ್‌ಗೂ ಓಕೆ ಮಾಡಿರಲಿಲ್ಲ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬಳಿಕ ಅವರಿಗೆ ಹಲವಾರು ಪ್ರಪೋಸಲ್ ಬಂದಿದ್ದವು. ಆದರೂ ವೈಷ್ಣವಿ ಇದ್ಯಾವುದಕ್ಕೂ ತಲೆ ಕೆಡೆಸಿಕೊಂಡಿರಲಿಲ್ಲ. ಇದೀಗ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಉದ್ಯಮಿ ಅಕಾಯ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Take a Poll

ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬಳಿಕ ಪ್ರಸ್ತುತ ಸೀತಾರಾಮ ಧಾರವಾಹಿಯಲ್ಲಿ ಸೀತಾ ಪಾತ್ರ ಮಾಡುತ್ತಿರುವ ವೈಷ್ಣವಿ ಸಣ್ಣ ಪರದೆಯ ಮೇಲೆ ದೊಡ್ಡದಾಗಿ ಮಿಂಚುತ್ತಿದ್ದಾರೆ. ಒಟ್ಟಿನಲ್ಲಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ತಮ್ಮ ಅಭಿಮಾನಿಗಳಿಗೆ ಬಿಗ್‌ ಶಾಕ್ ಕೊಟ್ಟಿದ್ದು ಮಾತ್ರ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+