Yash Toxic: ಶೂಟಿಂಗ್ ಆರಂಭಕ್ಕೂ ಮುನ್ನ ಧರ್ಮಸ್ಥಳ, ಉಜಿರೆ ಭೇಟಿ: ಪಂಚೆ ಬಿಳಿ ಉಡುಗೆಯಲ್ಲಿ ಯಶ್ ಮಸ್ತ್ ಲುಕ್
ಬೆಂಗಳೂರು, ಆಗಸ್ಟ್ 06: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್'ಗೆ ಮೇಲೆ ಕನ್ನಡಿಗರು ಮಾತ್ರವಲ್ಲದೇ, ದೇಶಾದ್ಯಂತ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶೂಟಿಂಗ್ ಆರಂಭಕ್ಕು ಮೊದಲೇ ನಟ ಯಶ್ ಮಂಗಳವಾರ ಸಾಂಪ್ರದಾಯಿಕ ಉಡುಗೆಯಲ್ಲಿ ಧರ್ಮಸ್ಥಳ, ಉಜಿರೆಯ ಪ್ರಮುಖ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ದೇಶಾದ್ಯಂತ ಮನೆ ಮಾತಾಗಿರುವ ನಟ ಯಶ್ ಅವರು 'ಟಾಕ್ಸಿಕ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಆರಂಭಿಸುವ ಮೊದಲು ಅವರು, ಅಂದುಕೊಂಡ ಇಷ್ಟಾರ್ಥವೆಲ್ಲ ನೆರವೇರಿಸುವ ಉಜಿರೆಯ ಸೂರ್ಯ ದೇವಸ್ಥಾನದಲ್ಲಿ ಭೇಟಿ ನೀಡಿದ್ದಾರೆ. ಇಲ್ಲಿ ಅವರು ಸಿನಿಮಾಗಾಗಿ ವಿಶೇಷ ಪೂಜೆ ನೆರವೇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೂರ್ಯ ದೇವರ ಮೊರೆ ಹೋದ 'ಟಾಕ್ಸಿಕ್' ಯಶ್
ಸಿನಿಮಾದ ಪ್ರತಿ ಹಂತದಲ್ಲೂ ವಿಭಿನ್ನವಾಗಿ ಆಲೋಚಿಸುವ ನಟ ಯಶ್ ಅವರು ಉಜಿರೆಯ ಸೂರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷವಾಗಿದೆ. ಏಕೆಂದರೆ ಭಕ್ತರು ಏನೇ ಪ್ರಾರ್ಥಿಸಿಕೊಂಡರು ಸೂರ್ಯದೇವ ಕರುಣಿಸುತ್ತಾನೆ, ವರ ನೀಡುತ್ತಾನೆ. ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇಲ್ಲಿದೆ.
ಇದೀಗ ಈ ದೇವಸ್ಥಾನದಲ್ಲಿ ಯಶ್ ಅವರನ್ನು ಕಂಡ ಅಭಿಮಾನಿಗಳು ಟಾಕ್ಸಿಕ್ ಸಿನಿಮಾ ಮತ್ತೊಂದು ದೊಡ್ಡ ಸಕ್ಸಸ್ ಕಾಣುವುದು ಪಕ್ಕಾ ಆಗಲಿದೆ. ಕೆಜಿಎಫ್‌ಗಿಂತಲೂ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿದೆ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಉಜಿರೆ ಬಳಿಕ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ನಟ ಯಶ್ ಅವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಮಂಗಳೂರಿಗೆ ವಿಮಾನದಲ್ಲಿ ತೆರಳಿ ಅಲ್ಲಿಂದ ಕಾರಿನ ಮೂಲಕ ಧರ್ಮಸ್ಥಕ್ಕೆ ಯಶ್ ಆಗಮಿಸಿದ್ದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಯಶ್: ವಿಡಿಯೋ
ದೇಶವಸ್ಥಾನಕ್ಕೆ ಭೇಟಿ ಹಿನ್ನೆಲೆಯಲ್ಲಿ ನಟ ಯಶ್ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದಾರೆ. ಬಿಳಿ ಪಂಚೆ ಮತ್ತು ಬಿಳಿ ಶರ್ಟ್‌ನಲ್ಲಿ ವಿಮಾನ ನಿಲ್ದಾಣದಿಂದ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿರುವ ಯಶ್ ಅವರ ವಿಡಿಯೋ, ಫೋಟೋಗಳು ಹರಿದಾಡುತ್ತಿವೆ. ಇದನ್ನು ನೋಡಿದ ಯಶ್ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸದ್ಯ ಯಶ್ ಅವರು ಟಾಕ್ಸಿಕ್ ಸಿನಿಮಾದಲ್ಲಿ ಬ್ಯೂಸಿ ಆಗುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಆರಂಭವಾಗಲಿದೆ. ಈ ಸಂಬಂಧ ಅವರು ದೇವರ ದರ್ಶನ್ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾದ ಶೂಟಿಂಗ್ ಬಹುತೇಕ ದಿನಗಳು ಲಂಡನ್ ನಡೆಯಲಿದೆ. ಬೆಂಗಳೂರಿನ ಹೊರ ವಲಯದಲ್ಲೂ ಶೂಟಿಂಗ್‌ಗಾಗಿ ದೊಡ್ಡ ಸೆಟ್ ಹಾಕಲಾಗಿದ್ದರ ಮಾಹಿತಿ ಲಭ್ಯವಾಗಿದೆ.
Yash Boss in Mangalore Airport🔥
— Davangere Yash FC (@DavangereYashFC) August 6, 2024
On the way to Dharmasthala🙏🏻#YashBoss #TOXIC #TOXICTheMovie @TheNameIsYash #Yash #DavangereYashFC pic.twitter.com/G2lcDxyXht
ಯಶ್ ಸಿನಿಮಾದ ನಿರ್ಮಾಪಕ
'ಟಾಕ್ಸಿಕ್' ಮಾತ್ರವಲ್ಲದೇ ನಟ ಯಶ್ ಅವರು ಬಾಲಿವುಡ್‌ನಲ್ಲಿ ಹಲವು ಭಾಷೆಗಳಲ್ಲಿ ತಯಾರಾಗಲಿರುವ 'ರಾಮಾಯಣ' ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಯಶ್ ಸಹ ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ ಅವರು ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿ. ಈ ಬಗ್ಗೆ ಇನ್ನಷ್ಟು ಅಪ್ಡೇಟ್ ಸಿಗಬೇಕಿದೆ.
ಇನ್ನು ಟಾಕ್ಸಿಕ್ ಅಂದುಕೊಂಡಂತೆ ಮುಂದಿನ ಏಪ್ರಿಲ್ ವೇಳೆ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಕಾರಣ ಶೂಟಿಂಗ್ ತಡವಾಗಿ ಆರಂಭವಾಗಿದ್ದು, ಎಂದು ಹೇಳಲಾಗುತ್ತಿದೆ.
ಯಶ್ ನಡೆಗೆ ಮೆಚ್ಚುಗೆ
ಇನ್ನೂ ಯಶ್ ಧರ್ಮಸ್ಥಳ ಭೇಟಿ ವೇಳೆ ಅಭಿಮಾನಿಗಳು ಯಶ್ ನೋಡಲು ಗುಂಪುಗೂಡಿದ್ದರು. ಈ ವೇಳೆ ಫ್ಯಾನ್ ಅನ್ನು ಚದುರಿಸಿದ ಯಶ್ ಬಾಡಿಗಾರ್ಡ್ ಮೇಲೆ ಯಶ್ ಕೋಪಗೊಂಡರು. ನಂತರ ಈ ರೀತಿ ಮಾಡದಂತೆ ಹೇಳಿ, ಫ್ಯಾನ್ ಜೊತೆಗೆ ಶಾಂತಿಯುತವಾಗಿ ಯಶ್ ವರ್ತಿಸಿದ್ದಾರೆ. ಇದು ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications