Toxic Teaser: ಯಶ್ 'ಟಾಕ್ಸಿಕ್' ಟೀಸರ್ ಬಿಡುಗಡೆ ಬೆನ್ನಲ್ಲೇ ಎದುರಾಯ್ತು ಸಂಕಷ್ಟ
Toxic Teaser: ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಟೀಸರ್ ಬಿಗಡೆಯಾಗಿ 24 ಗಂಟೆಯಲ್ಲೇ 200 ಮಿಲಿಯನ್ ಅಂದರೆ 20 ಕೋಟಿ ಡಿಜಿಟಿಲ್ ವೀಕ್ಷಣೆ ಪಡೆದುಕೊಂಡಿದೆ. ಅಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಹಿನ್ನೆಲೆ ಜನವರಿ 8ರಂದು ಅವರ 'ಟಾಕ್ಸಿಕ್' ಸಿನಿಮಾ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಭಾರೀ ಕುತೂಹಲ ಸೃಷ್ಟಿಸಿತ್ತು. ಅದರಲ್ಲೂ ಟೀಸರ್‌ನಲ್ಲಿ ಕಂಡುಬಂದ ಹಸಿಬಿಸಿ ದೃಶ್ಯಗಳು ಭಾರೀ ಚರ್ಚೆಗೂ ಕಾರಣವಾಗಿವೆ. ಇದೀಗ ಕೂರಿತು ದೂರು ಕೂಡ ದಾಖಲು ಮಾಡಿದ್ದಾರೆ.

ಟಾಕ್ಸಿಕ್ ಸಿನಿಮಾಾಗೆ ಸಂಕಷ್ಟ ಎದುರಾಗಿದ್ದು, ಟಾಕ್ಸಿಕ್ ಟೀಸರ್ ಬಗ್ಗೆ ಪರ ವಿರೋಧ ಚರ್ಚೆ ತೀವ್ರವಾಗಿದೆ. ಟಾಕ್ಸಿಕ್ ಟೀಸರ್ ಬಿಡುಗಡೆಯಾದ ಬೆನ್ನೆಲೆ ಇದರಲ್ಲಿ ಅಶ್ಲೀಲತೆ ಇದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ವಕೀಲ ಲೋಹಿತ್ ಹನುಮಪುರ ಎಂಬವರು ದೂರು ಕೊಟ್ಟಿದ್ದಾರೆ. ಸಾರ್ವಜನಿಕ ನೈತಿಕತೆ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
'A' ಪ್ರಮಾಣ ಪತ್ರದೊಂದಿಗೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮಾಡುವುದು ಸೂಕ್ತ. ಟಾಕ್ಸಿಕ್ ಚಿತ್ರದ ನಿರ್ಮಾಪಕರಿಗೆ ತಕ್ಷಣ ನಿರ್ದೇಶನ ನೀಡಿ ಅಶ್ಲೀಲ ದೃಶ್ಯ ಇರುವ ಟೀಸರ್ ತೆಗೆಯಲು ಆದೇಶಿಸಬೇಕು. ಅಥವಾ ಸೂಕ್ತವಾಗಿ ತಿದ್ದುಪಡಿ ಮಾಡಲು ಆದೇಶಿಸಬೇಕು. ಇಲ್ಲವಾದರೆ ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುವಂದಿದೆ.
ಪರ-ವಿರೋಧದ ಚರ್ಚೆಗಳು: ಕನ್ನಡ ಚಿತ್ರರಂಗದ ಸ್ಟಾರ್ ನಟ ಯಶ್ ಅವರು ಹುಟ್ಟುಹಬ್ಬದಂದು 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಈ ಟೀಸರ್‌ನಲ್ಲಿರು ದೃಶ್ಯಗಳ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.
ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ಪ್ರಯುಕ್ತ ಚಿತ್ರತಂಡ ಬಹುನಿರೀಕ್ಷಿತ ಟಾಕ್ಸಿಕ್ ಟೀಸರ್ ಅನ್ನು ಜನವರಿ 8ರಂದು ಬಿಡುಗಡೆ ಮಾಡಿದೆ. ಟೀಸರ್ ಹೀಗಿದ್ದರೆ ಇನ್ನೂ ಸಿನಿಮಾ ಯಾವ ಲೆವೆಲ್‌ಗೆ ಇರಲಿದೆ ಎನ್ನುವ ಕುತೂಹಲವನ್ನು ಅಭಿಮಾನಿಗಳಲ್ಲಿ ಸೃಷ್ಟಿಸಿತ್ತು. ಆದರೆ, ಇದೀಗ ಇದರಲ್ಲಿನ ಹಸಿಬಿಸಿ ದೃಶ್ಯಗಳು ಭಾರೀ ಚರ್ಚೆಗೆ ಕಾರಣವಾಗಿವೆ.
ಸಿನಿಮಾ ಬಿಡುಗಡೆ ಯಾವಾಗ?: ಟೀಸರ್ ಮೂಲಕ ಈ ಸಿನಿಮಾ ಕುತೂಹಲ ಹುಟ್ಟುಹಾಕಿದೆ. ಗೀತು ಮೋಹನ್ದಾಸ್ ನಿರ್ದೇಶನ ಮಾಡಿರುವ ಈ ಸಿನಿಮಾ ಮಾರ್ಚ್ 19ರಂದು ತೆರೆಕಾಣಲಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ 'ಟಾಕ್ಸಿಕ್' ಚಿತ್ರತಂಡ ಇದರಲ್ಲಿನ ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿತು.
ಬಳಿಕ ಸಿನಿಮಾದಲ್ಲಿ ನಟನೆ ಮಾಡಿರುವ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ನಟಿಯರ ಪೋಸ್ಟರ್ ಹಾಗೂ ಅವರ ಪಾತ್ರಗಳ ಬಗ್ಗೆ ರಿವೀಲ್ ಮಾಡಿತ್ತು.
ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಟೈಟಲ್ ಟೀಸರ್ ಬಿಡುಗಡೆ ಆಗಿದ್ದು, ಅದರಲ್ಲಿ ಯಶ್ ಗ್ಯಾಂಗ್ ಸ್ಟರ್ ರೀತಿಯಲ್ಲಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸದ್ಯ ರಿಲೀಸ್ ಆದ ಟ್ಯಾಕ್ಸಿಕ್ ಚಿತ್ರದ ಟೀಸರ್ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಚರ್ಚೆಗೂ ಗ್ರಾಸವಾಗಿದೆ.
'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ಹಾಲಿವುಡ್ ಶೈಲಿಯ ಮೇಕಿಂಗ್ ಕಂಡುಬಂದಿದೆ. ಯಶ್ ಇಲ್ಲಿ ಬೋಲ್ಡ್ ಆ್ಯಂಡ್ ಮಾಸ್ ಲುಕ್‌ನಲ್ಲಿ ಎಂಟ್ರಿಕೊಟ್ಟಿರುವುದು ಕಂಡುಬಂದಿದೆ. ಜೊತೆಗೆ ಹಸಿಬಿಸಿ ದೃಶ್ಯಗಳು ಇದ್ದು, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಪರ ಮಾತನಾಡುತ್ತಿದ್ದಾರೆ. ಹೀಗೆ ಈ ಟೀಸರ್ ಚರ್ಚೆ ಹುಟ್ಟುಹಾಕಿದೆ.












Click it and Unblock the Notifications