ಶುರುವಾಗೋಕು ಮುನ್ನವೇ ತ್ರಿವಿಕ್ರಮ್‌ ಧಾರಾವಾಹಿ ವಿರುದ್ಧ ಅಭಿಯಾನ: ಕಾರಣವೇನು?

ಬಿಗ್‌ ಬಾಸ್‌ ಕನ್ನಡ ಸೀಜನ್‌ 11ರ ರನ್ನರ್‌ ಅಪ್‌ ತ್ರಿವಿಕ್ರಮ್‌ ನಟನೆಯ ಹೊಸ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಶುರುವಾಗಲಿದೆ. ಡಾಕ್ಟರ್‌ ಆಗಬೇಕು ಎಂದುಕೊಂಡಿರುವ ಪುಟ್ಟ ಹುಡುಗಿಯ ಮದುವೆಯ ಕಥಾಹಂದರ ಹೊಂದಿರುವ ಮುದ್ದು ಸೊಸೆ ಎಂಬ ಹೊಸ ಧಾರಾವಾಹಿ ಸದ್ಯದಲ್ಲೇ ಆರಂಭವಾಗಲಿದ್ದು, ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್ ಆಗಿದೆ.

ಬಿಗ್‌ ಬಾಸ್‌ ತ್ರಿವಿಕ್ರಮ್‌ ಮುದ್ದು ಸೊಸೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೇ ಮುದ್ದು ಸೊಸೆಯ ನಾಯಕ ಕೂಡ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋದಲ್ಲಿ ತ್ರಿವಿಕ್ರಮ್‌ ಮಧು ಮಗನಾಗಿ ಕಾಣಿಸಿಕೊಂಡಿದ್ದಾರೆ. ಮುದ್ದು ಸೊಸೆ ಧಾರಾವಾಹಿಯ ಪ್ರೋಮೋ ಅಷ್ಟೇ ರಿಲೀಸ್ ಆಗಿದೆ. ಆದರೆ ಎಂದಿನಿಂದ ಪ್ರಸಾರವಾಗುತ್ತದೆ ಎನ್ನುವ ಸಮಯವನ್ನು ಇನ್ನು ತಿಳಿಸಿಲ್ಲ. ಆದರೆ ಅದಕ್ಕೂ ಮುನ್ನವೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಧಾರಾವಾಹಿ ಸಂಬಂಧ ಅಭಿಯಾನ ಒಂದು ಶುರುವಾಗಿದೆ.

Trivikram New Serial Muddu Sose Gathers Attention Ahead of Premiere

ಪೋಸ್ಟರ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳು ತಮ್ಮ ಮನದಾಸೆಯನ್ನು ಹೇಳುವ ಮೂಲಕ ಅಭಿಯಾನವನ್ನು ಆರಂಭಿಸಿದ್ದಾರೆ. ತ್ರಿವಿಕ್ರಮ್‌ಗೆ ಅಭಿಮಾನಿಗಳು ಬಿಗ್ ಬಾಸ್ ನಿಂದ ಬಂದ ಮೇಲೆ ಜಾಸ್ತಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ತ್ರಿವಿಕ್ರಮ್‌ ಹೆಸರಿನಲ್ಲಿ ಎರಡು ಫ್ಯಾನ್ ಪೇಜ್‌ಗಳು ಓಪನ್ ಆಗಿದ್ದವು. ಒಂದು ತ್ರಿಮೋಕ್ಷಿ ಇನ್ನೊಂದು ತ್ರಿವ್ಯ. ತ್ರಿವಿಕ್ರಮ್‌ ಜೊತೆಗೆ ಮೋಕ್ಷಿತಾ ಪೈ ಅಥವಾ ಭವ್ಯಾ ಅವರನ್ನು ಜೋಡಿಯಾಗಿ ನೋಡುವುದಕ್ಕೆ ಫ್ಯಾನ್ಸ್ ಇಷ್ಟಪಡುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮುದ್ದು ಸೊಸೆ ಧಾರಾವಾಹಿಯಲ್ಲಿ ಮೊದಲು ಹೀರೋಯಿನ್ ಬದಲಾಯಿಸಿ. ಮೋಕ್ಷಿತಾ ಪೈ ಅಥವಾ ಭವ್ಯಾ ಅವರನ್ನು ಹಾಕಿ ಎಂದು ಒತ್ತಾಯಿಸುತ್ತಿದ್ದಾರೆ.

ಆದರೆ ಮುದ್ದು ಸೊಸೆಯ ಧಾರಾವಾಹಿ ಕಥೆ ಬೇರೆನೇ ಇದೆ. ಇನ್ನು ಓದುತ್ತಿರುವ ಅದರಲ್ಲೂ ಡಾಕ್ಟರ್‌ ಆಗಬೇಕೆಂದುಕೊಂಡಿರುವ ಮುಗ್ಧ ಹುಡುಗಿಗೆ ಬೇಗ ಮದುವೆ ಮಾಡಿದರೆ ಅವಳ ಕನಸುಗಳು ಏನಾಗುತ್ತವೆ..? ಅವಳ ಮನಸ್ಥಿತಿ ಏನಾಗುತ್ತದೆ..? ಎನ್ನುವುದು ಮುದ್ದು ಸೊಸೆಯ ಧಾರಾವಾಹಿಯ ಕಥಾ ವಸ್ತುವಾಗಿದೆ. ಹೀಗಾಗಿ ಈ ಪಾತ್ರಕ್ಕೆ ಸಖತ್‌ ಕ್ಯೂಟ್‌ ಆಗಿರುವ ಪ್ರತಿಮಾ ಅವರನ್ನು ತ್ರಿವಿಕ್ರಮ್‌ಗೆ ಜೋಡಿಯಾಗಿ ಆಯ್ಕೆ ಮಾಡಲಾಗಿದೆ. ಇವರಿಬ್ಬರ ಜೋಡಿ ಕೂಡ ನೋಡಲು ಕ್ಯೂಟ್‌ ಆಗಿದೆ. ಪ್ರೋಮೋ ಮೂಲಕವೇ ಕುತೂಹಲ ಹೆಚ್ಚಿಸಿರುವ ಮುದ್ದು ಸೊಸೆ ಧಾರಾವಾಹಿಗಾಗಿ ಕಿರುತೆರೆ ಪ್ರೇಕ್ಷಕರು ಕಾತುರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+